Thirthahalli: ದ್ವೇಷದ ರಾಜಕೀಯಕ್ಕೆ ಇನ್ನೊಂದು ಹೆಸರೇ ಆರಗ ಜ್ಞಾನೇಂದ್ರ: ಕಿಮ್ಮನೆ ವಾಗ್ದಾಳಿ
ಜ್ಞಾನೇಂದ್ರರ ಆಸ್ತಿ ಎಷ್ಟು? ದೇವಸ್ಥಾನಕ್ಕೆ ಕೊಟ್ಟಿದ್ದೇಷ್ಟು? ಹೇಳಲಿ
Team Udayavani, Oct 20, 2023, 3:47 PM IST
ತೀರ್ಥಹಳ್ಳಿ :ಆರಗ ಜ್ಞಾನೇಂದ್ರ ಅವರಿಗೆ ಇತ್ತೀಚಿಗೆ ಐದನೇ ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂಬ ಸೊಕ್ಕು ಅಹಂಕಾರ ಪಿತ್ತ ನೆತ್ತಿಗೇರಿದೆ. 83 ರಲ್ಲಿ ಮತ ಕೇಳುವಾಗ ಇದ್ದಂತಹ ಆರ್ಥಿಕ ಸ್ಥಿತಿ ಈಗಿಲ್ಲ. ಅವರ ಆಸ್ತಿ ಆದಾಯ ಎಲ್ಲವನ್ನು ವಿಸ್ತಾರ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರಿಗಳು ಎನ್ನುವ ಇವರು 50 ವರ್ಷಗಳ ಕಾಲ ವ್ಯಾಪಾರ ಮಾಡಿದ್ದಾ? ಸಭೆಗಳಲ್ಲೂ ದ್ವೇಷದ ಭಾಷಣ ಮಾಡುತ್ತಾರೆ, ನಾನೇನು ಮಾಡಿದರು ನಡೆಯುತ್ತೆ ಎಂಬ ಸೊಕ್ಕು ಅಹಂಕಾರ ಅವರಲ್ಲಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ವಾಗ್ದಾಳಿ ನೆಡೆಸಿದರು.
ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ನಾನೇನೋ ಸಾಧನೆ ಮಾಡಿದ್ದೇನೆ ಎಂಬ ಗರ್ವ ಅವರಲ್ಲಿದೆ ಆದರೆ ಇಡೀ ರಾಜ್ಯದಲ್ಲಿ ಆಗಲಿ ಅಥವಾ ತೀರ್ಥಹಳ್ಳಿಯಲ್ಲಾಗಲಿ ಒಳ್ಳೆಯ ಅಭಿಪ್ರಾಯ ಇಲ್ಲ, ಚುನಾವಣೆ ಗೆದ್ದರೆ ಒಳ್ಳೆಯವರು ಸೋತವರು ಕೆಟ್ಟವರು ಎಂಬ ಭಾವನೆ ಅಲ್ಲ. ನಲವತ್ತು – ಐವತ್ತು ವರ್ಷಗಳ ರಾಜಕಾರಣದಲ್ಲಿ ದ್ವೇಷದ ರಾಜಕಾರಣವನ್ನು ಹುಟ್ಟು ಹಾಕಿದ್ದು ಜ್ಞಾನೇಂದ್ರ ಒಬ್ಬರೇ ಎಂದು ಹೇಳಿದರು.
ಚಿನ್ನದ ಕಿರೀಟ ಹಾಕಿದ್ದು ಯಾರು?
ಆರ್ ಎಂ ಮಂಜುನಾಥ್ ಗೌಡರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದಾಗ ಪಕ್ಷದ ವತಿಯಿಂದ ಸನ್ಮಾನ ಮಾಡಿದೆವು. ಹಿಂದೆ ಅವರ ವಿರುದ್ಧವೂ ಹೋರಾಟ ಮಾಡಿದ್ದೇನೆ, ಗುಟ್ಟಲ್ಲಿ ಹೋರಾಟ ಮಾಡಿದ್ದಲ್ಲ ವಿಧಾನಸೌಧದಲ್ಲೇ ಹೇಳಿಕೆ ನೀಡಿರುವುದು. ನಮ್ಮ ಪಕ್ಷಕ್ಕೆ ಬಂದಿದ್ದಾರೆ ಹಾಗಾಗಿ ಅಭಿನಂದನೆ ತಿಳಿಸಿದ್ದೇವೆ. ನಾನು ಹಾರ ಹಾಕಿದರೆ ತಪ್ಪಾಗುತ್ತೆ ಆದರೆ ಇವರು ಬಿಜೆಪಿಯಲ್ಲಿದ್ದಾಗ ಚಿನ್ನದ ಕಿರೀಟ ತೊಡಿಸಿದ್ದರಲ್ಲ ಅದು ತಪ್ಪಲ್ಲವೇ? ಎಂದು ಪ್ರೆಶ್ನೆ ಮಾಡಿದರು.
