ಬಾರಿ ಮಳೆಗೆ ತುಂಬಿ ಹರಿದ ಭದ್ರಾ ನಾಲೆ : 150ಕ್ಕೂ ಹೆಚ್ಚು ಅಡಿಕೆ ಮರಗಳು ಧರೆಗೆ
Team Udayavani, Jul 29, 2022, 9:31 PM IST
ಹೊಳೆಹೊನ್ನೂರು: ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಭದ್ರಾ ನಾಲೆ ತುಂಬಿ ಹರಿಯುತ್ತಿರುವುದು ಕಣ್ಣಿಗೆ ರಾಚುತ್ತಿತ್ತು. ಅಲ್ಲದೇ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 150ಕ್ಕೂ ಹೆಚ್ಚು ಅಡಿಕೆ ಮರಗಳು ಬಿದ್ದಿವೆ.
ಸಮೀಪದ ಮಲ್ಲಾಪುರದ ಎಸ್.1 ನಾಲಾವು ತುಂಬಿ ಹರಿಯುತ್ತಿರುವುದರಿಂದ ಅಡಿಕೆ ತೋಟಗಳಿಗೆ ನುಗ್ಗುತ್ತಿದೆ ಅಲ್ಲದೇ ತೋಟದಲ್ಲಿರುವ ಅಡಿಕೆ ಮರಗಳು ನೆಲಕ್ಕೆ ಉರುಳುತ್ತಿವೆ. ನಾಲಾಗಳು ಮಳೆಗಾಲದ ಮುಂದೇ ಜಾಗೃತಿ ವಹಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಇರುವುದರಿಂದ ಹಾಗೂ ಭದ್ರಾ ಬಲದಂಡೆ ನೀರು ನಾಲಾಗಳಿಗೆ ಬಿಡುಗಡೆ ಮಾಡುವುದರಿಂದ ನಾಲಾಗಳು ಮಳೆ ಬಂದ ಕೂಡಲೇ ರಸ್ತೆಯ ಮೇಲೆ ಹರಿಯುತ್ತಿವೆ. ಇದರಿಂದಾಗಿ ರಸ್ತೆಗಳು ಹಾಳಾಗುವುದಲ್ಲದೇ ಜಮೀನಿಗಳಿಗೆ ನುಗ್ಗುವುದರಿಂದ ಜಮೀನಲ್ಲಿರುವ ಫಲವಂತಾದ ಮಣ್ಣು ಕೂಡ ನೀರಿನ ಜೊತೆಯಲ್ಲಿ ಹೋಗುವುದು ಎಂದು ರೈತರ ಅಳಲಾಗಿದೆ.
ನೀರಾವರಿ ಇಲಾಖೆ ಕೂಡಲೇ ಎಚ್ಚೆತ್ತು. ನಾಲಾ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ದುರಸ್ಥಿಯನ್ನು ಸರಿಪಡಿಸಿ, ಮಳೆಗಾಲದಲ್ಲಿ ನಾಲಾಗಳಿಗೆ ನೀರು ಹೆಚ್ಚು ಹರಿಸದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸುಮಾರು 7 ರಿಂದ 8 ವರ್ಷಗಳ ಕಾಲ ಬೆಳೆಸಿದ ಅಡಿಕೆ ಮರಗಳು ಬೀಳುವುದರಿಂದ ರೈತರಿಗೆ ತುಂಬ ನಷ್ಟವುಂಟಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.