ಪ್ಯಾಂಟ್ ಶರ್ಟ್ ಹಾಕುವಂತೆ ಮುಂದಿನ ದಿನಗಳಲ್ಲಿ ಮಾಸ್ಕ್ ಸಹ ಮಾಮೂಲಿ ಆಗಲಿದೆ: ಶೆಟ್ಟರ್
Team Udayavani, Jul 1, 2020, 2:25 PM IST
ಶಿವಮೊಗ್ಗ: ಪ್ಯಾಂಟ್- ಶರ್ಟ್ ಹಾಕುವಂತೆ ಮುಂದಿನ ದಿನಗಳಲ್ಲಿ ಮಾಸ್ಕ್ ಸಹ ಮಾಮೂಲಿ ಆಗಲಿದೆ. ಟೈಲರ್ ಗಳು ಪ್ಯಾಂಟ್ ಹಾಗೂ ಶರ್ಟ್ ಗೆ ಮ್ಯಾಚಿಂಗ್ ಮಾಸ್ಕ್ ಹೊಲಿದು ಕೊಡುವ ಕಾಲ ದೂರವಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮಾಸ್ಕ್ ಬಳಕೆ ಇನ್ನು ಮುಂದಿನ ದಿನಗಳಲ್ಲಿ ನಾವು ಬಟ್ಟೆ ತೊಡುವಂತೆ ಸಾಮಾನ್ಯವಾಗಲಿದೆ ಎಂದರು.
ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಚರ್ಚೆಯಾಗಿಲ್ಲ.ಲಾಕ್ ಡೌನ್ ನನ್ನು ಸಡಿಲಿಕೆ ಮಾಡುತ್ತಲೇ ಬಂದಿದ್ದೇವೆ. ಲಾಕ್ ಡೌನ್ ಇರಲಿ ಬಿಡಲಿ ನಾವು ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು ಹಾಗೂ ಸ್ಯಾನಿಟೈಸರ್ ಹಾಕಿಕೊಳ್ಳಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.