ತಂತ್ರಜ್ಞಾನ ಬೆನ್ನತ್ತಿದರೆ ಭವಿಷ್ಯಕ್ಕೆ ಮಾರಕ
Team Udayavani, Aug 29, 2017, 4:37 PM IST
ಸೊರಬ: ವಿಜ್ಞಾನ ಹಾಗೂ ತಂತ್ರಜ್ಞಾನದ ನಾಗಾಲೋಟದಲ್ಲಿ ವಿದ್ಯಾರ್ಥಿಗಳು ಎಚ್ಚರ ತಪ್ಪಿದರೆ ಭವಿಷ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು
ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಎನ್. ಸಿಂಚನಾ ಹೇಳಿದರು.
ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ಪ್ರಭುತ್ವದ ಭಾಷೆಗಳು ಭೌಗೋಳಿಕ ಭಾಷೆಗಳನ್ನು ಹತ್ತಿಕ್ಕುತ್ತಿರುವೆ. ಇಂತಹ ಸಮಯದಲ್ಲಿಯೇ ವಿಜ್ಞಾನ ಹಾಗೂ ತಂತ್ರಜ್ಞಾನ ಬೆಳವಣಿಗೆಗಳು ಅಗತ್ಯ ಎನಿಸುವ ಹೊತ್ತಿನಲ್ಲಿ ಯುವ ಸಮುದಾಯ ಬದುಕಿಗೆ ಬೇಕಾದ ವಿಷಯವನ್ನು
ತಿಳಿದುಕೊಳ್ಳಲು ಮನುಸ್ಸು ಮಾಡುತ್ತಿಲ್ಲ. ಇದರಿಂದ ಭವಿಷ್ಯದ ಬದುಕು ಅತಂತ್ರವಾಗಬಹುದು ಎಂದು ಎಚ್ಚರಿಸಿದರು.
ದೇಶದ ಅಭಿವೃದ್ಧಿಗೆ ತಂತ್ರಜ್ಞಾನದ ಅವಶ್ಯಕತೆ ಇದ್ದರೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ವಿಕಸನ ಎಲ್ಲ ಆಯಾಮಗಳಲ್ಲಿ ಆಗಬೇಕಾದರೆ ವಿಷಯವಾರು ಮಾಹಿತಿ ಪಡೆಯವುದು ಅಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸಮಾಜದ ನಡುವೆ ನಂಟನ್ನು ಬೆಳೆಸುವ ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುವ ಸಾಹಿತ್ಯಿಕ ವಿಚಾರಗಳನ್ನು ಎಳೆಯ ವಯಸ್ಸಿನಲ್ಲಿ ಬೆಳೆಸಿಕೊಂಡರೆ ಉತ್ತಮ ವ್ಯಕ್ತಿಯಾಗಿ ಬೆಳೆಯಬಹುದು ಎಂದು ಪ್ರತಿಪಾದಿಸಿದರು. ಕೃಷಿ ಪ್ರಧಾನ ಸಮುದಾಯವನ್ನು ಒಳಗೊಂಡಿರುವ ತಾಲೂಕು ರಾಜಕೀಯ, ಧಾರ್ಮಿಕ ಹಾಗೂ ಸಾಹಿತ್ಯಕವಾಗಿ ಪ್ರಾಮುಖ್ಯತೆ ಹೊಂದಿದೆ. ಗುಡಿಗಾರರ
ಕುಸುರಿ ಕೆತ್ತನೆ ಮೈಸೂರು ಅರಮನೆಯಲ್ಲಿ ಸ್ಥಾನ ಪಡೆದಿದೆ. ಡೊಳ್ಳು ಕುಣಿತ, ಕೋಲಾಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ತಾಲೂಕಿನ ಕಲಾವಿದರು ಇಂದಿಗೂ ಯುವ ಕಲಾವಿದರಿಗೆ ಮಾದರಿಯಾಗಿದ್ದಾರೆ ಎಂದು ಸ್ಮರಿಸಿದರು.
ಜಿಲ್ಲಾಧ್ಯಕ್ಷ ಡಿ.ಬಿ. ಶಂಕರಪ್ಪ ಮಾತನಾಡಿ, ಮಕ್ಕಳನ್ನು ಕೇವಲ ಅಂಕ ಪಡೆಯುವ ಯಂತ್ರಗಳಾಗಿಸಲು ಪೋಷಕರು ಯೋಚಿಸುತ್ತಿದ್ದಾರೆ. ಜ್ಞಾನದ ವಿಕಾಸ ಆಗಬೇಕಾದರೆ ಮಕ್ಕಳನ್ನು ಸಾಹಿತ್ಯಿಕ ಚಿಂತನೆಯತ್ತ ಬೆಳೆಸಬೇಕು ಎಂದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಡೆ ಸಂಸ್ಥಾನ ಮಠದ ಡಾ| ಮಹಾಂತ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ಹಾಲೇಶ್ ನವುಲೆ ಅಧ್ಯಕ್ಷತೆ ವಹಿಸಿದ್ದರು.
ಪಪಂ ಅಧ್ಯಕ್ಷೆ ಬೀಬಿ ಜುಲೇಖಾ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಂಚಿ ಹನುಮಂತಪ್ಪ, ತಾಲೂಕು ನೌಕರ ಸಂಘದ ಅಧ್ಯಕ್ಷ ಹೊಳೆಲಿಂಗಪ್ಪ, ಕ್ಷೇತ್ರ ಶಿಕ್ಷಣಾ ಧಿಕಾರಿ ಕೆ. ಮಂಜುನಾಥ್, ಮೃತ್ಯುಂಜಯಗೌಡ, ಅಂಜನೇಯ, ಜಾಲಗಾರ್, ಮಧುರಾಯ ಶೇಟ್, ಶಿವಾನಂದ ಬಿಳಗಿ, ದೀಪಕ್, ಚಂದ್ರಪ್ಪ ಅತ್ತಿಕಟ್ಟೆ, ಕಾಳಿಂಗರಾವ್, ಕೆ.ಆರ್. ಶಿವಾನಂದಪ್ಪ, ಪರಮೇಶಪ್ಪ ಕೃಷ್ಣಾನಂದ್, ಡಿ.ಎಸ್. ಪ್ರಶಾಂತ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.