ತಾರಗೊಳ್ಳಿ ನಾಗರಾಜ ರಾಯರ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ
Team Udayavani, Aug 8, 2021, 5:04 PM IST
ತೀರ್ಥಹಳ್ಳಿ: ಚಿಕ್ಕ ವಯಸ್ಸಿನಲ್ಲಿ ಬಡತನ ಕಷ್ಟದಲ್ಲಿದ್ದ ಜ್ಞಾನೇಂದ್ರ ರವರಿಗೆ ಸಂಕಷ್ಟದ ಸಮಯದಲ್ಲಿ ಅನ್ನ, ಆಶ್ರಯ ನೀಡಿ ಸಂಘಟನೆಯ ಸಹಕಾರದಿಂದ ಜನನಾಯಕನಾಗಿ ರೂಪಿಸಿದ ತಾರಗೊಳ್ಳಿ ನಾಗರಾಜರಾಯರನ್ನು ಸನ್ಮಾನ್ಯ ಆರಗ ಜ್ಞಾನೇಂದ್ರರವರು ಪದೇ ಪದೇ ಎಲ್ಲ ವೇದಿಕೆಗಳಲ್ಲೂ ಸ್ಮರಿಸಿಕೊಳ್ಳುತ್ತಾರೆ.
ಇದನ್ನೂ ಓದಿ : ಯಾವುದರಲ್ಲಿ ಹೊಡಿತಾರೋ ಅದರಲ್ಲಿಯೇ ಹೊಡೆದು ಒಂದಕ್ಕೆ ಎರಡು ತೆಗೆದುಬಿಡಿ: ಈಶ್ವರಪ್ಪ
ಇಂದು(ಭಾನುವಾರ, ಆಗಸ್ಟ್ 8) ಬೆಳಿಗ್ಗೆ ತಮ್ಮ ಗುಡ್ಡೆಕೊಪ್ಪದ ಮನೆಯ ಎದುರು ಯಾರೂ ನಿರೀಕ್ಷಿಸದೇ ಇರುವ ಖಾತೆ ಪಡೆದಿರುವ ಸಚಿವರಾದ ಸಂತಸದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಅಭಿನಂದನೆ ತಿಳಿಸಲು ಬಂದಿದ್ದು ಗುಡ್ಡೇಕೊಪ್ಪದಿಂದ ಜೈಪುರದವರೆಗೆ ರಸ್ತೆಯ ಎರಡೂ ಬದಿಗಳು ವಾಹನದಿಂದ ಕೂಡಿತ್ತು ಆದರೆ ಆರಗ ಜ್ಞಾನೇಂದ್ರರವರು ಮೊದಲು ತಾನು ಈ ಎತ್ತರಕ್ಕೆ ಬೆಳೆಯಲು ಕಾರಣವಾಗಿದ್ದ ತನ್ನ ಪಾಲಿನ ದೇವರು ತಾರಗೊಳ್ಳಿ ನಾಗರಾಜರಾಯರ ಮನೆಗೆ ತೆರಳಿ ದಂಪತಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ನಂತರ ಗೃಹಸಚಿವರು ನಾಗರಾಜರಾಯರ ಕುಟುಂಬಸ್ಥರೊಂದಿಗೆ ಕುಶಲೋಪರಿ ವಿಚಾರಿಸಿದರು.
ತಮ್ಮ ಕುಟುಂಬದ ಹಿರಿಯರ ಉಪಕಾರವನ್ನು ಗೃಹಸಚಿವರಾದ ಸಂದರ್ಭದಲ್ಲೂ ಮರೆಯದೇ ತಾನು ಬೆಳೆದ ಮನೆಗೆ ಆಗಮಿಸಿದ ಗೃಹ ಸಚಿವ ಜ್ಞಾನೇಂದ್ರರವರನ್ನು ಕುಟುಂಬದ ಸದಸ್ಯರು ಬಹಳ ಸಂತೋಷದಿಂದ ಸಚಿವರನ್ನು ಅಭಿನಂದಿಸಿದರು.
ಇದನ್ನೂ ಓದಿ : ನಿಮ್ಮ ಭಾವನೆಯ ಆ ಮೂರು ಅಂಶಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲ..! ಆ ಅಂಶಗಳ್ಯಾವುವು..?
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.