ಕೊನೆಗೂ ಅಖಾಡಕ್ಕಿಳಿಯಲಿದ್ದಾರೆ ಜೋಡೆತ್ತುಗಳು: ಶುರುವಾಗುತ್ತಾ ಎದುರಾಳಿಗಳಿಗೆ ಢವ ಢವ !
Team Udayavani, Apr 8, 2023, 8:10 PM IST
ತೀರ್ಥಹಳ್ಳಿ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ತೀರ್ಥಹಳ್ಳಿ ಕ್ಷೇತ್ರ ಈ ಭಾರಿ ರೋಚಕತೆಯಿಂದ ಕೂಡಿರಲಿದೆ. ಪ್ರತಿ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮದ್ಯೆ ಪೈಪೋಟಿ ಸಾಮಾನ್ಯವಾಗಿದ್ದು ಈ ಬಾರಿ ಮತ್ತಷ್ಟು ರೋಚಕತೆಯಿಂದ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.
ಕಿಮ್ಮನೆ ರತ್ನಾಕರ್ ಅವರಿಗೆ ಟಿಕೆಟ್ ಘೋಷಣೆ ಬೆನ್ನಲ್ಲೇ ಆರ್ ಎಂ ಮಂಜುನಾಥ ಗೌಡರು ತಮ್ಮ ಬೆಂಬಲಿಗರೊಂದಿಗೆ ಆಯನೂರು ಸಮೀಪದ ಕರುಕುಚ್ಚೀ ಮತ್ತು ತಮ್ಮ ತೀರ್ಥಹಳ್ಳಿ ಬೆಟ್ಟಮಕ್ಕಿ ನಿವಾಸದಲ್ಲಿ ಕಾರ್ಯಕರ್ತರ ಸಭೆ ನೆಡೆಸುತ್ತಿದ್ದ ಕಾರಣ ಬಂಡಾಯ ಎಳುತ್ತಾರೆ ಎಂಬ ಮಾತು ಸಾರ್ವಜನಿಕವಾಗಿ ಕಾರ್ಯಕರ್ತರಲ್ಲಿ ಚರ್ಚೆಯಲ್ಲಿತ್ತು. ಆದರೆ ಕಿಮ್ಮನೆ ರತ್ನಾಕರ್ ಅವರೇ ಶನಿವಾರ ಸಂಜೆ ಮಂಜುನಾಥ್ ಗೌಡರ ಮನೆಗೆ ದಿಢೀರ್ ಭೇಟಿ ನೀಡಿ ಆರ್ ಎಂ ಎಂ ಜೊತೆ ಮಾತನಾಡಿ ಎಲ್ಲಾ ವೈಮನಸ್ಸು ಉಪಶಮನ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಏ.12 ರಿಂದ ಸಭೆಗಳಿಗೆ ಇಬ್ಬರು ಒಟ್ಟಾಗಿ ಹೊಗಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಕೊನೆಗೂ ಜೋಡೆತ್ತುಗಳು ಒಟ್ಟಿಗೆ ಅಖಾಡಕ್ಕಿಳಿಯುವುದಕ್ಕೆ ಸಮಯ ನಿಗದಿಯಾಗಿದೆ. ಈ ಕಾರಣದಿಂದ ಎದುರಾಳಿಗಳಿಗೆ ಢವ ಢವ ಶುರುವಾಗುತ್ತಾ ಅಥವಾ ಎದುರಾಳಿಗಳು ಎದ್ದು ನಿಲ್ತಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: ನಂದಿನಿ ರಾಜ್ಯದ ಹೆಮ್ಮೆ, ಯಾವುದೇ ಕಾರಣಕ್ಕೂ ಉತ್ಪನ್ನಗಳಿಗೆ ಸಮಸ್ಯೆ ಆಗದು: KMF ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.