‘ಕನ್ನಡ ಶಾಯರಿ ಜನಕ’ ಇಟಗಿ ಈರಣ್ಣ ಇನ್ನಿಲ್ಲ
Team Udayavani, Mar 14, 2017, 10:06 AM IST
ಶಿವಮೊಗ್ಗ: ‘ಕನ್ನಡ ಶಾಯರಿಗಳ ಜನಕ’ ಎಂದೇ ಖ್ಯಾತರಾಗಿದ್ದ ಸಾಹಿತಿ ಪ್ರೊ| ಇಟಗಿ ಈರಣ್ಣ (67) ಭಾನುವಾರ ರಾತ್ರಿ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದ ಅವರು, ಹಳೆಗನ್ನಡ ಸಾಹಿತ್ಯದಲ್ಲಿ ಅಪಾರ ಅನುಭವ ಹೊಂದಿದ್ದ ಅಪರೂಪದ ಸಾಹಿತಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ತಮ್ಮ ನಿವೃತ್ತ ಜೀವನವನ್ನು ಶಿವಮೊಗ್ಗದಲ್ಲಿ ಕಳೆಯಲು ನಿರ್ಧರಿಸಿದ್ದ ಈರಣ್ಣ, ನಗರದ ಕಲ್ಲಹಳ್ಳಿಯ ಪ್ರಿಯದರ್ಶಿನಿ ಲೇಔಟ್‌ನಲ್ಲಿ ಮನೆ ಕಟ್ಟಿಕೊಂಡು ವಿಶ್ರಾಂತ ಜೀವನ ನಡೆಸುತ್ತಿದ್ದರು.
ಕನ್ನಡ ಸಾಹಿತ್ಯಕ್ಕೆ ವಚನಾಚಲ, ಕನ್ನಡ ಶಾಯರಿ, ಕಬೀರನ ದೋಹೆಗಳು, ಯಹೂದಿ ನಾಟಕ, ರಾವಿನದಿಯದಂಡೆಯಲ್ಲಿ ಸೇರಿ ಹಲವು ಕೃತಿಗಳನ್ನು ಬರೆದಿದ್ದರು. ಅಲ್ಲದೆ ಅನೇಕ ನಾಟಕಗಳನ್ನೂ ನಿರ್ದೇಶಿಸಿದ್ದರು. ಇದಲ್ಲದೆ ಚಲನಚಿತ್ರಗಳಿಗೆ ಶಾಯರಿ ಬರೆದ ಈರಣ್ಣ ಮತ್ತಷ್ಟು ಜನಪ್ರಿಯರಾಗಿದ್ದರು. ‘ಸ್ಪರ್ಶ’ ಚಿತ್ರದಲ್ಲಿ ಬರುವ ಎಲ್ಲ ಶಾಯರಿಗಳನ್ನು ಅವರು ರಚಿಸಿದ್ದಾರೆ. ಜತೆಗೆ ಅದೇ ಚಿತ್ರದಲ್ಲಿ ‘ಚಂದಕ್ಕಿಂತ ಚೆಂದ’ ಎಂಬ ಹಾಡು ಕೂಡ ಬರೆದಿದ್ದು, ಆ ಹಾಡು ಅತ್ಯಂತ ಜನಪ್ರಿಯವಾಗಿತ್ತು. ಅನೇಕ ಕೃತಿಗಳನ್ನು ರಚಿಸಿರುವ ಇಟಗಿ ಈರಣ್ಣ ಅನುವಾದಕರಾಗಿಯೂ ಕೆಲಸಮಾಡಿದ್ದರು. ಉರ್ದು ಮತ್ತು ಪರ್ಶಿಯನ್ ಭಾಷೆಯ ಜ್ಞಾನವನ್ನು ಅಪಾರವಾಗಿ ಹೊಂದಿದ್ದ ಇವರು ಅಲ್ಲಿದ್ದ ಶಾಯರಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Kodagu; ದೇವಸ್ಥಾನ ಪ್ರವೇಶ ನಿರಾಕರಣೆ: ವಿವಿಧೆಡೆ ಕೊಡವರಿಂದ ರಸ್ತೆ ತಡೆ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್
Contracter Case: ಸಚಿನ್ ಪಾಂಚಾಳ್ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.