ಅಷ್ಟಾಂಗ ಯೋಗದಿಂದ ಮೋಕ್ಷ ಪ್ರಾಪ್ತಿ
Team Udayavani, Jun 22, 2021, 6:45 PM IST
ಶಿವಮೊಗ್ಗ: ಅಷ್ಟಾಂಗ ಯೋಗದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಯೋಗ, ಉತ್ತಮ ಕರ್ಮ ಮತ್ತು ಸದ್ವಿಚಾರಗಳನ್ನು ಪಾಲಿಸುವವರು ಎಲ್ಲರಿಗೂ ಒಳ್ಳೆಯದನ್ನು ಬಯಸುವವರು ಯೋಗಿಗಳಾಗುತ್ತಾರೆ. ಅಹಂಕಾರ ಇಲ್ಲದ ವರ್ತನೆಯಿಂದ ಮಾನವನ ಉದ್ಧಾರವಾಗುತ್ತದೆ ಎಂದು ಅವಧೂತರಾದ ಗೌರಿಗದ್ದೆಯ ವಿನಯ್ ಗುರೂಜಿ ಹೇಳಿದರು.
ವಿನೋಬ ನಗರದ ಕಲ್ಲಹಳ್ಳಿಯ ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಸಚಿವ ಈಶ್ವರಪ್ಪ ದೇಣಿಗೆಯಿಂದ ನಿರ್ಮಿಸಿದ ಮುಖ್ಯದ್ವಾರದ ಸ್ವಾಗತ ಕಮಾನಿನ ಲೋಕಾರ್ಪಣೆ ಹಾಗೂ ಅಂತಾರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ನಾನು ನನ್ನದು’ ಎಂಬ ಅಹಂಕಾರದ ವರ್ತನೆಯನ್ನು ಬಿಡುವುದೇ ಯೋಗ. ಯೋಗದಿಂದಲೇ ಭಾರತ ಇಂದು ವಿಶ್ವಗುರುವಾಗಿದೆ. ಮೊದಲು ನಿನ್ನಲ್ಲಿರುವ ಶಕ್ತಿಯನ್ನು ಜಾಗೃತಗೊಳಿಸಿ ನಾಡಿ ಶುದ್ಧೀಕರಣದಿಂದ ದೇಹಕ್ಕೆ ಮತ್ತು ಮನಸ್ಸಿಗೆ ಅಗತ್ಯವಾದ ಉತ್ತಿಷ್ಠ ಮತ್ತು ಜಾಗೃತ ಸ್ಥಿತಿಯನ್ನು ಯೋಗದಿಂದ ತಲುಪಬಹುದು. 40 ವರ್ಷದ ಮಹಿಳೆಯೊಬ್ಬರು ಯಾವುದೇ ಆಹಾರವನ್ನು ಸೇವಿಸದೇ ಯೋಗದಿಂದಲೇ ಬದುಕಿದ ಉದಾಹರಣೆ ಇದೆ. ನಮ್ಮ ದೇಶದಲ್ಲಿ ನೂರಾರು ಯೋಗ ಸಾಧಕರು ಅಸಾಮಾನ್ಯ ಸಾಧನೆ ಮಾಡಿದ್ದಾರೆ. “ಸೋಹಂ ಧ್ಯಾನ ನಾನು ನೀನೇ’ ಎಂದು ಪರಮಾತ್ಮನನ್ನು ಧ್ಯಾನಿಸುವುದೇ ಯೋಗವಾಗಿದೆ ಎಂದು ಹೇಳಿದರು.
ಸಮಚಿತ್ತದಲ್ಲಿರಲು ಯೋಗ ಬಿಟ್ಟರೆ ಬೇರೆ ಹಾದಿ ಇಲ್ಲ. ಭಜನೆಯಿಂದ ಭಾವಶುದ್ಧಿಯಾಗುತ್ತದೆ. ಯೋಗದಿಂದ ದೇಹ ಶುದ್ಧವಾಗುತ್ತದೆ. ಮಾತೆಯರು ಸಣ್ಣವರಿದ್ದಾಗಲೇ ಯೋಗಾಭ್ಯಾಸ ಆರಂಭಿಸಿ ತಮ್ಮ ಮಕ್ಕಳಿಗೂ ಉತ್ತಮ ಸಂಸ್ಕಾರ ನೀಡಬೇಕು. ಯಾರ ಸಹವಾಸವನ್ನು ಜಾಸ್ತಿ ಮಾಡುತ್ತೇವೆಯೋ ಅವರ ಗುಣವೇ ಬರುತ್ತದೆ. ಸಂಸ್ಕಾರದಿಂದ ಮಾತ್ರ ಭಾರತ ಇಷ್ಟು ದೊಡ್ಡ ಮಟ್ಟಿಗೆ ನಿಂತಿದೆ. ಜೀವನವನ್ನು ಯೋಗದಿಂದ ಪೂರ್ಣದ ಕಡೆಗೆ ತೆಗೆದುಕೊಂಡು ಹೋಗಬಹುದು ಎಂದರು.
ಕಂಡವರ ವಿಚಾರ ಮಾತನಾಡಿದರೆ ಅದು ಮೈಲಿಗೆಯಾಗುತ್ತದೆ. ಅದನ್ನು ಬಿಟ್ಟು ಎಲ್ಲರನ್ನೂ ಒಂದುಗೂಡಿಸುವ ಯೋಗದೆಡೆಗೆ ಮನಸ್ಸು ಮಾಡಿ ಎಂದು ತಿಳಿಸಿದರು. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಬೇಡವಾದ್ದನ್ನು ಬಿಟ್ಟು ಬೇಕಾಗಿರುವುದನ್ನು ಮಾತ್ರ ಸ್ವೀಕರಿಸಿ. ಪಂಚೇಂದ್ರಿಯಗಳು ಉಪಕಾರದ ಜೊತೆಗೆ ಅಪಕಾರ ಮಾಡುತ್ತವೆ. ಅದನ್ನು ಹಿಡಿತದಲ್ಲಿಟ್ಟುಕೊಂಡು ಮನಸ್ಸನ್ನು ಯೋಗದೆಡೆಗೆ ಕೇಂದ್ರೀಕರಿಸಿದಾಗ ಸಾಧನೆ ಮಾಡಬಹುದು ಎಂದರು.
ಶಾಸಕ ಎಸ್. ರುದ್ರೇಗೌಡ, ಶಿವಗಂಗಾ ಯೋಗಕೇಂದ್ರದ ಯೋಗಾಚಾರ್ಯ ಡಾ| ಸಿ.ವಿ. ರುದ್ರಾರಾಧ್ಯ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಪಾಲಿಕೆಸದಸ್ಯೆ ಅನಿತಾ ರವಿಶಂಕರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಎಸ್.ವೈ. ಅರುಣಾದೇವಿ ಇನ್ನಿತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.