ಆರ್ ಎಸ್ಎಸ್ ಕಾರ್ಯಕರ್ತರ ಪಾದದ ಧೂಳಿಗೂ ಸಿದ್ದರಾಮಯ್ಯ ಸಮರಲ್ಲ: ಕೆ.ಎಸ್.ಈಶ್ವರಪ್ಪ
Team Udayavani, Jul 30, 2022, 12:08 PM IST
ಶಿವಮೊಗ್ಗ: ಪಾಕಿಸ್ತಾನ ಮಾಡಿದ ದಾಳಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಮತ್ತೆ ಪಾಕಿಸ್ತಾನ ಭಾರತದ ಸುದ್ದಿಗೆ ಬರದಂತೆ ಮಾಡಿದ್ದು ಸಂಘಪರಿವಾರದ ನರೇಂದ್ರ ಮೋದಿ. ದೇಶದ ಮೇಲೆ ದಾಳಿಗಳಾದಾಗ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪರಿವಾರದ ಸ್ವಯಂ ಸೇವಕರು ಕೆಲಸ ಮಾಡಿದ್ದಾರೆ. ಆದರೆ ಪರಿವಾರದ ಬಿಕ್ಕಟ್ಟು ಗಲಭೆಗೆ ಕಾರಣ ಎಂಬ ಹೇಳಿಕೆ ನೀಡಿದ ಸಿದ್ದರಾಮಯ್ಯ ಅವರಿಗೆ ನಾಚಿಕೆ, ಮಾನ- ಮರ್ಯಾದೆ ಇದೆಯಾ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರಿಗೆ ಸಂಘ ಪರಿವಾರದ ಸ್ವಯಂ ಸೇವಕರ ಬಗ್ಗೆ ಸ್ವಲ್ಪವೂ ತಿಳಿದಿಲ್ಲ. ಸ್ವಯಂ ಸೇವಕರ ಪಾದದ ಧೂಳಿಗೂ ಸಿದ್ದರಾಮಯ್ಯ ಸಮಾನರಲ್ಲ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಅವರ ಪಕ್ಷವನ್ನು ಸೋಲಿಸಿದ್ದು. ಸಿದ್ದರಾಮಯ್ಯ ತೆವಲು ತೀರಿಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು. ಜೊತೆಗೆ ಆರ್ ಎಸ್ಎಸ್ ಬಗ್ಗೆ ತಿಳಿದುಕೊಳ್ಳಬೇಕು. ಆರ್ ಎಸ್ಎಸ್ ಶಾಖೆಗೆ ಎರಡು ದಿನವಿದ್ದು ಅಲ್ಲಿನ ಬಗ್ಗೆ ತಿಳಿದುಕೊಂಡರೆ ನಾಲಿಗೆ ಇಷ್ಟು ಉದ್ದ ಬಿಡುವುದಿಲ್ಲ. ಬೇಕಾದರೆ ನಾನೆ ಆರ್ ಎಸ್ ಎಸ್ ಶಾಖೆಗೆ ಕರೆದುಕೊಂಡು ಹೋಗುತ್ತೇನ ಎಂದು ತಿರುಗೇಟು ನೀಡಿದರು.
ನಿಮ್ಮ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಗುಂಪು, ಡಿಕೆಶಿ ಗುಂಪು ಇದೆ. ಆದರೆ ಆರ್ ಎಸ್ ಎಸ್ ನಲ್ಲಿ ಗುಂಪುಗಳಿಲ್ಲ. ಸಿದ್ದರಾಮಯ್ಯ ಕುಡುಕರ ರೀತಿ ಮಾತನಾಡುವುದು ಸರಿಯಲ್ಲ. ಹರ್ಷ ಹಾಗೂ ಪ್ರವೀಣ್ ನನ್ನು ಕಳೆದುಕೊಂಡು ನಾವು ನೋವಿನಲ್ಲಿದ್ದೇವೆ. ಕೊಲೆ ಮಾಡಿದ ದೇಶ ದ್ರೋಹಿಗಳನ್ನು ಘಟನೆ ನಡೆದು 24 ಗಂಟೆ ಒಳಗಾಗಿ ಬಂಧಿಸಿದ್ದೇವೆ. ನಿಮ್ಮ ಸರ್ಕಾರದ ಅವಧಿಯಲ್ಲಿ 32 ಜನ ಹಿಂದುಗಳ ಹತ್ಯೆಯಾದಾಗ ಎಷ್ಟು ಬಾರಿ ನೀವು ರಾಜೀನಾಮೆ ನೀಡಿದ್ದೀರಿ ಸ್ಪಷ್ಟಪಡಿಸಿ ಎಂದು ತಿರುಗೇಟು ನೀಡಿದರು.
ನಳೀನ್ ಕುಮಾರ್ ಕಟೀಲು ಅಧಿಕಾರಕ್ಕೆ ಬಂದಾಕ್ಷಣ ಸಿದ್ದರಾಮಯ್ಯ ಸೋತರು ಹಾಗೂ ಅವರ ಸರ್ಕಾರ ಪತನವಾಯಿತು. ಇದೇ ಸಿಟ್ಟಿಗೆ ಇದೀಗ ಸಿದ್ದರಾಮಯ್ಯ ಅವರು ಇದೀಗ ನಳೀನ್ ಕುಮಾರ್ ಕಟೀಲನ್ನು ವಿಚಾರಣೆಗೊಳಪಡಿಸಿ ಎನ್ನುತಿದ್ದಾರೆ. ಸಿದ್ದರಾಮಯ್ಯ ಅವರು ರಾಜಕಾರಣದ ಇತಿಮಿತಿಯನ್ನು ಮೀರಿ ನಾಲಗೆ ಚಾಚುತಿದ್ದಾರೆ ಎಂದರು.
ಇದನ್ನೂ ಓದಿ:2021-22ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ: ಇಲ್ಲಿದೆ ರ‍್ಯಾಂಕ್ ಬಂದವರ ವಿವರ
ರಮೇಶ್ ಕುಮಾರ್ ರನ್ನು ಬಂಧಿಸಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೂಂಡಾ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಇದೇ ಕಾರಣದಿಂದಲೇ ರಮೇಶ್ ಕುಮಾರ್ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ರಮೇಶ್ ಕುಮಾರ್ ಅವರನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.
ಹಿಂದೂ ಸಮಾಜ ಜಾಗೃತವಾಗಿದೆ: ರಾಷ್ಟ್ರದ್ರೋಹಿ ಮುಸಲ್ಮಾನರ ಮೇಲಿನ ಸಿಟ್ಟಿನಿಂದ ಬಿಜೆಪಿ ಯುವ ಕಾರ್ಯಕರ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅವರಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ತಮ್ಮ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಇದೀಗ ಹಿಂದೂ ಸಮಾಜ ಜಾಗೃತವಾಗಿದೆ. ಇದೇ ಕಾರಣಕ್ಕೆ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಜನ ಆಕ್ರೋಶಗೊಳ್ಳುತ್ತಾರೆ. ಭಾರತದಲ್ಲಿ ಹಿಂದುತ್ವ ಜಾಗೃತವಾಗಿದ್ದರಿಂದಲೇ ಭಾರತ ಇಂದು ವಿಶ್ವಗುರುವಾಗಿರುವುದು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
MUST WATCH
ಹೊಸ ಸೇರ್ಪಡೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Abhimanyu Kashinath; ಸೂರಿ ಲವ್ ಗೆ ಉಪ್ಪಿ ಮೆಚ್ಚುಗೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.