ಪಿಂಪ್ ಗಳಿಂದ ಹಣ ಮಾಡಿಕೊಳ್ಳುವ ಸಂದರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವೆ :ಗೃಹ ಸಚಿವ ಆರಗ ಜ್ಞಾನೇಂದ್ರ
Team Udayavani, Jan 15, 2023, 5:37 PM IST
ತೀರ್ಥಹಳ್ಳಿ : ಒಬ್ಬ ಗೃಹ ಸಚಿವನಾಗಿ ಈ ಸ್ಥಾನದಲ್ಲಿ ಕೂರಲು ಯೋಗ್ಯತೆ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ತಾಲೂಕಿನ ಜನ ಚುನಾವಣೆಯಲ್ಲಿ 22 ಸಾವಿರ ಮತಗಳಿಂದ ಗೆಲ್ಲಿಸಿದ್ದಾರೆ. ನನ್ನ ಪಕ್ಷ ನನ್ನನ್ನು ಗೃಹ ಸಚಿವನನ್ನಾಗಿ ಮಾಡಿದೆ. ಇವತ್ತು ಏಕವಚನದಲ್ಲಿ ನನ್ನ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಯಾವತ್ತೂ ಹೇಳುತ್ತಿರುತ್ತೀನಿ ನಮ್ಮ ನಾಲಿಗೆ ನಮ್ಮ ಕುಲವನ್ನು ಹೇಳುತ್ತಂತೆ, ಅದು ನಮ್ಮ ಸಂಸ್ಕೃತಿಯನ್ನು ತೋರಿಸುತ್ತಂತೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಕಿಮ್ಮನೆ ರತ್ನಾಕರ್ ಅವರಿಗೆ ಟಾಂಗ್ ನೀಡಿದರು.
ಭಾನುವಾರ ಪಟ್ಟಣದ ಬಂಟರ ಭವನದಲ್ಲಿ ನೆಡೆದ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇರಿದ ಕಾರ್ಯಕರ್ತರ ಸೇರ್ಪಡೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪವನ್ನು ಮಾತನಾಡುತ್ತಿದ್ದಾರೆ. ನನ್ನ ಚಾರಿತ್ರ್ಯ ವಧೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ. ಪಿಎಸ್ಐ ಹಗರಣವನ್ನು ನಾನು ಹೇಗೆ ಬಯಲಿಗೆ ಎಳೆದೆ ಎಂದು ಇಡೀ ರಾಜ್ಯವೇ ನೋಡಿದೆ. ರಾಜಕೀಯವಾಗಿ ನನ್ನನ್ನು ಮುಗಿಸಬೇಕು ಎಂದು ನೋಡುವವರು ಏನು ಬೇಕಾದರೂ ಮಾಡಬಹುದು. ನಮ್ಮ ಮನೆಗೆ ನನ್ನನ್ನು ನೋಡಲು ಸಾವಿರಾರು ಜನರು ಬರುತ್ತಾರೆ. ಕಳ್ಳರು ಸುಳ್ಳರು ಯಾರು ಎಂದು ನೋಡಲು ಆಗುವುದಿಲ್ಲ. ಅವರ ಬಳಿ ಸರ್ಟಿಫಿಕೇಟ್ ತೆಗೆದುಕೊಂಡು ಒಳಗೆ ಬಿಡಲಾಗುವುದಿಲ್ಲ. ಬರುತ್ತಾರೆ ಫೋಟೋ ತೆಗೆಸಿಕೊಳ್ಳುತ್ತಾರೆ ಆಗುವುದಿಲ್ಲ ಎನ್ನಲಾಗುವುದಿಲ್ಲ ಎಂದರು.
ಸ್ಯಾಂಟ್ರೋ ರವಿ ಬಗ್ಗೆ ಮಾತನಾಡಿ ನನಗೆ ಈಗಲೂ ಆತ ಎದುರುಗಡೆ ಬಂದರೆ ಗುರುತು ಹಿಡಿಯಲಾರೆ. ವಿನಾಕಾರಣ ನನ್ನ ಹೆಸರು ಹೇಳಿ ಗೊಂದಲ ಹುಟ್ಟಿಸಿಸುತ್ತಿರುವುದು ಸರಿಯಲ್ಲ. ಇದು ಮಾಜಿ ಸಿ.ಎಂ ಅವರ ಘನತೆಗೆ ತಕ್ಕುದಲ್ಲ. ರವಿಯ ಜೊತೆಗೆ ನನಗೆ ಸಂಪರ್ಕ ಇದ್ದರೆ ಅವನನ್ನು ಬಂಧಿಸದಂತೆ ತಡೆಯುವುದು ದೊಡ್ಡ ವಿಚಾರವಾಗಿರಲಿಲ್ಲ. ಅಂಥವನ ಹತ್ತಿರ ದುಡ್ಡು ತೆಗೆದುಕೊಳ್ಳುವ ಸಂಧರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದರು.
