Hosanagar: ಶತಾಯುಷಿ ಮೀನಜ್ಜ ಅಪಘಾತಕ್ಕೆ ಬಲಿ

ಸ್ವಾವಲಂಬಿ ಬದುಕು ಕಂಡ ದೇವರಿಗೆ ಹುಲಿಕಲ್ ಜನರ ಕಂಬನಿ

Team Udayavani, Nov 11, 2024, 3:46 PM IST

3

ಹೊಸನಗರ: ಹುಲಿಕಲ್ ನಿವಾಸಿ 102 ವರ್ಷದ ಮೀನಜ್ಜ ಅಲಿಯಾಸ್ ಕೃಷ್ಣ ದೇವರು ಎಂಬುವವರು ಭಾನುವಾರ (ನ.10) ರಸ್ತೆ ಅಪಘಾತಕ್ಕೆ ಮರಣಹೊಂದಿದ ಘಟನೆ ನಡೆದಿದೆ.

ರಾತ್ರಿ 8 ರಿಂದ 8.30ರ ಸುಮಾರಿಗೆ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ವೇಳೆ ಕಾರು ಮತ್ತು ಟ್ಯಾಂಕರ್ ಓವರ್ ಟೇಕ್ ಮಾಡುವ ಭರದಲ್ಲಿ ಮೀನಜ್ಜನಿಗೆ ಡಿಕ್ಕಿ ಹೊಡೆದ ಪರಿಣಾಮ ಮೀನಜ್ಜ ತೀವ್ರ ಗಾಯಗೊಂಡಿದ್ದು ನಗರ ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿದ್ದಾರೆ.

ಹಿಟ್ ಅಂಡ್ ರನ್:
ಅಪಘಾತ ಸಂಭವಿಸಿದರು ಕೂಡ ಕಾರು ನಿಲ್ಲಿಸದೇ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸುಧೀರ್ಘ ಸ್ವಾವಲಂಬಿ ಬದುಕು:
ಮೀನು ಹಿಡಿದು, ಮಾರಾಟ ಮಾಡಿ‌ ಬದುಕು ಕಟ್ಟಿಕೊಂಡಿದ್ದ ಮೀನಜ್ಜ ಹುಲಿಕಲ್ ನಲ್ಲಿ ತಾವೇ ನಿರ್ಮಿಸಿಕೊಂಡ ಶೆಡ್ ನಲ್ಲಿ ವಾಸ ಮಾಡಿಕೊಂಡಿದ್ದರು. ಪತ್ನಿಯನ್ನು ಕಳೆದುಕೊಂಡು ಏಕಾಂಗಿಯಾಗಿದ್ದ ಮೀನಜ್ಜ ಕಾರವಾರದಲ್ಲಿರುವ ಮೊಮ್ಮಕ್ಕಳು ಕರೆದರೂ ಹೋಗದೇ ಸ್ವಾವಲಂಬಿ‌ ಬದುಕು ಸಾಗಿಸುತ್ತಿದ್ದರು.

ಘಟನೆ ತಿಳಿಯುತ್ತಿದ್ದಂತೆ ಸಿಪಿಐ ಗುರಣ್ಣ ಎಸ್ ಹೆಬ್ಬಾಳ, ಪಿಎಸ್ಐ ಶಿವಾನಂದ್ ಕೋಳಿ ಸಿಎಂ ಬಂದೋಬಸ್ತ್ ಗೆ ತೆರಳಿದ್ದ ಕಾರಣ ಎಎಸ್ಐ ಕುಮಾರ್, ಮಾಸ್ತಿಕಟ್ಟೆ ಉಪಠಾಣೆ ಸಿಬ್ಬಂದಿ ಅರುಣೋದಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಿಟ್ ಅಂಡ್ ರನ್ ಮಾಡಿದ ಕಾರಿನ ಶೋಧ ಕಾರ್ಯ ಆರಂಭಿಸಿದ್ದಾರೆ.