ಶುದ್ಧ ನೀರನ್ನು ಸಪ್ಲೈ ಮಾಡುವ ಬಗ್ಗೆ ನಮ್ಮ ವಿರೋಧವಿಲ್ಲ:
ಕಳೆದ ಕೆಲವು ದಿನಗಳಿಂದ ತುಂಗಾ ನದಿಯ ವಿಷಯದಲ್ಲಿ ಹೋರಾಟ ಆಗುತ್ತಿದೆ. ಈ ಸಂದರ್ಭದಲ್ಲಿ ನಾನೇ 354 ಕೋಟಿ ಯೋಜನೆ ತಂದಿದ್ದರೆ ಎಲ್ಲರಿಗೂ ಕೇಸರಿ ಶಾಲು ಹಾಕಿಸಿ ಕಂಟ್ರಾಕ್ಟರ್ ಜೊತೆಗೆ ನನ್ನ ಹೆಸರು ಜೋಡಿಸಿ ಬಿಡುತ್ತಿದ್ದರು. ನಾನು 38 ಗ್ರಾಮ ಪಂಚಾಯಿತಿಗಳಲ್ಲ 62 ಗ್ರಾಮಪಂಚಾಯಿತಿಗಳು ಶುದ್ಧ ನೀರು ಕುಡಿಯಬೇಕು ಎನ್ನುವವನು. ಶುದ್ಧ ನೀರನ್ನು ಸಪ್ಲೈ ಮಾಡುವ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ಎಲ್ಲಿ ಮಾಡಬೇಕು ಎನ್ನುವದಕ್ಕೆ ಯಾರು ಪ್ರೆಶ್ನೆ ಎತ್ತಿದ್ದಾರೋ ಅವರಿಗೆ ಉತ್ತರ ನೀಡಲಿ ಎಂದರು.
ಎಲೆ ಚುಕ್ಕೆ ರೋಗಕ್ಕೆ ಇಲ್ಲಿಯವರೆಗೆ ಒಂದು ರೂ ಹಣ ಬಂದಿಲ್ಲ:
ಎಲೆ ಚುಕ್ಕೆ ರೋಗಬಂದ ಸಂದರ್ಭದಲ್ಲಿ ನಾನು ಪ್ರತಿಭಟನೆ ಮಾಡಿದ್ದೆ. ಆಗ ಅಲ್ಲಿಂದಲೇ 10 ಕೋಟಿ ಮಂಜೂರು ಮಾಡಿಸಿದ್ದೇನೆ ಎಂದರು ಆದರೆ ಅವರು ಹೇಳಿಕೆ ಕೊಟ್ಟಾಗಿನಿಂದ ಇಲ್ಲಿಯವರೆಗೆ ಒಂದು ರೂ ಹಣ ಬಂದಿಲ್ಲ. 19 ಲಕ್ಷ ಹಣ ಬಂದಿದೆ ಆದರೆ ಇವರಿಂದ ಅಲ್ಲ. ಎಲ್ಲೆಲ್ಲಿ ಎಲೆ ಚುಕ್ಕೆ ರೋಗ ಎಂದು ಹೇಳಿದ್ದರೋ ಅಲ್ಲೆಲ್ಲ ಹಣ ಕೊಟ್ಟಿದ್ದಾರೆ. ಅದರಲ್ಲಿ ಇವರ ಪ್ರಯತ್ನ ಏನಿಲ್ಲ, ನಾವು ಕಾಗೋಡು ತಿಮ್ಮಪ್ಪ ಬೇಳೂರು ಗೋಪಾಲಕೃಷ್ಣ ಕೊಟ್ಟ ಮನವಿಗೆ ಹಣ ಬಂದಿದೆ.
ನಮ್ಮ ಸರ್ಕಾರಕ್ಕೆ ಆರ್ಥಿಕವಾಗಿ ಸಮಸ್ಯೆ ಆಗಿದೆ ಎಂದರೆ ಅವರು ಮಾಡಿರುವ ಕೆಟ್ಟ ಕೆಲಸವೇ ಕಾರಣ ಎಂದರು.