ನನ್ನ ಗುಜರಾತ್ ಕಾರ್ಯಕ್ರಮ ಆರು ತಿಂಗಳು ಮುಂಚೆ ನಿಗದಿ ಆಗಿತ್ತು. ಅದು ಅಪರಾಧ ವಿಧಿವಿಜ್ಞಾನ ಯೂನಿವರ್ಸಿಟಿ ಶಂಕು ಸ್ಥಾಪನೆ ಕಾರ್ಯಕ್ರಮ. ಸರ್ಕಾರದ ಪ್ರತಿನಿಧಿಯಾಗಿ ಹೋಗಿದ್ದು. ಪ್ರತಿ ಕ್ಷಣ ಎಲ್ಲಿಗೆ ಹೋಗಿದ್ದೆ ಎನ್ನುವ ಮಾಹಿತಿ ಸರ್ಕಾರದ ಬಳಿ ಇರುತ್ತದೆ. ವೃಥಾ ಆರೋಪ ಮಾಡುವ ಕಿಮ್ಮನೆ ರತ್ನಾಕರ್ ಮಾಹಿತಿ ಇಟ್ಟುಕೊಂಡು ಮಾತಾಡಲಿ. ಅವರೀಗ ತೀರ್ಥಹಳ್ಳಿಯಲ್ಲಿ ಸವೆದು ಹೋದ ನಾಣ್ಯವಾಗಿದ್ದಾರೆ. ಅವರ ಪಕ್ಷದ ಕಾರ್ಯಕರ್ತರೇ ಕಿಮ್ಮನೆ ನಾಯಕತ್ವ ಒಪ್ಪದೆ ಬೇಷರತ್ ಆಗಿ ಬಿಜೆಪಿಗೆ ಸೇರುತ್ತಿದ್ದಾರೆ. ಇದರಿಂದ ಅವರು ಕಂಗೆಟ್ಟು ಹೋಗಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಸಂಬದ್ಧವಾಗಿ ಮಾತಾಡುವ ಸ್ಥಿತಿ ತಲುಪಿದ್ದಾರೆ ಎಂದರು.
ಪಿಎಸ್ಐ ಹಗರಣ ಆದಾಗ ಈ ತಾಲೂಕಿಗೆ ಅವಮಾನ ಆಯ್ತು ಅಂತ ಹೇಳಿದ್ರಿ. ಮಾಧ್ಯಮಗಳಲ್ಲಿ ಬಂದಾಗ ಗೋಪಾಲಗೌಡರಿಗೆ, ಕಡಿದಾಳು ಮಂಜಪ್ಪನವರಿಗೆ ಅವಮಾನ ಆಯ್ತು ಅಂದ್ರಿ. ನೀವು ಮಂತ್ರಿಯಾಗಿದ್ದಾಗ ಶಿಕ್ಷಕರ ನೇಮಕಾತಿಯಲ್ಲಿ ಅರ್ಜಿ ಹಾಕದೆ ಇದ್ದವರು ಶಿಕ್ಷಕರದಾರಲ್ಲ. ಮೊನ್ನೆ ಪಾಠ ಮಾಡುತ್ತಿದ್ದ ಶಿಕ್ಷಕರನ್ನು ಎಳೆದು ತಂದರಲ್ಲ ನೀವು ಮುಚ್ಚಿಟ್ಟು ಬಂದ್ರಿ ಯಾಕೆ ? ನನ್ನ ಕಾಲದಲ್ಲಿ ಪಿಎಸ್ಐ ಹಗರಣ ಆಗಿರಬಹುದು ಆದರೆ ಮುಚ್ಚಿಟ್ಟಿಲ್ಲ ನಿಮ್ಮ ತರ. ಮುಚ್ಚಿಟ್ಟಿದ್ದು ಯಾಕೆ ? ಎಷ್ಟಕ್ಕೆ ಡೀಲ್ ಆದ್ರಿ ?