ಮೀನಜ್ಜ ಕೃಷ್ಣ ದೇವರಿಗೆ ಓರ್ವ ಮಗನಿದ್ದು ಆತ ಕೂಡ ಹಿಂದೆಯೇ ಸಾವನ್ನಪ್ಪಿದ್ದಾರೆ. ಕಾರವಾರದಲ್ಲಿ ಅವರ ಮೊಮ್ಮಕ್ಕಳು ವಾಸಿಸುತ್ತಿದ್ದು ಅಜ್ಜನ ಸಾವಿನ ಸುದ್ದಿ ಕೇಳಿ ಹುಲಿಕಲ್ ಗೆ ದೌಡಾಯಿಸಿದ್ದಾರೆ. ಮೃತದೇಹ ನಗರ ಆಸ್ಪತ್ರೆಯ ಶವಾಗಾರದಲ್ಲಿದ್ದು ಮರಣೋತ್ತರ ಪರೀಕ್ಷೆಯ ಬಳಿಕ ಹುಲಿಕಲ್ ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಮೊಮ್ಮಕ್ಕಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

CM Siddaramaiah: ಬಂಡೀಪುರದಲ್ಲಿ ರಾತ್ರಿ ಸಂಚಾರದ ಬಗ್ಗೆ ಚರ್ಚೆಯಾಗಿಲ್ಲ

CM Siddaramaiah: ಬಂಡೀಪುರದಲ್ಲಿ ರಾತ್ರಿ ಸಂಚಾರದ ಬಗ್ಗೆ ಚರ್ಚೆಯಾಗಿಲ್ಲ

Rajasthan: ಕರ್ತವ್ಯದಲ್ಲಿದ್ದ ಅಧಿಕಾರಿ ಮೇಲೆ ಅಭ್ಯರ್ಥಿ ಹಲ್ಲೆ

Rajasthan: ಕರ್ತವ್ಯದಲ್ಲಿದ್ದ ಅಧಿಕಾರಿ ಮೇಲೆ ಅಭ್ಯರ್ಥಿ ಹಲ್ಲೆ

ಝಾರ್ಖಂಡ್‌ ಅಸೆಂಬ್ಲಿ: ಮೊದಲ ಹಂತದಲ್ಲಿ  ಶೇ.65 ಮತದಾನ, ಕಳೆದ ಬಾರಿಗಿಂತ ಹೆಚ್ಚು

ಝಾರ್ಖಂಡ್‌ ಅಸೆಂಬ್ಲಿ: ಮೊದಲ ಹಂತದಲ್ಲಿ  ಶೇ.65 ಮತದಾನ, ಕಳೆದ ಬಾರಿಗಿಂತ ಹೆಚ್ಚು

ಉಪಚುನಾವಣೆ: ಬಂಗಾಲದಲ್ಲಿ ಹಿಂಸೆ, ಟಿಎಂಸಿ ನಾಯಕ ಸಾವು

ಉಪಚುನಾವಣೆ: ಬಂಗಾಲದಲ್ಲಿ ಹಿಂಸೆ, ಟಿಎಂಸಿ ನಾಯಕ ಸಾವು

ತಾಯಿಹಾಲು ಮಾರಾಟ: ಪರವಾನಿಗೆ ರದ್ದತಿಗೆ ಸೂಚನೆ; ಹೈಕೋರ್ಟ್‌ಗೆ ಕೇಂದ್ರ ಸರಕಾರದ ಮಾಹಿತಿ

ತಾಯಿಹಾಲು ಮಾರಾಟ: ಪರವಾನಿಗೆ ರದ್ದತಿಗೆ ಸೂಚನೆ; ಹೈಕೋರ್ಟ್‌ಗೆ ಕೇಂದ್ರ ಸರಕಾರದ ಮಾಹಿತಿ

By-election: 3 ಕ್ಷೇತ್ರದಲ್ಲೂ ಮತದಾನಕ್ಕೆ ಮತದಾರರ ಹುಮ್ಮಸ್ಸು

By-election: 3 ಕ್ಷೇತ್ರದಲ್ಲೂ ಮತದಾನಕ್ಕೆ ಮತದಾರರ ಹುಮ್ಮಸ್ಸು

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K. S. Eshwarappa: ಮುಸ್ಲಿಮರಿಗೆ ಮೀಸಲು ನೀಡಿದರೆ ಸಂತರ ನೇತೃತ್ವದಲ್ಲಿ ದಂಗೆ

