ಬೀಟೆ ನಾಟಾ ಅಕ್ರಮ ಸಾಗಾಣಿಕೆ: ಓರ್ವನ ಬಂಧನ
Team Udayavani, Apr 29, 2021, 9:46 PM IST
ರಿಪ್ಪನ್‌ಪೇಟೆ: ಸಮೀಪದ ಅರಸಾಳುವಲಯ ವ್ಯಾಪ್ತಿಯ ಕೊರಗಿ ಅರಣ್ಯಪ್ರದೇಶದಲ್ಲಿ ಸುಮಾರು 2 ಲಕ್ಷ ರೂ.ಮೌಲ್ಯದ ಅಕ್ರಮ ಬೀಟೆ ನಾಟಾವನ್ನುಕಡಿತಲೆ ಮಾಡಿ ವಾಹನದಲ್ಲಿ ಸಾಗಿಸುತ್ತಿದ್ದಆರೋಪಿಯನ್ನು ಅರಣ್ಯಾ ಧಿಕಾರಿಗಳುವಾಹನ ಸಮೇತ ವಶಕ್ಕೆ ಪಡೆದ ಘಟನೆನಡೆದಿದೆ.
ಈ ಕುರಿತು ಖಚಿತ ಮಾಹಿತಿ ಆಧರಿಸಿಗಸ್ತಿನಲ್ಲಿದ್ದ ಅಯನೂರು ವಲಯಅರಣ್ಯಾಧಿಕಾರಿ ಕೆ.ರವಿ ನೇತೃತ್ವದಲ್ಲಿ ಸಿಬ್ಬಂದಿಕಾರ್ಯಾಚರಣೆ ನಡೆಸಿ ಆರೋಪಿಯನ್ನುಬಂಧಿಸಿದೆ.ಅರಸಾಳು ವಲಯ ವ್ಯಾಪ್ತಿಯ ಕೊರಗಿಅರಣ್ಯ ಪ್ರದೇಶದಲ್ಲಿನ ಬೆಲೆ ಬಾಳುವ ಬೀಟೆನಾಟಾವನ್ನು ಅಕ್ರಮವಾಗಿ ಕಡಿತಲೆ ಮಾಡಿಮಾರುತಿ ಓಮ್ನಿ ಕಾರಿನಲ್ಲಿ ತುಂಬಿಕೊಂಡುಸಾಗಿಸುತ್ತಿದ್ದಾರೆಂಬ ಮಾಹಿತಿ ಆಧರಿಸಿಅಯನೂರು ವಲಯ ಅರಣ್ಯಾ ಧಿಕಾರಿನೇತೃತ್ವದ ತಂಡ ವಾಹನವನ್ನು ಬೆನ್ನಟ್ಟಿ ಕುಂಸಿಬಳಿಯ ಶಿಕಾರಿಪುರ ರಸ್ತೆಯಲ್ಲಿ ಓರ್ವಆರೋಪಿಯನ್ನು ಬಂಧಿಸಿದ್ದಾರೆ.
ಸುನೀಲ್‌ಬಿನ್ ಸುರೇಶಪ್ಪ ಬಂಧಿತನಾಗಿದ್ದು, ಆತನಿಂದಬೀಟೆ ನಾಟಾ ವಶಪಡಿಸಿಕೊಂಡಿದ್ದಾರೆ.ಉಳಿದ ಇಬ್ಬರು ಅರೋಪಿಗಳಾದರವಿ ಕುಂಸಿ ಹಾಗೂ ಗವಟೂರುಗ್ರಾಮದ ಸೀತಾರಾಮ್ ಎಂಬವರುಪರಾರಿಯಾಗಿದ್ದಾರೆ ಎನ್ನಲಾಗಿದೆ.ಪತ್ತೆ ಕಾರ್ಯಚರಣೆಯಲ್ಲಿ ಉಪವಲಯಅರಣ್ಯಾ ಧಿಕಾರಿಗಳಾದ ಎನ್.ಸಿ.ನಾಗರಾಜ್,ಎನ್.ಎಂ.ವಸಂತಕುಮಾರ್, ಅರಣ್ಯರಕ್ಷಕರಾದ ಎಂ.ವಿಜಯ, ಎಂ.ದಸ್ತಗಿರ್,ವಾಹನ ಚಾಲಕರಾದ ಶಿವರಾಜ್, ಅವಿನಾಶ್‌ಮತ್ತು ಸಿಬ್ಬಂದಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ripponpet ಬೀದಿ ನಾಯಿ ಕೊಂದು ಆಟೋಗೆ ಕಟ್ಟಿಕೊಂಡು ಎಳೆದೊಯ್ದ ಕ್ರೂರಿ
Shimoga: ಬೀದಿ ನಾಯಿಯನ್ನು ಕ್ರೂರವಾಗಿ ಕೊಂದು ಆಟೋದಲ್ಲಿ ಎಳೆದೊಯ್ದ ವ್ಯಕ್ತಿ
ಅಡಿಕೆ ಬೆಳೆಗಾರರು ಆತಂಕವಿಲ್ಲದೆ ಕೃಷಿಯಲ್ಲಿ ತೊಡಗಿಕೊಳ್ಳಿ: ಶಿವರಾಜ್ ಸಿಂಗ್ ಚೌಹಾಣ್
Sagara: ಜ. 22ರಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಡಾಕ್ಟರೇಟ್ ಪ್ರದಾನ
ನಾನು ಪ್ರತಿಭಟನೆ, ಪಾದಯಾತ್ರೆ ಮಾಡಿದಷ್ಟು ಯಾವ ರಾಜಕಾರಣಿಯೂ ಮಾಡಿಲ್ಲ: ಕಿಮ್ಮನೆ
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.