Holehonnur:ಗೋವುಗಳ ಕೊಂಬು,ಮೂಳೆಗಳನ್ನು ಸಾಗಿಸುತ್ತಿದ್ದ ಲಾರಿ ವಶ
Team Udayavani, Jun 13, 2024, 10:54 PM IST
ಹೊಳೆಹೊನ್ನೂರು : ಸಮೀಪದ ಕೂಡ್ಲಿ ಕ್ರಾಸ್ ಬಳಿ ದನದ ಮಾಂಸದ ತ್ಯಾಜ್ಯ ತುಂಬಿದ ಲಾರಿಯನ್ನು ವಶಕ್ಕೆ ಪಡೆದು ತಪಾಸಣೆ ಮಾಡಲಾಗಿದೆ.
ಗುರುವಾರ ಸಂಜೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸಂಚರಿಸುವ ಲಾರಿ ಲೋಡಿನಿಂದ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ ಯುವಕರಿಬ್ಬರು ಲಾರಿಯನ್ನು ಬೆನ್ನಟಿ ಹಿಡಿಯಲು ಮುಂದಾದಗ ಲಾರಿ ಬೈಕ್ ಸವಾರರ ಮೇಲೆ ಹತ್ತಿಸಲು ಪ್ರಯತ್ನ ಪಟ್ಟಿದ್ದು, ಇದರಿಂದ ಕೋಪಗೊಂಡ ಯುವಕರು ಲಾರಿಯಲ್ಲಿ ಏನು ಇದೆ ಎಂದು ರಸ್ತೆಯಲ್ಲಿ ತಡೆದು ನಿಲ್ಲಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದನದ ತ್ಯಾಜ್ಯದ ಸುದ್ದಿ ಹರಡಿ ಕೂಡ್ಲಿ ಕ್ರಾಸ್‌ನಲ್ಲಿ ಜನ ಜಂಗುಳಿ ಉಂಟಾಗಿದೆ. ವಾಹನಗಳನ್ನು ನಿಯಂತ್ರಸುವಲ್ಲಿ ಪೊಲೀಸರು ಹೈರಾಣಾದರು.
ಪಕ್ಕದ ಚನ್ನಗಿರಿಯ ಕಸಾಯಿ ಖಾನೆಗಳಿಂದ ದನದ ಮಾಂಸದ ಕೊಂಬು ಮೂಳೆಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮಂಗಳೂರು ಮೂಲದ ಸಂಸ್ಕರಣಾ ಘಟಕಕ್ಕೆ ಸಾಗಿಸಲಾಗುತ್ತಿತ್ತು. ಲಾರಿ ಚಾಲಕ ಕಂಪನಿಗೆ ಸಂಬಂಧಿಸಿದ ಜಿಎಸ್‌ಟಿ ಬಿಲ್‌ಗಳನ್ನು ಪೊಲೀಸರಿಗೆ ನೀಡಿದ್ದು, ತಪಾಸಣೆ ನಡೆಸಿದ್ದಾರೆ. ದನದ ಮೂಳೆಗಳನ್ನು ಪುಡಿ ಮಾಡಿ ರಾಸಯನಿಕಗಳಿಗೆ ಬಳಸುವ ಉದ್ದೇಶದಿಂದ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ.
ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು ಲಾರಿಯಿಂದ ಕೆಟ್ಟ ವಾಸನೆ ಬರುತ್ತಿರುವ ಕಾರಣ ಪಟ್ಟಣದ ಹೊರವಲಯದ ಭದ್ರಾ ನದಿ ಬಳಿ ನಿಲ್ಲಿಸಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
B. Y. Raghavendra: 10 ವರ್ಷದಲ್ಲಿ ವಕ್ಫ್ ಆಸ್ತಿ ಶೇ.135 ಹೆಚ್ಚಳ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?
Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.