ಮಾಸ್ಕ್ ಧರಿಸಿ ಮದುವೆ
Team Udayavani, Jun 15, 2020, 4:16 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸನಗರ: ಕೋವಿಡ್ ತಡೆಗಟ್ಟುವಲ್ಲಿ ಮಾಸ್ಕ್ ಧಾರಣೆ ಮತ್ತು ವೈಯಕ್ತಿಕ ಅಂತರ ಕಾಪಾಡುವುದು ಕಡ್ಡಾಯ ಎಂಬುದು ಜಾಗೃತಿಯ ಮಾತು. ಮದುವೆ ಸಮಾರಂಭದಲ್ಲಿ ಮಾಸ್ಕ್ ಧರಿಸಿ ಮದುವೆ ಆದ ಮದುಮಕ್ಕಳ ಕುರಿತಾಗಿ ಕಾರ್ಟೂನ್ ನಲ್ಲಿ ನೋಡಿದ್ದೇವೆ. ಆದರೆ ತಾಲೂಕಿನ ಕಾರಣಗಿರಿಯ ಫೋಟೋಗ್ರಾಫರ್ ಒಬ್ಬರು ತಮ್ಮ ಮದುವೆಯಲ್ಲಿ ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಂಡು ಮದುವೆ ಆಗಿ ಜಾಗೃತಿ ಮೆರೆದಿದ್ದಾರೆ.
ಹೊಸನಗರ ಪಟ್ಟಣದ ಮಾರಿಗುಡ್ಡ ನಿವಾಸಿ ಗಿರಿಜಾ ಸುಬ್ರಾಯ ಶೇರಿಗಾರ್ ಅವರ ಪುತ್ರ ಪ್ರಶಾಂತ್ ಹಾಗೂ ಸಾವಿತ್ರಿ ರಾಜು ಅವರ ಪುತ್ರಿ ವಿದ್ಯಾ ಅವರ ವಿವಾಹವು ಇಲ್ಲಿನ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಸರಳವಾಗಿ ನಡೆಯಿತು. ಮದುಮಕ್ಕಳು ಸಮಾರಂಭದ ಕೊನೆವರೆಗೂ ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಂಡಿದ್ದು ಗಮನ ಸೆಳೆಯಿತು. ಸ್ಥಳೀಯ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮದುವೆಯಲ್ಲಿ ಬಾಗವಹಿಸಿ ಶುಭ ಕೋರಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.