ನೀರಾವರಿ ಮೂಲ ಪರಿಶೀಲನೆ


Team Udayavani, Sep 4, 2017, 4:13 PM IST

04-SHIV-1.jpg

ಶಿರಾಳಕೊಪ್ಪ: ತಾಲೂಕಿನ ಶಿರಾಳಕೊಪ್ಪ ಭಾಗದ ಉಡಗಣಿ- ತಾಳಗುಂದ ಹೋಬಳಿ ಸೇರಿದಂತೆ ತಾಲೂಕಿನ ಹಲವಾರು ನೀರಾವರಿ ಯೋಜನೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೇಂದ್ರ ನೀರಾವರಿ ಸಚಿವೆ ಉಮಾಭಾರತಿ ಅವರಿಗೆ ಮನವಿ ಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ನೀರಾವರಿ ಇಲಾಖೆಯ ಮುಖ್ಯಸ್ಥರು ಹಾಗೂ ರಾಜ್ಯ ಅಧಿಕಾರಿಗಳು ಸಭೆ ನಡೆಸಿ ನೀರಾವರಿ ಮೂಲಗಳನ್ನು ವೀಕ್ಷಣೆಮಾಡಿದರು.

ಸಂಜೆ ಶಿರಾಳಕೊಪ್ಪ ಹತ್ತಿರದ ನೇರಲಗಿ ಸಮುದಾಯ ಭವನದಲ್ಲಿ ಬೃಹತ್‌ ಪ್ರಮಾಣದಲ್ಲಿ ಸೇರಿದ್ದ ರೈತರನ್ನುದ್ದೇಶಿಸಿ ಶಾಸಕ ಬಿ.ವೈ. ರಾಘವೇಂದ್ರ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಈ ಭಾಗದ ರೈತರು ತೀವ್ರ ಬರಗಾಲದಿಂದ ಬಳಲುತ್ತಿದ್ದಾರೆ. ಈ ಭಾಗದಲ್ಲಿ ನೀರಾವರಿ ಮೂಲಗಳಿಲ್ಲ. ಕೊಳವೆ ಬಾವಿ ನಂಬಿದ್ದ ರೈತರಿಗೆ ಅಂತರ್ಜಲವಿಲ್ಲದೇ ಕೊಳವೆಬಾವಿಗಳು ಬತ್ತಿ ಹೋಗಿವೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಂಭವವಿದೆ ಎಂದರು. 

ಕಳೆದ ವರ್ಷಕ್ಕಿಂತ ವಾಡಿಕೆಗಿಂತ ಶೇ.40ರಷ್ಟು ಮಳೆ ಕಡಿಮೆ ಆಗಿದೆ. ಮಳೆ ಪ್ರಮಾಣ ಕಡಿಮೆ ಆಗುತ್ತಿರುವದನ್ನು ನೋಡಿ ಈ ಹಿಂದೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಶಿರಾಳಕೊಪ್ಪದಿಂದ 5 ಸಾವಿರ ರೈತರ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಆದರೆ ಸರ್ಕಾರ ಯಾವದೇ ಸ್ಪಂದನೆ ಮಾಡಲಿಲ್ಲ ಎಂದರು. 

ಕೇಂದ್ರಕ್ಕೆ ಮನವಿ: ತಾಲ್ಲೂಕಿನ ರೈತರ ಹಿತ ಕಾಪಾಡಲು ದಿಟ್ಟ ಕ್ರಮ ಕೈಗೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಕೇಂದ್ರ ನೀರಾವರಿ ಸಚಿವೆ ಉಮಾಭಾರತಿ ಅವರಿಗೆ ಸಂಸದ ಬಿ.ಎಸ್‌. ಯಡಿಯೂರಪ್ಪನವರು ಶಿಕಾರಿಪುರ ತಾಲೂಕಿನ ನಾಲ್ಕು ಹಾಗು ಸೊರಬ ತಾಲೂಕಿನ ಒಂದು ನೀರಾವರಿ ಯೋಜನೆಗೆ ಆ.26ರಂದು ಮನವಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಉಡಗಣಿ- ತಾಳಗುಂದ ಹೋಬಳಿ, ನೀರಾವರಿಗೆ 300 ಕೋಟಿ ರೂ., ತುಂಗಾ ನದಿಯಿಂದ ಕುಮದ್ವತಿ ನದಿಗೆ ನೀರು ತುಂಬಿಸುವ ಯೋಜನೆಗೆ 125 ಕೋಟಿ ರೂ., ತುಂಗಭದ್ರಾ ನದಿಯಿಂದ ಹೊಸೂರು ಹೋಬಳಿಗೆ ನೀರು ಪೂರೈಸುವ ಯೋಜನೆಗೆ 200 ಕೋಟಿ ಹಾಗು ಕಲ್ಲೊಡ್ಡು ಯಜನೆಗೆ 100 ಕೋಟಿ ರೂ ಪ್ರಸ್ತಾವನೆ ಸಲ್ಲಿಸಿದ್ದರು.

ನಾಲ್ಕು ದಿನದಲ್ಲಿ ಕೇಂದ್ರ ಸಮಿತಿ ಆಗಮನ: ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ಯಡಿಯೂರಪ್ಪ ಅವರು ನೀರಾವರಿ ಸಚಿವೆ ಉಮಾಭಾರತಿ ಅವರಿಗೆ ನೀರಾವರಿ ಸೌಲಭ್ಯದ ಬಗ್ಗೆ ಮನವಿ ಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ನೀರಾವರಿ ಸಚಿವೆ ಉಮಾಭಾರತಿ ಅವರು ನಾಲ್ಕೇ ದಿನದಲ್ಲಿ ಉನ್ನತ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿರುವುದು ಒಂದು ದಾಖಲೆ ಆಗಿದೆ ಎಂದು ಶಾಸಕ ರಾಘವೇಂದ್ರ ಸಂತಸ ವ್ಯಕ್ತಪಡಿಸಿ, ನಾವು ಕಾಟಾಚಾರಕ್ಕಾಗಿ ಕೆಲಸ ಮಾಡದೇ ಆದಷ್ಟು ಬೇಗ ಯೋಜನೆಯನ್ನು ಕಾರ್ಯಗತ ವಾಗಲು ಪ್ರಯತ್ನಪಡಲಾಗುವುದು ಎಂದರು.

