ಕೋವಿಡ್ ನಿಯಂತ್ರಣಕ್ಕೆ ರಾಜ್ಯಪಾಲರು ನೇರವಾಗಿ ಬಂದಿರುವುದು ಆಶ್ಚರ್ಯ -ಕೆ.ಎಸ್.ಈಶ್ವರಪ್ಪ
Team Udayavani, Apr 20, 2021, 11:06 AM IST
ಶಿವಮೊಗ್ಗ : ಕೋವಿಡ್ ನಿಯಂತ್ರಣಕ್ಕೆ ರಾಜ್ಯಪಾಲರು ನೇರವಾಗಿ ಬಂದಿರುವುದು ಆಶ್ಚರ್ಯವಾಗಿದೆ. ಚುನಾಯಿತ ಪ್ರತಿನಿಧಿಗಳ ಸರ್ಕಾರ ಇರುವ ಸಂದರ್ಭದಲ್ಲಿ ಅವರು ಸಭೆ ಯಾವುದಕ್ಕೆ ಕರೆದಿದ್ದಾರೋ ಅರ್ಥವಾಗುತ್ತಿಲ್ಲಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾತಾನಾಡಿದ ಅವರು, ಕೋವಿಡ್ ನಿಯಂತ್ರಣದ ವಿಚಾರದಲ್ಲಿ ರಾಜ್ಯಪಾಲರು,ಸಿಎಂ, ವಿಪಕ್ಷ ನಾಯಕರು ಸೇರಿದಂತೆ ಹಲವರನ್ನು ಸಭೆಗೆ ಕರೆದಿದ್ದಾರೆ. ಇದು ಒಳ್ಳೆಯದೇ. ನಾನು ರಾಜ್ಯಪಾಲರು ಸಭೆ ಕರಿಯಬಾರದು ಎಂದು ಹೇಳುತ್ತಿಲ್ಲ.ಇದು ರಾಜ್ಯದಲ್ಲಿ ಒಂದು ಹೊಸ ವ್ಯವಸ್ಥೆವೊಂದರ ಹುಟ್ಟಿಗೆ ಕಾರಣವಾಗಯತ್ತದೆ ಅಂಥ ನನ್ನಗೊಂದು ಅನುಮಾನ ಉಂಟಾಗಿದೆ ಎಂದು ಹೇಳಿದರು.
ಕೋವಿಡ್ ನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯಪಾಲರು ಸಭೆ ಕರೆದಿರಬಹುದು.ಚುನಾಯಿತ ಪ್ರತಿನಿಧಿಗಳು ಜಾಗೃತಿ ಅಗಬೇಕು ಅನ್ನುವ ಉದ್ದೇಶದಿಂದ ಕರೆದಿರಬಹುದು. ಅವರು ಏನೇ ಮಹತ್ವದ ತೀರ್ಮಾನ ಕೈಗೊಂಡರೂ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದರು.
ಲಾಕ್ ಡೌನ್ ವಿಚಾರದ ಕುರಿತು ಮಾತಾನಾಡಿದ ಅವರು, ರಾಜ್ಯದಲ್ಲಿ ಲಾಕ್ ಡೌನ್ ಅವಶ್ಯಕತೆಯಿಲ್ಲ. ಇದರಲ್ಲಿ ಯಾವುದೇ ಅನುಮಾನವಿಲ್ಲ.ಆದ್ರೂ, ರಾಜ್ಯಪಾಲರು ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರುತ್ತೇವೆ ಎಂದರು.
ಕೋವಿಡ್ ಕೇಸ್ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜನಜಾಗೃತಿಯೇ ಪರಿಹಾರ. ಪ್ರತಿಯೋಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.