ಮುಸಲಧಾರೆಯ ಊರಲ್ಲಿ ನೀರಿಗೆ ಬರ!

ಹಿನ್ನೀರು ತುಂಬಿ ನಿಂತ ತಾಣದಲ್ಲೂ ನೀರಿಗೆ ಹಾಹಾಕಾರಹೊಸನಗರ ತಾಲೂಕಿನ ಕುಡಿವ ನೀರಿನ ಕಥೆ-ವ್ಯಥೆ

Team Udayavani, Mar 18, 2020, 3:45 PM IST

18-March-15

ಹೊಸನಗರ: ಮಳೆಗಾಲ ಬಂತೆಂದರೆ.. ಧೋ.. ಎಂದು ಒಂದೇ ಸಮನೆ ಸುರಿಯುವ ವರ್ಷಧಾರೆ. ಸುತ್ತಲೂ ಸಾಗರದಂತೆ ಕಂಡುಬರುವ ಹಿನ್ನೀರು. ಬಿರುಬೇಸಿಗೆ ಬಂತೆಂದರೆ ಕುಡಿಯುವ ನೀರಿಗಾಗಿ ಹಾಹಾಕಾರ!

ಹೌದು ಸಮುದ್ರದ ನೆಂಟಸ್ಥನವಿದ್ದರೂ..ಉಪ್ಪಿಗೆ ಬಡತನ ಎಂಬಂತಾಗಿದೆ ಹೊಸನಗರ ತಾಲೂಕಿನ ಕುಡಿಯುವ ನೀರಿನ ಪರಿಸ್ಥಿತಿ. ಕ್ಷೇತ್ರವಾರು ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರಕ್ಕೆ ಹರಿದು ಹಂಚಿ ಹೋಗಿರುವ ಹೊಸನಗರ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕಳೆದ
ವರ್ಷ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಅತಿಹೆಚ್ಚು ಮಳೆ ಬೀಳುವ ಪ್ರದೇಶವಾದ ಹುಲಿಕಲ್‌ ನಲ್ಲೂ ನೀರಿಗಾಗಿ ಜನ ಪರದಾಡಿದ್ದರು.

ಸದ್ಯದ ಸ್ಥಿತಿ: ಕಳೆದ ವರ್ಷಕ್ಕೆ ಹೋಲಿಸಿದರೆ ಹೊಸನಗರ ತಾಲೂಕಿನಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ ಎನ್ನಬಹುದು. ಆದರೆ ಮುಂಬರುವ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ನೀರಿನ ಕೊರತೆ ಕಂಡು ಬರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ತಾಪಮಾನ ಕೂಡ ಅಧಿಕವಾಗುತ್ತಿದ್ದು ಮುಂಗಾರು ತಡವಾಗಿ ಆರಂಭವಾಗಿದ್ದೇ ಆದಲ್ಲಿ ಕಳೆದ ಬಾರಿಯಂತೆ ತಾಲೂಕಿನ ಹಲವು ಗ್ರಾಮಗಳು ಕುಡಿವ ನೀರಿನ ಸಮಸ್ಯೆಗೆ ಒಳಗಾಗುವುದು ಪಕ್ಕಾ.

ಕಳೆದ ವರ್ಷ ಹೇಗಿತ್ತು?: 199 ಹಳ್ಳಿಗಳನ್ನು ಹೊಂದಿರುವ ಹೊಸನಗರ ತಾಲೂಕಿನಲ್ಲಿ ಸುಮಾರು 21 ಗ್ರಾಮಗಳು ಕುಡಿಯುವ ನೀರಿಗಾಗಿ ಹಪಹಪಿಸಿದ್ದವು. ಜೇನಿ, ಮೇಲಿನಬೆಸಿಗೆ, ನಿಟ್ಟೂರು, ಯಡೂರು-
ಸುಳುಗೋಡು, ಮೂಡುಗೊಪ್ಪ, ಖೈರಗುಂದ, ರಿಪ್ಪನ್‌ ಪೇಟೆ ಗ್ರಾಪಂನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ಖಾಸಗಿ ಬೋರ್‌ವೆಲ್‌ ನೀರನ್ನು ಬಳಸಿಕೊಳ್ಳುವುದರ ಜೊತೆಗೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿತ್ತು.

