Lok Sabha Polls: ಪ್ರಧಾನಿ ಮೋದಿ ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆ… ಕಿಮ್ಮನೆ ವಾಗ್ದಾಳಿ
ಭಾನುವಾರ ತೀರ್ಥಹಳ್ಳಿಗೆ ಗೀತಾ ಶಿವರಾಜ್ ಕುಮಾರ್
Team Udayavani, Mar 22, 2024, 12:50 PM IST
ತೀರ್ಥಹಳ್ಳಿ : ಶಿವಮೊಗ್ಗ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಅವರನ್ನು ಘೋಷಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳಾಗಿದ್ದಾರೆ, ಕನ್ನಡ ನೆಲ ಜಲ ವಿಷಯಕ್ಕೆ ಬಂದರೆ ಮೊದಲು ಬರುತ್ತಿದ್ದ ಡಾ. ರಾಜ್ ಕುಮಾರ್ ಅವರ ಸೊಸೆ ಹಾಗೂ ಹ್ಯಾಟ್ರಿಕ್ ಹೀರೋ ಎಂದೇ ಖ್ಯಾತಿ ಪಡೆದ ಶಿವರಾಜ್ ಕುಮಾರ್ ಅವರ ಧರ್ಮಪತ್ನಿ ಗೀತಾ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದ್ದು ತೀರ್ಥಹಳ್ಳಿಗೆ ಆಗಮಿಸಲಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಶುಕ್ರವಾರ ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಹಿಂದೆ ಜೆಡಿಎಸ್ ನಿಂದ ನಿಂತಿದ್ದ ಅವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತಿದ್ದಾರೆ ಈ ಬಾರಿ ಅವರನ್ನು ಗೆಲ್ಲಿಸಬೇಕೆಂದು ಜನರು ತೀರ್ಮಾನಿಸಿದ್ದಾರೆ. ಹಾಗಾಗಿ ತೀರ್ಥಹಳ್ಳಿಯ ಕೆಟಿಕೆ ಸಭಾಂಗಣದಲ್ಲಿ ಭಾನುವಾರ 3 ಗಂಟೆಗೆ ಆಗಮಿಸಲಿದ್ದಾರೆ. ಪ್ರತಿಯೊಬ್ಬರೂ ಕಾರ್ಯಕ್ರಮಕ್ಕೆ ಬರಬೇಕು. ನನ್ನ ಬೂತ್ ನನ್ನ ಜವಾಬ್ದಾರಿ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. 258 ಬೂತ್ ನಲ್ಲಿ ಕನಿಷ್ಠ 100 ಮತ ನಮಗೆ ಬರಬೇಕು ಎಂಬುದು ನಮ್ಮ ನಿರ್ಧಾರವಾಗಿದೆ ಎಂದರು.
ಮೋದಿ ಮತ್ತು ಬಿಜೆಪಿ ದೇಶವನ್ನು ಉಳಿಸುತ್ತಾರ ಎಂಬುದು ಪ್ರೆಶ್ನೆ ಆಗಿದೆ. ತುರ್ತು ಪರಿಸ್ಥಿತಿ ನೋಡಿದ್ದೇವೆ ಆದರೆ ಅದಕ್ಕಿಂತ 100 % ಜಾಸ್ತಿ ಕಷ್ಟ ನಾವೆಲ್ಲರೂ ಅನುಭವಿಸುತ್ತಿದ್ದೇವೆ. ವಿರೋಧ ಪಕ್ಷದವರ ಮೇಲೆ ದಾಳಿ ಮಾಡಿಸುವ ಕೆಲಸ ಮಾಡಿಸುತ್ತಿದ್ದಾರೆ. ಬಿಜೆಪಿ ಅವರೇನು ವಾಷಿಂಗ್ ಮೆಷನ್ ಆಗಿದ್ಯಾ ಎಂದು ಪ್ರೆಶ್ನಿಸಿದರು.
ಮಾಧ್ಯಮದವರು ಕೂಡ ಕೈ ಚೀಲ ಆಗಿದ್ದಾರೆ:
ಪೆಟ್ರೋಲ್ ಬಂಕ್ ನಲ್ಲಿ ಅಲ್ಲಿ ಹಣಕ್ಕೆ ಪೆಟ್ರೋಲ್ ನಿಲ್ಲುವ ಹಾಗೆ ಇವರು ಕೂಡ 40 ಸೀಟ್ ಗೆ ಹಾಗೇನಾದರೂ ಮಾಡಿದ್ದಾರಾ? ಮೋದಿವರಿಗಾಗಿ ಚುನಾವಣೆ ಮಾಡುತ್ತಿದ್ದಾರಾ? ಚುನಾವಣೆ ಆಯೋಗ ಹಾಗೂ ಐಟಿ ಅವರು ಕಾಂಗ್ರೆಸ್ ನವರ ಹಣ ಮಾತ್ರ ಸೀಜ್ ಮಾಡುವುದು ನೋಡಿದರೆ ಮೋದಿಯವರು ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆ.
