ರಾಜೇಶ್ವರಿಗೆ ಕಾರಿಟಾಸ್ ಇಂಡಿಯಾ ಅವಾರ್ಡ್
Team Udayavani, Mar 17, 2022, 8:19 PM IST
ಹೊಸನಗರ: ಕೋವಿಡ್ 19 ವಿಷಮಪರಿಸ್ಥಿತಿಯಲ್ಲಿ ಕೊರೊನಾ ವಾರಿಯರ್‌ಆಗಿ ಗ್ರಾಮೀಣ ಭಾಗದಲ್ಲಿ ಉತ್ತಮಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿತಾಲೂಕಿನ ನಗರ ದುಬಾರತಟ್ಟಿಯರಾಜೇಶ್ವರಿಗೆ ಕಾರಿಟಾಸ್ ಇಂಡಿಯಾಅವಾರ್ಡ್ ನೀಡಿ ಗೌರವಿಸಲಾಗಿದೆ.2020-21 ಸಾಲಿನ ಕಾರಿಟಾಸ್‌ಇಂಡಿಯಾ ಅವಾರ್ಡ್‌ಗೆ ದೇಶದಲ್ಲಿ5 ಜನರು ಆಯ್ಕೆಯಾಗಿದ್ದು, ಇದರಲ್ಲಿರಾಜೇಶ್ವರಿ ಕೂಡ ಒಬ್ಬರಾಗಿದ್ದಾರೆ.
ಅಲ್ಲದೆರಾಜ್ಯದಲ್ಲಿ ಈ ಅವಾರ್ಡ್‌ಗೆ ಭಾಗಿಯಾದಏಕೈಕ ಮಹಿಳೆ ಎನಿಸಿಕೊಂಡಿದ್ದಾರೆ.ತಾಲೂಕಿನ ನಗರ ಭಾಗದಲ್ಲಿ ಕೊರೊನಾವಾರಿಯರ್ ಆಗಿ ಕ್ವಾರಂಟೈನ್ ಮತ್ತುಕೋವಿಡ್ ಲಸಿಕೆ ವಿತರಣೆ, ಔಷ ಧಿಸರಬರಾಜು, ಕೊರೊನಾ ಜಾಗೃತಿಸಲುವಾಗಿ ಗ್ರಾಮಗಳ ಹಿತದೃಷ್ಟಿಯಿಂದಉತ್ತಮ ಕೆಲಸ ಮಾಡಿದ್ದು, ಮೂಡುಗೊಪ್ಪಗ್ರಾಪಂ ಮತ್ತು ಶಿವಮೊಗ್ಗದ ಸೋಶಿಯಲ್‌ಮಲ್ಟಿಪರ್ಪಸ್ ಸೊಸೈಟಿ ವತಿಯಿಂದಕಾರಿಟಾಸ್ ಇಂಡಿಯಾ ಅವಾರ್ಡ್‌ನಾಮಿನೇಟ್ ಮಾಡಲಾಗಿತ್ತು.
ಕೋವಿಡ್ ಸಂದರ್ಭದಲ್ಲಿಬಡಕೂಲಿಕಾರ್ಮಿಕರಿಗೆ ಸಕಾಲಕ್ಕೆಮಾಹಿತಿ ನೀಡುವ ಮೂಲಕ ಉತ್ತಮಕಾರ್ಯನಿರ್ವಹಿಸಿದ್ದ ರಾಜೇಶ್ವರಿ ಅವರಿಗೆಅವಾರ್ಡ್ ಲಭಿಸಿದ್ದು ಮೂಡುಗೊಪ್ಪಗ್ರಾಪಂಗೆ ಹಿರಿಮೆ ತಂದಂತಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.