ಅತಿಯಾದ ಮಳೆ ತಂದ ಆಪತ್ತು!: ಕುಡಿಯುವ ನೀರಿನ ಸಮಸ್ಯೆ ಬಳಿಕ ಹೊಸನಗರ ತಾಲೂಕಿನಲ್ಲಿ ವ್ಯಾಪಕ ಮಳೆಯಾಗಿತ್ತು. ಮಳೆಯ ಅಬ್ಬರ ಎಷ್ಟಿತ್ತೆಂದರೆ ಒಂದೇ ವಾರದಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಸಂಗ್ರಹ 50 ಅಡಿಗಳಷ್ಟು ಏರಿತ್ತು. ಆದರೆ ಭಾರೀ ಮಳೆಯಿಂದಾಗಿ, ಹೊಳೆಗಳು, ನದಿಪಾತ್ರ ಕೊರೆದುಕೊಂಡು ಹೋಗಿದ್ದು ನೀರಿನ ಹರಿವು ಕುಸಿತ ಕಂಡಿರುವುದು ಆತಂಕದ ವಿಷಯ.

ತಾಲೂಕಿನ ಬಹುಪಾಲು ಆಕ್ರಮಿಸಿಕೊಂಡಿರುವ ಲಿಂಗನಮಕ್ಕಿ ಜಲಾಶಯದ ಹಿನ್ನೀರು ಕಡಿಮೆಯಾಗುತ್ತಿದ್ದು ಬಾವಿಗಳು ಬರಿದಾಗುತ್ತಿವೆ. ಕಳೆದ ಬಾರಿ ನಿಯಮಿತವಾಗಿ ಮಳೆ ಸುರಿಯದೇ ಒಂದೇ ಸಮನೇ ಸುರಿದಿದ್ದು ಈ ಬಾರಿ ನೀರಿನ ಸಮಸ್ಯೆ ತಂದೊಡ್ಡಲಿದೆ ಎಂಬುದು ತಜ್ಞರ ಅಭಿಪ್ರಾಯ.

ರೂ.1 ಕೋಟಿ ವೆಚ್ಚದಲ್ಲಿ ತುರ್ತು ಕಾಮಗಾರಿ: ಕಳೆದ ವರ್ಷ ನೀರಿನ ಅಭಾವ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಆಯ್ದ ಕಡೆ ತುರ್ತು ಕಾಮಗಾರಿಗಳನ್ನು ಕೈಗೊಂಡಿದೆ. ಸುಳುಗೋಡು, ಖೈರಗುಂದ, ಕರಿಮನೆ, ಮೇಲಿನಬೆಸಿಗೆ, ಅಂಡಗದೋದೂರು, ಮೂಡುಗೊಪ್ಪ, ಸಂಪೇಕಟ್ಟೆ, ನಿಟ್ಟೂರು, ಹೆದ್ದಾರಿಪುರ, ಮಾರುತಿಪುರ, ಬಾಳೂರು, ರಿಪ್ಪನಪೇಟೆ, ಕೆಂಚನಾಲ, ಅಮೃತ, ಚಿಕ್ಕಜೇನಿ, ಹರತಾಳು, ಎಂ. ಗುಡ್ಡೇಕೊಪ್ಪ, ಹರತಾಳು, ಹರಿದ್ರಾವತಿ ಗ್ರಾಪಂನ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ರೂ
1 ಕೋಟಿ ವೆಚ್ಚದಲ್ಲಿ ತುರ್ತು ಕಾಮಗಾರಿಯನ್ನು ನಿರ್ವಹಿಸಲಾಗಿದೆ. ಪೈಪ್‌ಲೈನ್‌ ವಿಸ್ತರಣೆ ಮತ್ತು 22 ಬೋರ್‌ವೆಲ್‌ ಕೊರೆಸಲಾಗಿದ್ದು ಅದರಲ್ಲಿ ನಾಲ್ಕು ಕೊಳವೆ ಬಾವಿಗಳು ವಿಫಲವಾಗಿವೆ.

ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಸಭೆ: ಕಳೆದ ಬಾರಿಯ ನೀರಿನ ಸಮಸ್ಯೆಯಿಂದ ಎಚ್ಚೆತ್ತುಕೊಂಡಿರುವ ತಾಲೂಕು ಆಡಳಿತ ಈಗಾಗಲೇ ತಹಶೀಲ್ದಾರ್‌ ವಿ.ಎಸ್‌. ರಾಜೀವ್‌ ಅಧ್ಯಕ್ಷತೆಯಲ್ಲಿ ಒಂದು ಸಭೆ ನಡೆದಿದೆ. ಸಭೆಯಲ್ಲಿ ತಾಲೂಕಿನಲ್ಲಿರುವ ಕೊಳವೆ ಬಾವಿ ಸಂಖ್ಯೆ, ತುರ್ತು ಕಾಮಗಾರಿ ನಿರ್ವಹಣೆ, ನೀರಿನ ಅಭಾವ ಕಂಡುಬರುವ ಸಂಭಾವ್ಯ ಗ್ರಾಮಗಳನ್ನು ಪಟ್ಟಿ ಮಾಡಿ, ಸೂಕ್ತ ವರದಿ ನೀಡುವಂತೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ತಾಲೂಕಿನ ನೀರಿನ ಮೂಲಗಳು
ಶರಾವತಿ, ಮಾವಿನಹೊಳೆ, ಕುಮುದ್ವತಿ, ಚಕ್ರಾ, ಸಾವೇಹಕ್ಲು, ವಾರಾಹಿ, ಸೇರಿದಂತೆ ಶರಾವತಿಯ ಉಪನದಿ, ಹೊಳೆಗಳನ್ನು ಹೊಂದಿರುವ ಹೊಸನಗರ ತಾಲೂಕಿನಲ್ಲಿ ಮಾಣಿ, ಚಕ್ರಾ, ಸಾವೇಹಕ್ಲು, ಖೈರಗುಂದ, ಪಿಕಪ್‌ ಸೇರಿದಂತೆ 5 ಜಲಾಶಯಗಳಿವೆ. ಆದರೆ ಇದು ಕೇವಲ ವಿದ್ಯುತ್‌ ಉತ್ಪಾದನೆಗೆ ಬಳಕೆಯಾಗುತ್ತದೆ. ಆದರೆ ಜಲಾಶಯಗಳ ಹಿನ್ನೀರು ವ್ಯಾಪ್ತಿಯಲ್ಲಿ ನೀರು ಸಂಗ್ರಹವಿರುವ ಭಾಗದಲ್ಲಿ ಅಂತರ್ಜಲ ಹಿಡಿದಿಟ್ಟುಕೊಳ್ಳಬಹುದು. ಆದರೆ ಈಗಾಗಲೇ ಹಿನ್ನೀರು ಪ್ರದೇಶದಲ್ಲಿ ನೀರು ಖಾಲಿಯಾಗಿ ಬರಡಾಗಿದೆ. ಇನ್ನು ಸುಮಾರು 675 ಕೊಳವೆ ಬಾವಿಗಳಿದ್ದು, 900 ಕೆರೆಗಳು, 1700ಕ್ಕೂ ಹೆಚ್ಚು ಕೃಷಿಬಾವಿಗಳಿದ್ದು, 8217 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ.

ಕುಮುದಾ ನಗರ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರುಕಲಾದ ಬಸ್

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.