ಸಮಾಧಿ ಕಲ್ಲಿನ ಕೆಳಭಾಗದಲ್ಲಿ ಲಿಪಿ ಪತ್ತೆ!
ಬಿದನೂರು ಅರಸರ ಸಮಾಧಿ ಇತಿಹಾಸಕ್ಕೆ ರೋಚಕ ಟ್ವಿಸ್ಟ್!ಪಠ್ಯದ ಪ್ರಕಾರ ಅರಸರ ಸಮಾಧಿಯಲ್ಲ!
Team Udayavani, Feb 13, 2020, 1:23 PM IST
ಹೊಸನಗರ: ತಾಲೂಕಿನ ಐತಿಹಾಸಿಕ ತಾಣ ಬಿದನೂರು ಶ್ರೀಧರಪುರದಲ್ಲಿರುವ ಸಮಾಧಿ ಸ್ಥಳದಲ್ಲಿರುವ ಸಮಾಧಿಗಳ ಇತಿಹಾಸಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಸಮಾಧಿ ಕಲ್ಲಿನ ಕೆಳಭಾಗದಲ್ಲಿ ಎರಡು ಸಾಲಿನ ಪಠ್ಯ ಪತ್ತೆಯಾಗಿದ್ದು ಅದರ ಪ್ರಕಾರ ಅಲ್ಲಿರುವುದು ಕೆಳದಿ ಅರಸರ ಸಮಾಧಿಗಳೆಂದು ಸೂಚಿಸುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಏನಿದು ಪಠ್ಯ: ಶ್ರೀಧರಪುರದ ಕೊಪ್ಪಲು ಮಠದಲ್ಲಿರುವ ಅರಸರ ಸಮಾ ಧಿಗಳು ಎಂದೇ ಪ್ರತೀತಿ ಹೊಂದಿರುವ ಸಮಾಧಿ ಸ್ಥಳದ ಸಮಾಧಿಯೊಂದರ ಕಲ್ಲಿನ ಕೆಳಭಾಗದಲ್ಲಿ ಎರಡು ಸಾಲಿನ ಪಠ್ಯ ಲಭ್ಯವಾಗಿದೆ. ಮೈಸೂರಿನ ಶಾಸನ ತಜ್ಞ ಡಾ| ಅನಿಲ್ ಕುಮಾರ್ ಆರ್.ವಿ. ಪಠ್ಯವನ್ನು ತಾತ್ಕಾಲಿಕ ಸಂಶೋಧನೆಗೆ ಒಳಪಡಿಸಿದ್ದು ಅರ್ಥ ಹುಡುಕಿದಾಗ ಸಮಾಧಿಯ ಈವರೆಗಿನ ಪ್ರತೀತಿಯನ್ನು ಅಳಿಸಿ ಹಾಕಿದೆ.
ಎರಡು ಸಾಲಿನ ಪಠ್ಯದಲ್ಲಿ 1: ಉಪ್ಪಾರ ಚ್ಕಿಂಣನ ಮಗ(ಳು) (ಅನು)ಮಕ, 2ರಲ್ಲಿ ಉ(ಸೂಹು) ಚಂಣನ ಮಗ ಬಿ(ಲ್ಲಂ)||(ಸ)ಂ(ನ್ದಿ)ದ ಎಂಬುದಾಗಿ ಲಿಪಿಯನ್ನು ಅರ್ಥೈಸಲಾಗಿದ್ದು, ಇದರಿಂದ ಇದು ಕೆಳದಿ ಅರಸರ ಸಮಾಧಿಗಳು ಎನ್ನಲು ಯಾವುದೇ ಸಾಕ್ಷಿಗಳಿಲ್ಲ ಎಂಬ ಅಂದಾಜಿಗೆ ಬರಲಾಗಿದೆ. ಆದರೆ ಈ ಸಮಾಧಿಗಳು ಕೆಳದಿ ಅರಸರ ಕಾಲದ್ದೇ ಆಗಿದ್ದು ದಂಡನಾಯಕರ, ಸೇನಾಧಿ ಪತಿಗಳ ಸಮಾಧಿಗಳು ಕೂಡ ಆಗಿರಬಹುದು ಎಂದು ಶಾಸನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಇದು ತಾತ್ಕಾಲಿಕ ಪಠ್ಯ ಅಧ್ಯಯನವಾಗಿದ್ದು ಲಿಪಿಯ ಮತ್ತಷ್ಟು ಸಂಶೋಧನೆಯಿಂದ ನಿಖರ ಮಾಹಿತಿ ಬರಬೇಕಿದೆ ಎಂದು ಶಾಸನ ತಜ್ಞ ಡಾ| ಅನಿಲ್ ಕುಮಾರ್ ಹೇಳಿದ್ದಾರೆ.
