ಬಿಸಿಯೂಟ ನೌಕರರ ಧರಣಿ
Team Udayavani, Dec 10, 2019, 2:49 PM IST
ಸಾಗರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ಪ್ರತಿಭಟನೆ ನಡೆಸಿ ಶಾಸಕರು ಹಾಗೂ ಉಪವಿಭಾಗಾಧಿ ಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಬಿಸಿಯೂಟ ತಯಾರಿಕರಿಗೆ ಕನಿಷ್ಟ ವೇತನ 10,500 ರೂ. ಜಾರಿಗೆ ತರಬೇಕು. ಇಲಾಖೆ ಅಧಿ ಕಾರಿಗಳು ಶಾಲೆಗಳಲ್ಲಿ ದಿನಕ್ಕೊಂದು ತರಕಾರಿ ಅಡುಗೆ ಮಾಡಲು ಘೋಷಿಸಿರುವ ಆದೇಶ ವಾಪಸ್ ಪಡೆಯಬೇಕು. ಸಿ.ಜಿ. ಹಣವನ್ನು ಹೆಚ್ಚಿಸಬೇಕು. ತಮಿಳುನಾಡು ಮಾದರಿಯಲ್ಲಿ ಬಿಸಿಯೂಟ ತಯಾರಕರಿಗೆ ಕೆಲಸ ಮತ್ತು ಜೀವನ ಭದ್ರತೆ ಒದಗಿಸಬೇಕು. ಬಿಸಿಯೂಟ ತಯಾರಕರಿಗೆ ಪಿಎಫ್, ಇಎಸ್‌ಇ ಜಾರಿಗೆ ತರಬೇಕು. 60 ವರ್ಷ ದಾಟಿದ ಬಿಸಿಯೂಟ ಕಾರ್ಯಕರ್ತೆಯರು ಕೆಲಸದಿಂದ ಬಿಡುಗಡೆಗೊಳಿಸಿದಾಗ 2 ಲಕ್ಷ ರೂ. ಇಡಿಗಂಟು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಬಿಸಿಯೂಟ ತಯಾರಿಕರಿಗೆ ಪ್ರತಿವರ್ಷ ಒಂದು ಜತೆ ಸಮವಸ್ತ್ರ, ಒಂದು ಜತೆ ಏಪ್ರನ್‌ಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಹೊಸಕೊಪ್ಪ, ತಾಲೂಕು ಅಧ್ಯಕ್ಷೆ ಶೋಭಾ ಗದ್ದೆಮನೆ, ತಾಲೂಕು ಸಂಚಾಲಕ ರಮೇಶ್ ಐಗಿನಬೈಲು, ಜಿಲ್ಲಾ ಉಪಾಧ್ಯಕ್ಷೆ ಸಾವಿತ್ರಿ ಎ.ಎನ್., ನಾಗವೇಣಿ, ಮಹಾದೇವಿ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.