ಹೊಳೆಹೊನ್ನೂರು: ನವಜಾತ ಗಂಡು ಶಿಶು ಶವವಾಗಿ ಪತ್ತೆ
ಬೈಕ್ ನಲ್ಲಿ ಬಂದ ಯುವಕ-ಯುವತಿ...
Team Udayavani, Jun 20, 2024, 10:30 PM IST
ಹೊಳೆಹೊನ್ನೂರು: ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಗ್ರಾಮದ ಬನ್ನಿ ಮರದ ಹತ್ತಿರ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದೆ.
ಗುರುವಾರ ಬೆಳಗ್ಗೆ ಸುಮಾರು 9 ಗಂಟೆಯ ಸಮಯಕ್ಕೆ ಬೈಕ್ ನಲ್ಲಿ ಬಂದ ಯುವಕ-ಯುವತಿ ಗ್ರಾಮದ ಶಿವಮೊಗ್ಗದಿಂದ ಹರಿಹರ ಮಾರ್ಗದ ಬಿ.ಎಚ್. ರಸ್ತೆಯ ಪಕ್ಕದಲ್ಲಿರುವ ಬನ್ನಿ ಮರದ ಹತ್ತಿರಕ್ಕೆ ಹೋಗಿದ್ದಾರೆ. ಸ್ಥಳೀಯ ಅಂಗಡಿಯವರು ಇದನ್ನು ಗಮನಿಸಿದ್ದಾರೆ. ದಿನ ನಿತ್ಯದ ಕೆಲಸಕ್ಕೆ ಹೋಗಿರಬಹುದೆಂದು ಸುಮ್ಮನ್ನಾಗಿದ್ದಾರೆ. ನಂತರ ಅರ್ಧ ಗಂಟೆಯ ನಂತರ ವ್ಯಕ್ತಿಯೊಬ್ಬರು ದಿನನಿತ್ಯದ ಕೆಲಸಕ್ಕೆ ಹೋದಾಗ ಸ್ಥಳದಲ್ಲೇ ಹೆರಿಗೆಯಾಗಿದ್ದ ನವಜಾತ ಗಂಡು ಶಿಶು ಕಾಣಿಸಿಕೊಂಡಿದ್ದು, ಅದು ತತ್ ಕ್ಷಣವೇ ಮೃತಪಟ್ಟಿದೆ. ಒಟ್ಟಿನಲ್ಲಿ ತಾಯಿಯ ಮಡಿಲಲ್ಲಿ ಬೆಳೆಯ ಬೇಕಿದ್ದ ಹಸುಗೂಸು ತಾಯಿಯಿಂದಲೇ ಮೃತ ಪಟ್ಟಿರುವ ಘಟನೆ ನಡೆದಿದೆ.
ಸ್ಥಳಕ್ಕೆ ಆಗಮಿಸಿದ ವೈದ್ಯರ ಅಂದಾಜಿನ ಪ್ರಕಾರ ಕೆಲವೇ ನಿಮಿಷಗಳ ಹಿಂದೆ ಹೆರಿಗೆಯಾಗಿದೆ. ತತ್ ಕ್ಷಣವೇ ಮಗುವನ್ನ ಬಿಟ್ಟು ಹೋಗಿದ್ದರಿಂದ ಉಸಿರಾಟದ ತೊಂದರೆಯಿಂದಾಗಿ ಮರಣ ಹೊಂದಿರಬಹುದು. ಇಂತಹ ಹೀನ ಕೃತ್ಯವನ್ನು ಯಾರೂ ಸಹ ಮಾಡಬಾರದು ಎಂದರು.
ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸರು ಬಂದು ಸ್ಥಳ ಮಜೂರು ಮಾಡಿಕೊಂಡು ದೂರು ದಾಖಲಿಸಿಕೊಂಡಿದ್ದಾರೆ. ನಂತರ ಹೊಳಲೂರು ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಕೊಂಡ್ಯೂಯ್ದು, ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.