ಪತ್ತೆಯಾಗಿದ್ದು ಹೇಗೆ: ಕಳೆದ ಜುಲೈ ತಿಂಗಳಿನಲ್ಲಿ ನಿಧಿ ಚೋರರು ನಿಧಿಯಾಸೆಗಾಗಿ ಸಮಾಧಿಯ ಕಲ್ಲನ್ನು ಕಿತ್ತು ಹಾಕಿ ಸಮಾಧಿಯನ್ನು ಧ್ವಂಸಗೊಳಿಸಿದ್ದರು. ಈ ಬಗ್ಗೆ ನಗರ ಠಾಣೆಯಲ್ಲಿ ಪುರಾತತ್ವ ಅ ಧಿಕಾರಿ ಆರ್. ಶೇಜೇಶ್ವರ್ ದೂರು ಕೂಡ ದಾಖಲಿಸಿದ್ದರು. ಆದರೆ ಸಮಾಧಿ ಕಲ್ಲಿನ ಮರುಸ್ಥಾಪನೆ ವೇಳೆ ಕಲ್ಲಿನ ಕೆಳಭಾಗದಲ್ಲಿ ಎರಡು ಸಾಲಿನ ಪಠ್ಯ ಇರುವುದು ಕಂಡು ಬಂದಿದೆ. ಆದರೆ ಲಿಪಿ ಕ್ಲಿಷ್ಟವಾಗಿದ್ದು ಅಧ್ಯಯನ ಸಾಧ್ಯವಾಗದೆ ಪುರಾತತ್ವ ಇಲಾಖೆಯ ತಲೆನೋವಿಗೂ ಕಾರಣವಾಗಿತ್ತು. ಹೆಚ್ಚಿನ ಅಧ್ಯಯನ ಮಾಡುವ ದೃಷ್ಟಿಯಿಂದ ಮೈಸೂರು ಪುರಾತತ್ವ ಇಲಾಖೆಯ ಶಾಸನ ತಜ್ಞ ಡಾ| ಅನಿಲಕುಮಾರ್ ಅವರನ್ನು ಕರೆಸಿ ಮಂಗಳವಾರ ಅಧ್ಯಯನ ನಡೆಸಲಾಗಿತ್ತು. ಈ ವೇಳೆ ಈ ಮಾಹಿತಿ ಹೊರಬಂದಿದೆ.