ಇವತ್ತು 45 ಜನ ಅರೆಸ್ಟ್ ಆಗಿದ್ದಾರೆ. ಅವತ್ತು ಅವಮಾನ ಆಗಿಲ್ಲವಾ ತಾಲೂಕಿಗೆ, ಕಡಿದಾಳ್ ಮಂಜಪ್ಪನವರಿಗೆ, ತೀರ್ಥಹಳ್ಳಿಯ ಸುಸಂಸ್ಕೃತ ಜನರಿಗೆ. ಪಿಯುಸಿ ಪ್ರೆಶ್ನೆ ಪತ್ರಿಕೆ ಲಿಕ್ ಔಟ್ ಆಯ್ತು ಹತ್ತಾರು ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ನಾಲ್ಕು ಬಾರಿ ಪರೀಕ್ಷೆ ಮುಂದೆ ಹೋಯಿತು ನಿಮ್ಮ ಕಾಲದಲ್ಲಿಯೇ ಅಲ್ಲವಾ ಎಂದು ವಾಗ್ದಾಳಿ ನೆಡೆಸಿದರು.
ಆರ್ ಎಂ ಬಿಸ್ಎ ಬಿಲ್ಡಿಂಗ್ ಬಸವಾನಿ, ಕಟ್ಟೆಹಕ್ಲು ಕೋಣಂದೂರು, ಮೇಗರವಳ್ಳಿ, ಮಾಳೂರು ಸಿಂಗನಬಿದರೆ, ಸೊಂನ್ಲೆ, ಮಂಡಗದ್ದೆಯಲ್ಲಿ ಇತ್ತು. ನೀವು ಯಾಕೆ ಮಂತ್ರಿಯಾಗಿದ್ದಾಗ ಕಂಪ್ಲೀಟ್ ಮಾಡಿಲ್ಲ.ಕಂಟ್ರಾಕ್ಟರ್ ನ ಆಂಧ್ರಪ್ರದೇಶಕ್ಕೆ ಹೋಗಲು ಯಾಕೆ ಬಿಟ್ರಿ. ಇದರಲ್ಲಿ ನಿಮ್ಮದೇನಿತ್ತು ಹೊರಗೆ ಬರ್ಲಿ. ಹೇಳಿ ಜನರಿಗೆ. ನಿಮ್ಮ ಕೈವಾಡ ಇಲ್ಲ ಅಂತ ಹೇಳ್ತೀರಾ ? ನಾನು ಸಚಿವನಾದ ಮೇಲೆ ಹೋರಾಡಿ ಬಿಲ್ಡಿಂಗ್ ಕಂಪ್ಲೀಟ್ ಮಾಡಿದ್ದೇನೆ. ಎರಡು ವರ್ಷ ಎಂಎಲ್ಎ ಆಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೂ ನಿಮ್ಮ ಹೊಲಸನ್ನು ತೊಳೆದಿದ್ದೇನೆ ಎಂದು ಕಿಮ್ಮನೆ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ಮಲ್ಲೇಕಾವು ಅಂಚೆ ಇಲಾಖೆಯ ತುರ್ತುಸೇವೆ ಸ್ಥಗಿತ: ಕಚೇರಿಯಲ್ಲೇ ಉಳಿದ ದಾಖಲೆಗಳು, ಜನರ ಪರದಾಟ
ನೀವು ಹೇಗೆ ಅಧಿಕಾರ ಮಾಡಿದ್ರಿ, ನಾನು ಹೇಗೆ ಅಧಿಕಾರ ಮಾಡಿದ್ದೇನೆ ನಾನು ಎದೆ ತಟ್ಟಿ ಹೇಳಿಕೊಳ್ಳುತ್ತೇನೆ. ಅವರು ಯಾವಾಗಲು ಒಂದು ಮಾತು ಹೇಳುತ್ತಿರುತ್ತಾರೆ ಗುಮ್ಮಿ ಭಾವಿ ನೀರು ಕುಡಿತಿದ್ದೆ ಅಂತಿದ್ರು. ಅಂದ್ರೆ ಸಾಯೋ ತನಕ ಎಲ್ರು ಗುಮ್ಮಿ ಭಾವಿ ನೀರು ಕುಡಿಬೇಕು ನೀವು ಮಾತ್ರ ಚಿನ್ನದ ಚಮಚದಲ್ಲಿ ಊಟ ಮಾಡಬೇಕಾ ? ಈ ಬಡವರು ಉದ್ದಾರ ಆದ್ರೆ ಇವರು ಸಹಿಸೋದಿಲ್ಲ.ಸಾಲುರಲ್ಲಿ ಹೇಳ್ತಾ ಇದ್ದರು. ಅವರ ಎದುರು ಒಳ್ಳೆ ಬಟ್ಟೆ ಹಾಕಿಕೊಂಡು ಹೋಗಬೇಡಿ ಹೋದರೆ ಅವನು ಗಂಧ ಕಡಿದಿದ್ದಾನೆ ಅಂತ ಹೇಳ್ತಾರೆ. ಯಾರ ಏಳಿಗೆಯನ್ನು ಸಹಿಸದ ವಿಷ ಮನಸಿನ ವೆಕ್ತಿಗಳು ಇವರು ಎಂದು ವಾಗ್ದಾಳಿ ನೆಡೆಸಿದರು.