ಸ್ಥಳಕ್ಕೆ ಭೇಟಿ ನೀಡಲು ಆಗಮಿಸಿದ ಕೇಂದ್ರ ನೀರಾವರಿ ಯೋಜನೆಯ ಮುಖ್ಯ ಅಭಿಯಂತರ ಆರ್‌.ಕೆ. ಜೈನ್‌ ಸಭೆಯನ್ನುದ್ದೇಶಿಸಿ ಮಾತನಾಡಿ, ಇಲ್ಲಿಯ ಪರಿಸ್ಥಿತಿ ನಮ್ಮ  ಮನಕ್ಕೆ ಬಂದಿದೆ. ಯಡಿಯೂರಪ್ಪನವರು ಕೇಂದ್ರ ಸಚಿವೆ ಉಮಾಭಾರತಿ ಅವರಿಗೆ ಮನವಿ ಕೊಟ್ಟ ಬೆನ್ನಲ್ಲೇ ಕರ್ನಾಟಕಕ್ಕೆ ಭೇಟಿ ಕೊಟ್ಟು ಸರ್ವೆ ಮಾಡಿಕೊಂಡು ಬರಲು ತಿಳಿಸಿದ ಹಿನ್ನೆಲೆಯಲ್ಲಿ ಬಂದದ್ದಾಗಿ ತಿಳಿಸಿ, ಇಲ್ಲಿಯ ನೀರಾವರಿ ಯೋಜನೆಬಗ್ಗೆ ಪೂರಕ ವರದಿ ನೀಡಿ
ಸಂಪೂರ್ಣ ಸ್ಪಂದಿಸುವದಾಗಿ ತಿಳಿಸಿದರು.

ಹಿರೇಕೆರೂರ ತಾಲೂಕು ಪುರಕ್ಕೆ ಭೇಟಿ:
ಶಿಕಾರಿಪುರ ತಾಲೂಕಿನ ಹೊಸೂರು ಹೋಬಳಿಗೆ ನೀರು ತರುವ ತುಂಗಭದ್ರಾ ನದಿ ಹರಿಯುವ ಪುರಕ್ಕೆ ಶಾಸಕರೊಂದಿಗೆ ಕೇಂದ್ರ ಸಮಿತಿ ಭೇಟಿ ನೀಡಿ ಮಳೆಯಲ್ಲಿಯೇ ಅಲ್ಲಿಯ ನೀರಿನ ಸೌಲಭ್ಯವನ್ನು ವೀಕ್ಷಿಸಿ ತಾಲೂಕಿಗೆ ಬೇಕಾಗುವ ಎಲ್ಲ ನೀರನ ಸೌಲಭ್ಯವನ್ನು ಇಲ್ಲಿಂದಲೇ ಏಕೆ ವ್ಯವಸ್ಥೆ ಮಾಡಬಾರದು ಎಂದು ಚಿಂತಿಸಿ ಸೊಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

 ಜಿಲ್ಲಾ ಜಾಗೃತ ದಳದ ಗುರುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭಾಗದ ಯಾವದೇ ಕೆರೆಕಟ್ಟೆಯಲ್ಲಿ ನೀರಿಲ್ಲ ಎಂದರು. ಶಿರಾಳಕೊಪ್ಪ ಪಟ್ಟಣದ ಬಿಜೆಪಿಯಿಂದ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಲಾಯಿತು. ಕೇಂದ್ರ ನಿಯೋಗದೊಂದಿಗೆ ತಂಡದ
ಹಿರಿಯ ಇಂಜನಿಯರ್‌ ಪಂಕಜ್‌ ಶರ್ಮ,ಫ‌ಣಿರಾಜ್‌, ಕರ್ನಾಟಕದ ನೀರಾವರಿ ಮುಖ್ಯ ಅಭಿಯಂತರ ಕುಲಕರ್ಣಿ, ತುಂಗಾ ಮೇಲ್ದಂಡೆ ಯೋಜನೆಯ ಇಂಜನಿಯರ್‌ ಶ್ರೀನಿವಾಸ್‌, ನಿವೃತ್ತ ಅಭಿಯಂತರ ನಾಗರಾಜ್‌ , ರಮೇಶ್‌ ಹಾಗೂ ಜಿಪಂ ಸದಸ್ಯರಾದ ಅಕ್ಷತಾ, ರೇಣುಕಮ್ಮ, ಮಮತಾ ಸಾಲಿ, ಬಿಜೆಪಿ ತಾಲೂಕು ಅಧ್ಯಕ್ಷ ಕೆ. ರೇವಣಪ್ಪ, ಗುರುಮೂರ್ತಿ, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಸಣ್ಣ ಹನುಮಂತಪ್ಪ, ಮಂಚಿ ಶಿವಣ್ಣ, ಚೆನ್ನವೀರ ಶೆಟ್ಟಿ ಮತ್ತಿತರರು ಇದ್ದರು.

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

13-

Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ

12-sagara

Sagara: ವಿದ್ಯುತ್ ಟ್ರಾನ್ಸ್‌ ಫಾರ್ಮರ್‌ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ

6-

Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.