ಗೊಂದಲಕ್ಕೆ ಕಾರಣ: 90ರ ದಶಕದಲ್ಲಿ ಇತಿಹಾಸ ಸಂಶೋಧಕ ದಿ. ಶಂಕರನಾರಾಯಣ ರಾವ್, ಸಮಾಧಿ ಗಳನ್ನು ಬೆಳಕಿಗೆ ತಂದಿದ್ದರು. ಅಲ್ಲದೆ ಸ್ಥಳೀಯ ಸಂಶೋಧನೆ, ಕೆಳದಿ ದಾಖಲೆ ಮತ್ತು ಪ್ರಾಚೀನ ಗ್ರಂಥಗಳಲ್ಲಿರುವ ಉಲ್ಲೇಖದಂತೆ ಇದು ಬಿದನೂರಿನಿಂದ ಆಳಿದ ಕೆಳದಿ ಅರಸರ ಸಮಾಧಿಗಳು ಎಂದು ಪ್ರಚಲಿತಕ್ಕೆ ಬಂದಿತ್ತು ಇತಿಹಾಸ ತಜ್ಞರು ಅಭಿಪ್ರಾಯಿಸಿದ್ದಾರೆ. ಆದರೀಗ ಪುರಾತತ್ವ ಇಲಾಖೆ ನಡೆಸಿದ ತಾತ್ಕಾಲಿಕ ಪಠ್ಯ ಅಧ್ಯಯನದಲ್ಲಿ ಅರಸರ ಸಮಾಧಿ ಎನ್ನಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ, ಕುತೂಹಲ ಒಂದಷ್ಟು ಗೊಂದಲ ಮಾತ್ರವಲ್ಲ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮುಂದೇನು: 3 ದಶಕಗಳ ಕಾಲ ಶಿಸ್ತಿನ ಶಿವಪ್ಪನಾಯಕ ಸೇರಿದಂತೆ 10 ಅರಸರ ಸಮಾಧಿಗಳ ಸ್ಥಳ ಎಂದು ಮನ್ನಣೆ ಪಡೆದಿದ್ದ ಶ್ರೀಧರಪುರದ ಸಮಾಧಿ ಸ್ಥಳದ ಇತಿಹಾಸ ತಿರುವು ಪಡೆದುಕೊಂಡಿದೆ. ಒಂದು ವೇಳೆ ಇದು ಅರಸರ ಸಮಾಧಿ ಅಲ್ಲವೆಂದಾದರೆ.. ಅವರ ಸಮಾಧಿಗಳು ಎಲ್ಲಿವೆ.. ಮತ್ತು ಇಲ್ಲಿರುವ ಸಾಲು ಸಾಲು ಸಮಾಧಿಗಳು ಯಾರದ್ದು, ಅಲ್ಲದೆ ಅದರ ಮೇಲೆ ಮಾಸ್ತಿ ವೀರಗಲ್ಲನ್ನು ಏಕೆ ನಿಲ್ಲಿಸಲಾಗಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಒಟ್ಟಾರೆ ಶಿಸ್ತಿನ ಶಿವಪ್ಪನಾಯಕ ಸೇರಿದಂತೆ ಹತ್ತು ಅರಸರ ಸಮಾಧಿ ಎಂದು ಬಿಂಬಿತವಾಗಿದ್ದ ಸಮಾಧಿ ಸ್ಥಳ ಮತ್ತೆ ಸುದ್ದಿಯಾಗಿದೆ. ಈ ನಡುವೆ ಸಮಾಧಿ ಸ್ಥಳಕ್ಕೆ ಜೀರ್ಣೋದ್ಧಾರಕ್ಕಾಗಿ 50 ಲಕ್ಷ ಹಣದ
ಪ್ರಸ್ತಾವನೆ ಸಲ್ಲಿಸಲಾಗಿದೆ. ಜೀರ್ಣೋದ್ಧಾರದ ವೇಳೆ ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕು. ಅಲ್ಲದೆ ಉಳಿದ ಸಮಾಧಿಗಳ ಬಗ್ಗೆ ಕೂಡ ಮಾಹಿತಿ ಸಂಗ್ರಹಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಸಮಾಧಿ ಮೇಲಿನ ಮಾಸ್ತಿ ವೀರಗಲ್ಲಿನ ಮೇಲೆ ಸಿಕ್ಕಿರುವ ಮಾಹಿತಿ ಪ್ರಕಾರ ಸಮಾಧಿಯಲ್ಲಿನ ವ್ಯಕ್ತಿಗಳ ಬಗ್ಗೆ ಬೇರೆಯದೆ ಚಿತ್ರಣವನ್ನು ಕೊಡುತ್ತದೆ. ಇದು ತಾತ್ಕಾಲಿಕ ಪಠ್ಯ ಅಧ್ಯಯನ. ಇದನ್ನು ಇನ್ನಷ್ಟು ಸಂಶೋಧನೆಗೆ ಒಳಪಡಿಸಿ ನಿಖರ ಮಾಹಿತಿಯನ್ನು ಕಲೆಹಾಕಬೇಕಿದೆ.