ನನ್ನ ಚಾರಿತ್ರ್ಯ ವಧೆ ಮಾಡಿ ನೀವು ದೊಡ್ಡವರಾಗಬಹುದು ಎಂದು ತಿಳಿದುಕೊಂಡಿಲ್ಲ. ನಿಮ್ಮ ಪಕ್ಷಾಂತರ ಪ್ರಕ್ರಿಯೆ ಎಲ್ಲರಿಗೂ ಕೂಡ ಗೊತ್ತಿತ್ತು. ನೀವೇನು ಬಹಳ ಶೀಲಾವಂತರಲ್ಲ. ನಿಮ್ಮ ಚಾರಿತ್ರ್ಯ ಒಳ್ಳೆದಿಲ್ಲ. ಯಾವ ಪಕ್ಷದಲ್ಲಿದ್ರಿ, ಅಲ್ಲೇನು ಭಾಷಣ ಮಾಡ್ತಿದ್ರಿ. ಇಲ್ಲಿ ಇವಾಗ ಬಂದು ಏನು ಮಾಡುತ್ತಿದ್ದೀರಾ ನೀವು ಬಾರಿ ಸಾಭಿತಾ.
ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷಕ್ಕೆ ಬರುತ್ತಾರೆ ಅಂತ ಗೊತ್ತಾದ ಕೂಡಲೇ 10 ಲಕ್ಷ 15 ಲಕ್ಷ ಅಂತ ಅವರೇ ಫಿಕ್ಸ್ ಮಾಡುತ್ತಿದ್ದಾರೆ. ಇವರೆಲ್ಲ ಬಡತನದಿಂದ ಬಂದಿದ್ದಾರೆ ಎಂದು ಅವಮಾನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಪಕ್ಷದಿಂದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಹೊಸಹಳ್ಳಿ ಸುಧಾಕರ್, ಬಿದರಗೋಡು ಗ್ರಾಮಪಂಚಾಯಿತಿ ಅಧ್ಯಕ್ಷರಾದ ವೆಂಕಟೇಶ್, ಸದಸ್ಯರಾದ ಪುಷ್ಪವತಿ, ಆಗುಂಬೆ ಗ್ರಾಮಪಂಚಾಯಿತಿ ಸದಸ್ಯ ಜಗದೀಶ್ ಮಳಲಿ, ಅರ್ಜುನ್ ಹೊಸಳ್ಳಿ, ಕೇಶವ ಕಾಸರವಳ್ಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬಾಳೆಬೈಲು ರಾಘವೇಂದ್ರ, ಚಕ್ಕೊಡಬೈಲು ರಾಘವೇಂದ್ರ, ನವೀನ್ ಹೆದ್ದೂರು, ಕುಕ್ಕೆ ಪ್ರಶಾಂತ್, ಸಾಲೇಕೊಪ್ಪ ರಾಮಚಂದ್ರ ಸೇರಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?
CIDಗೆ ಹೆಬ್ಬಾಳ್ಕರ್ ಮಾಹಿತಿ: ಶೀಘ್ರ ಸಿ.ಟಿ. ರವಿ ವಿಚಾರಣೆ?
Congress; ಪರಿಷತ್ ನಾಮನಿರ್ದೇಶನಕ್ಕೆ ಆಕಾಂಕ್ಷಿಗಳಿಂದ ಲಾಬಿ
ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.