K. S. Eshwarappa: ಮುಸ್ಲಿಮರಿಗೆ ಮೀಸಲು ನೀಡಿದರೆ ಸಂತರ ನೇತೃತ್ವದಲ್ಲಿ ದಂಗೆ

Shivamogga: ತೆಪ್ಪ ಮಗುಚಿ ಶರಾವತಿ ಹಿನ್ನೀರಿನಲ್ಲಿ ಮೂವರು ಯುವಕರು ನಾಪತ್ತೆ

Shivamogga: ತೆಪ್ಪ ಮಗುಚಿ ಶರಾವತಿ ಹಿನ್ನೀರಿನಲ್ಲಿ ಮೂವರು ಯುವಕರು ನಾಪತ್ತೆ

Shivamogga: ಡಿವೈಡರ್ ಏರಿದ ನಗರ ಸಾರಿಗೆ ಬಸ್: ಎರ್ಮೆಜೆನ್ಸಿ ಡೋರ್ ಮೂಲಕ ಇಳಿದ ಪ್ರಯಾಣಿಕರು

Shivamogga: ಡಿವೈಡರ್ ಏರಿದ ನಗರ ಸಾರಿಗೆ ಬಸ್: ಎಮರ್ಜೆನ್ಸಿ ಡೋರ್ ಮೂಲಕ ಇಳಿದ ಪ್ರಯಾಣಿಕರು

Ripponpete

Ripponpete: ಖಾಸಗಿ ಬಸ್‌ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

20-sagara

Sagara: ಬೈಕ್‌ಗೆ ಕಾರು ಡಿಕ್ಕಿ; ಬೈಕ್ ಸವಾರ ಸಾವು

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

CM Siddaramaiah: ಬಂಡೀಪುರದಲ್ಲಿ ರಾತ್ರಿ ಸಂಚಾರದ ಬಗ್ಗೆ ಚರ್ಚೆಯಾಗಿಲ್ಲ

CM Siddaramaiah: ಬಂಡೀಪುರದಲ್ಲಿ ರಾತ್ರಿ ಸಂಚಾರದ ಬಗ್ಗೆ ಚರ್ಚೆಯಾಗಿಲ್ಲ

Rajasthan: ಕರ್ತವ್ಯದಲ್ಲಿದ್ದ ಅಧಿಕಾರಿ ಮೇಲೆ ಅಭ್ಯರ್ಥಿ ಹಲ್ಲೆ

Rajasthan: ಕರ್ತವ್ಯದಲ್ಲಿದ್ದ ಅಧಿಕಾರಿ ಮೇಲೆ ಅಭ್ಯರ್ಥಿ ಹಲ್ಲೆ

ಝಾರ್ಖಂಡ್‌ ಅಸೆಂಬ್ಲಿ: ಮೊದಲ ಹಂತದಲ್ಲಿ  ಶೇ.65 ಮತದಾನ, ಕಳೆದ ಬಾರಿಗಿಂತ ಹೆಚ್ಚು

ಝಾರ್ಖಂಡ್‌ ಅಸೆಂಬ್ಲಿ: ಮೊದಲ ಹಂತದಲ್ಲಿ  ಶೇ.65 ಮತದಾನ, ಕಳೆದ ಬಾರಿಗಿಂತ ಹೆಚ್ಚು

ಉಪಚುನಾವಣೆ: ಬಂಗಾಲದಲ್ಲಿ ಹಿಂಸೆ, ಟಿಎಂಸಿ ನಾಯಕ ಸಾವು

ಉಪಚುನಾವಣೆ: ಬಂಗಾಲದಲ್ಲಿ ಹಿಂಸೆ, ಟಿಎಂಸಿ ನಾಯಕ ಸಾವು

ತಾಯಿಹಾಲು ಮಾರಾಟ: ಪರವಾನಿಗೆ ರದ್ದತಿಗೆ ಸೂಚನೆ; ಹೈಕೋರ್ಟ್‌ಗೆ ಕೇಂದ್ರ ಸರಕಾರದ ಮಾಹಿತಿ

ತಾಯಿಹಾಲು ಮಾರಾಟ: ಪರವಾನಿಗೆ ರದ್ದತಿಗೆ ಸೂಚನೆ; ಹೈಕೋರ್ಟ್‌ಗೆ ಕೇಂದ್ರ ಸರಕಾರದ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.