ಇದು ಕೂನೆಯ ಚುನಾವಣೆ, ಮೋದಿ ಆಡಳಿತ ಸರಿ ಮಾಡದಿದ್ದರೆ ಬಾರಿ ಕಷ್ಟ ಆಗಲಿದೆ ಎಂದರು.
ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ಮಾಡೋದು ದೇಶದಲ್ಲಿ ಮೋದಿ ಮಾಡುತ್ತಿದ್ದಾರೆ. ಇಲ್ಲಿನ ಕಾರ್ಯಕರ್ತರಿಗೆ ಜ್ಞಾನೇಂದ್ರ ತೊಂದರೆ ಕೊಟ್ಟರೆ ದೇಶಕ್ಕೆ ಮೋದಿ ತೊಂದರೆ ಕೊಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಬಗ್ಗೆ ಮಾತನಾಡುವುದಿಲ್ಲ. ಹಣಕ್ಕಾಗಿ ಅಧಿಕಾರಕ್ಕಾಗಿ ಕೆಲವರು ಬಿಜೆಪಿಯಲ್ಲಿ ಇದ್ದಾರೆ. ನಾವು ಬಿಜೆಪಿ ವಿರೋಧಿ ಅಲ್ಲ ಅದರ ನಿಲುವಿಗೆ ವಿರೋಧ ಮಾಡುತ್ತಿದ್ದೇವೆ. ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ತೀರ್ಥಹಳ್ಳಿಯಲ್ಲಿ ಲೀಡ್ ತರುತ್ತೇವೆ ಎಂದರು.
ಕಳೆದ ಚುನಾವಣೆಯಲ್ಲಿ ಹಣ ಬಲದಿಂದ ಗೆದ್ದರು. ಗ್ರಾಮಪಂಚಾಯಿತಿ ಸದಸ್ಯರಿಗೆ 2 ಲಕ್ಷ ಆಫರ್ ಮಾಡಿದ್ದರು. 500 ಕ್ಕೂ ಹೆಚ್ಚು ಗ್ರಾಮಪಂಚಾಯಿತಿ ಸದಸ್ಯರು ಇದ್ದಾರೆ ಹಾಗಾದರೆ ಎಲ್ಲರಿಗೂ ಹಣ ನೀಡುತ್ತಾರ? ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸಿದ್ದಾಂತವೇ ನಮ್ಮ ವಿರೋಧವೇ ಹೊರತು ಅಭ್ಯರ್ಥಿಗಳಲ್ಲ. ಕಾನೂನು ಬದ್ದವಾಗಿ ಹಣ ಹೊಡೆಯುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಟಿವಿ ಮಾಧ್ಯಮಕ್ಕೂ ಹಣ ನೀಡಿ ಒಳಗೆ ಹಾಕಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. 24 ಗಂಟೆಗಳ ಕಾಲ ಅವರನ್ನೇ ತೋರಿಸುವ ಕೆಲಸ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕೆಸ್ತೂರು ಮಂಜುನಾಥ್, ನಾರಾಯಣ ರಾವ್, ವಿಶ್ವನಾಥ್ ಶೆಟ್ಟಿ, ರಾಘವೇಂದ್ರ ಶೆಟ್ಟಿ , ಗೀತಾ ರಮೇಶ್, ಸುಶೀಲಾ ಶೆಟ್ಟಿ,ಬಿ ಗಣಪತಿ, ಮಂಜುಳಾ ನಾಗೇಂದ್ರ, ಅಮರನಾಥ್ ಶೆಟ್ಟಿ, ವಿಲಿಯಮ್ ಮಾರ್ಟಿಸ್, ಪೂರ್ಣೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದನ್ನೂ ಓದಿ: Bengaluru: ಕಾನೂನು ಬಾಹಿರವಾಗಿ ಮಗು ದತ್ತು ಪಡೆದ ಆರೋಪ: ರೀಲ್ಸ್ ಸ್ಟಾರ್ ಸೋನು ಗೌಡ ಬಂಧನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.