ದ್ವೇಷದ ರಾಜಕೀಯಕ್ಕೆ ಇನ್ನೊಂದು ಹೆಸರೇ ಜ್ಞಾನೇಂದ್ರ:
ನವೆಂಬರ್ 1 ಕ್ಕೆ ನಂದಿತಾ ಶವ ಬಾಳೇಬೈಲಿನ ಮನೆಗೆ ಬಂದಿತ್ತು. ಸತ್ತವರದ್ದೆಲ್ಲ ಮರೆವಣಿಗೆ ಮಾಡುತ್ತಾರ? ಆತ್ಮಹತ್ಯೆ ಮಾಡಿಕೊಂಡವರದೆಲ್ಲಾ ಮೆರವಣಿಗೆ ಮಾಡುತ್ತಾರ?ನಾನು ಬೆಂಗಳೂರಿನಲ್ಲಿ ಧ್ವಜಾರೋಹಣ ಹಾರಿಸಿ ಸಂಜೆ ಇಲ್ಲಿಗೆ ಬಂದಿದ್ದೇನೆ. ಜ್ಞಾನೇಂದ್ರವರು ಶವದ ಮೆರವಣಿಗೆ ಮಸೀದಿ ರಸ್ತೆಯಲ್ಲಿ ಹೋಗಬೇಕೆಂದು ಅವರ ಕಡೆಯವರನ್ನು ಕೂರಿಸಿದ್ದಾರಲ್ಲ. ಯಾರೇ ಸತ್ತರು ಮಸೀದಿ ರಸ್ತೆಯಲ್ಲಿ ತೆಗೆದುಕೊಂಡು ಹೋಗುತ್ತಾರ? ಜ್ಞಾನೇಂದ್ರ ಅವರಿಗೆ ಆಗ ತಲೆ ಇರಲಿಲ್ಲವಾ? ದ್ವೇಷದ ರಾಜಕೀಯಕ್ಕೆ ಇನ್ನೊಂದು ಹೆಸರೇ ಜ್ಞಾನೇಂದ್ರ ಎಂದರು
ಜ್ಞಾನೇಂದ್ರರ ಆಸ್ತಿ ಎಷ್ಟು? ದೇವಸ್ಥಾನಕ್ಕೆ ಕೊಟ್ಟಿದ್ದೇಷ್ಟು? ಹೇಳಲಿ :
ಇವರು ಬಾರಿ ದೇವರ ಭಕ್ತರಲ್ವಾ? ರಾಮನ ಹೆಸರಲ್ಲಿ ಮತ ತೆಗೆದುಕೊಂಡವರಲ್ವಾ? ದೇವಸ್ಥಾನಕ್ಕೆ ಅವರು ಖಾಸಗಿಯಾಗಿ ಎಷ್ಟು ಕೊಟ್ಟಿದ್ದಾರೆ ಎಂದು ಹೇಳಲಿ, ನಾನು ಚಾಲೆಂಜ್ ಮಾಡುತ್ತೇನೆ ನಾನು ದೇವಸ್ಥಾನಕ್ಕೆ ಕೊಟ್ಟಿರುವ 10 ಪರ್ಸೆಂಟ್ ಅವರು ಕೊಟ್ಟಿಲ್ಲ. ರಾಮೇಶ್ವರ ದೇವಸ್ಥಾನಕ್ಕೆ ಎಷ್ಟು ಕೊಟ್ಟಿದ್ದೇನೆ ಎಂದು ಹೇಳಿಕೆ ನೀಡಲಿ. ನಾನು ಎಷ್ಟು ಕೊಟ್ಟಿದ್ದೇನೆ ಎಂದು ಹೇಳುತ್ತೇನೆ. ಅವರ ಆಸ್ತಿ ಎಷ್ಟು? ದೇವಸ್ಥಾನಕ್ಕೆ ಕೊಟ್ಟಿದ್ದೇಷ್ಟು? ಹೇಳಲಿ. ನಾನು 100 ಕ್ಕೂ ಹೆಚ್ಚು ದೇವಸ್ಥಾನಕ್ಕೆ 5 ಸಾವಿರದಿಂದ 5 ಲಕ್ಷದವರೆಗೂ ಖಾಸಗಿಯಾಗಿ ಕೊಟ್ಟಿದ್ದೇನೆ, ಅದನ್ನು ಬಿಟ್ಟು ಮಂಜೂರು ಮಾಡಿಸಿದ್ದು ಬೇರೆ ಎಂದರು.
ಇದನ್ನೂ ಓದಿ: Kushtagi: ಯುವಕನಿಗೆ ಪಿಎಸೈ ಕಪಾಳ ಮೋಕ್ಷ; ಪಿಎಸೈ ವಿರುದ್ದ ತಿರುಗಿದ ಸ್ಥಳೀಯರ ಪ್ರತಿಭಟನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.