ಡಾ| ಅನಿಲಕುಮಾರ್,
ಶಾಸನ ತಜ್ಞರು
ಶ್ರೀಧರಪುರದ ಕೊಪ್ಪಲು ಮಠದಲ್ಲಿರುವ ಅರಸರ ಸಮಾಧಿಗಳು ಕೆಳದಿ ಅರಸರ ಸಮಾಧಿಗಳು ಎಂದು ಹಿಂದಿನ ಸಂಶೋಧನೆಗಳು ಹೇಳಿವೆ. ಅಲ್ಲದೆ ಕೆಳದಿ ದಾಖಲೆ ಮತ್ತು ಪ್ರಾಚೀನ ಗ್ರಂಥಗಳ ಉಲ್ಲೇಖ ಕೂಡ ಇದಕ್ಕೆ ಪೂರಕವಾಗಿದೆ. ಆದರೆ ಸಮಗ್ರ ಸಂಶೋಧನೆ ನಡೆಸದೆ ಇರುವ ಇತಿಹಾಸವನ್ನು ತಿರುವಿಗೆ ಒಳಪಡಿಸುವುದು ಸಾಧು ಕ್ರಮವಲ್ಲ.
ಅಂಬ್ರಯ್ಯಮಠ,
ನಗರ, ಇತಿಹಾಸ ತಜ್ಞರು.
ಈಗ ಸಿಕ್ಕಿರುವ ಪಠ್ಯ ದಾಖಲೆ ಪ್ರಕಾರ ಇದು ಅರಸರ ಸಮಾ ಧಿ ಅಲ್ಲ ಎಂದು ಕೊಳ್ಳೋಣ. ಹಾಗಾದರೆ ಶಿವಪ್ಪ ನಾಯಕ ಸೇರಿದಂತೆ ಉಳಿದ ಅರಸರ ಸಮಾಧಿ ಎಲ್ಲಿದೆ. ಇಲ್ಲಿರುವ ಸಮಾ ಧಿಗಳು ಯಾರದ್ದು, ಈ ಬಗ್ಗೆ ಸಮಗ್ರ ಸಂಶೋಧನೆ ನಡೆಸಬೇಕು
ಪ್ರೊ| ಕೆ.ಜಿ.ವೆಂಕಟೇಶ್,
ಇತಿಹಾಸ ತಜ್ಞ
ಈಗಾಗಲೇ ಅರಸರ ಸಮಾಧಿ ಸ್ಥಳದ ಜೀರ್ಣೋದ್ಧಾರಕ್ಕೆ 50 ಲಕ್ಷದ ಪ್ರಸ್ತಾವನೆಯನ್ನು ಇಲಾಖೆಗೆ ಸಲ್ಲಿಸಲಾಗಿದೆ. ಜೀರ್ಣೋದ್ಧಾರದ ಸಂದರ್ಭದಲ್ಲಿ ಸಮಾಧಿ ಮತ್ತು ಪಠ್ಯದ ಬಗ್ಗೆ ಮತ್ತಷ್ಟು ಮಾಹಿತಿ ಸಿಗುವ ಸಾಧ್ಯತೆ ಇದೆ. ನಂತರವಷ್ಟೇ ಈ ಬಗ್ಗೆ ನಿರ್ಣಯಕ್ಕೆ ಬರಲು ಸಾಧ್ಯ.
ಆರ್.ಶೇಜೇಶ್ವರ್,
ನಿರ್ದೇಶಕರು ರಾಜ್ಯ ಪುರಾತತ್ವ ಇಲಾಖೆ, ಶಿವಮೊಗ್ಗ
ಕುಮುದಾ ನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.