Geetha Shivarajkumar ಸೋಲಿನ ಹೊಣೆ ನನ್ನದು: ಮಧು ಬಂಗಾರಪ್ಪ
ಶಿವಮೊಗ್ಗದಲ್ಲೇ ಮನೆ ಮಾಡುತ್ತೇನೆ: ಗೀತಾ
Team Udayavani, Jun 10, 2024, 11:49 PM IST
ಶಿವಮೊಗ್ಗ: ಕೇಂದ್ರದಲ್ಲಿ ಬಿಜೆಪಿ ಗೆದ್ದಿರಬಹುದು. ಆದರೆ ಆಂತರಿಕವಾಗಿ ಸೋತಿದೆ. ಕ್ಷೇತ್ರದಲ್ಲಿ ಗೀತಾ ಶಿವರಾಜಕುಮಾರ್ ಸೋಲಿನ ಹೊಣೆ ನನ್ನದು. ಆದರೆ ಇಲ್ಲಿ ಗೀತಕ್ಕ 5.30 ಲಕ್ಷ ಮತ ಪಡೆದು ಕ್ಷೇತ್ರದ ಜನರ ಹೃದಯ ಗೆದ್ದಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮ ವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆ ಯಲ್ಲಿ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಆಯ್ಕೆಗೆ ಬೆಲೆ ಕೊಡಬೇಕು. ಈ ಸೋಲು ಮುಂದಿನ ಬದಲಾವಣೆಗೆ ಸ್ಫೂರ್ತಿ ಆಗಲಿದೆ ಎಂದರು.
ಶಿವಮೊಗ್ಗದಲ್ಲೇ ಮನೆ ಮಾಡುತ್ತೇನೆ: ಗೀತಾ
ಶಿವಮೊಗ್ಗ: ಒಬ್ಬರು ಗೆಲ್ಲಲೇ ಬೇಕು, ಅದು ಆಗಿದೆ. ನಾನು ಅಂದುಕೊಂಡಂತೆ ಆಗಿಲ್ಲ. ಐದು ಲಕ್ಷ ಮತದಾರರು ಮತ ನೀಡಿದ್ದಾರೆ. ನಾವು ಚುನಾವಣೆಯಲ್ಲಿ ಮಾಡಬೇಕಾದ ಕೆಲಸ ಮಾಡಿ ದ್ದೇವೆ. ಜನ ಬೆಂಬಲಿಸಿದ್ದಾರೆ ಎಂದು ಗೀತಾ ಶಿವರಾಜ್‌ಕುಮಾರ್ ತಿಳಿಸಿದರು. ನಾನು ಶಿವಮೊಗ್ಗ ಜನರ ಜತೆಯಲ್ಲಿ ಇರುತ್ತೇನೆ. ಶಿವಮೊಗ್ಗ ಬಿಟ್ಟು ಹೋಗು ವುದಿಲ್ಲ. ಇಲ್ಲೇ ಮನೆ ಮಾಡುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosanagar: ನಾಪತ್ತೆಯಾದ 78 ದಿನದ ಬಳಿಕ ವ್ಯಕ್ತಿಯ ಮೃತದೇಹ ಪತ್ತೆ, ತನಿಖೆಗೆ ಪತ್ನಿಯ ಆಗ್ರಹ
Ripponpet ಬೀದಿ ನಾಯಿ ಕೊಂದು ಆಟೋಗೆ ಕಟ್ಟಿಕೊಂಡು ಎಳೆದೊಯ್ದ ಕ್ರೂರಿ
Shimoga: ಬೀದಿ ನಾಯಿಯನ್ನು ಕ್ರೂರವಾಗಿ ಕೊಂದು ಆಟೋದಲ್ಲಿ ಎಳೆದೊಯ್ದ ವ್ಯಕ್ತಿ
ಅಡಿಕೆ ಬೆಳೆಗಾರರು ಆತಂಕವಿಲ್ಲದೆ ಕೃಷಿಯಲ್ಲಿ ತೊಡಗಿಕೊಳ್ಳಿ: ಶಿವರಾಜ್ ಸಿಂಗ್ ಚೌಹಾಣ್
Sagara: ಜ. 22ರಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಡಾಕ್ಟರೇಟ್ ಪ್ರದಾನ