Shimoga; ತಲ್ವಾರ್ ಗೆ ತಲ್ವಾರ್ ಹಿಡಿದು ಉತ್ತರ ಕೊಡಲು ಹಿಂದೂಸಮಾಜಕ್ಕೆ ಬರುತ್ತದೆ: ಈಶ್ವರಪ್ಪ
Team Udayavani, Oct 2, 2023, 2:01 PM IST
ಶಿವಮೊಗ್ಗ: ಶಿವಮೊಗ್ಗದಲ್ಲಿ ಗಲಾಟೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಮುಸ್ಲಿಂ ರ ಗುಲಾಮರ ರೀತಿಯಾಗಿದೆ. ತಲ್ವಾರ್ ಗೆ ತಲ್ವಾರ್ ಹಿಡಿದು, ಉತ್ತರ ಕೊಡಲು ಹಿಂದೂ ಸಮಾಜಕ್ಕೆ ಬರುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಹಿಂದೂ ಸಮಾಜದ ಕಾರ್ಯಕ್ರಮವಾಗುತ್ತದೆ. ಮುಸಲ್ಮಾನರ ಕಾರ್ಯಕ್ರಮ ಕೂಡವಾಗುತ್ತಿದೆ. ಮೊನ್ನೆ ಅನಂತನ ಚತುರ್ದಶಿ ದಿನ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮಾಡಲಾಯ್ತು. ಮಕ್ಕಳು, ಮಹಿಳೆಯರು ಎಲ್ಲರೂ ಸೇರಿ ಎರಡು ಲಕ್ಷಕ್ಕೂ ಅಧಿಕ ಜನ ಸೇರಿ ಹಬ್ಬ ಮಾಡಿದರು. ಯಾವುದೇ ಗಲಾಟೆಯಾಗಲಿಲ್ಲ. ಲಕ್ಷಾಂತರ ಜನ ಸೇರಿ ಹಲವು ಕಾರ್ಯಕ್ರಮ ಮಾಡಿದರೂ ಗಲಾಟೆಯಾಗಲ್ಲ. ಆದರೆ, ನಿನ್ನೆ ಮುಸಲ್ಮಾನರ ಮೆರವಣಿಗೆಯಲ್ಲಿ ಗಲಭೆಯಾಗಿದೆ, ರಾಜ್ಯ ಸರ್ಕಾರ ತಲೆ ತಗ್ಗಿಸಬೇಕು ಎಂದರು.
ಮೆರವಣಿಗೆ ಹೋಗುವ ಸಂದರ್ಭದಲ್ಲಿ ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ಹೋಗುತ್ತಾರೆ. ಯಾರಿಗೆ ಎಚ್ಚರ ಅದು? ಹಿಂದೂ ಸಮಾಜಕ್ಕಾ? ಶಿವಮೊಗ್ಗ ನಗರದಲ್ಲಿ ದೊಡ್ಡ ದೊಡ್ಡ ತಲ್ವಾರ್ ನೇತು ಹಾಕಿದ್ದಾರೆ. ಕೋಲಾರದಲ್ಲೂ ಹಾಕಿದ್ದರು ಆದರೆ ಅಲ್ಲಿನ ಸಂಸದರ ಎಚ್ಚರಿಕೆ ಬಳಿಕ ತೆಗೆದರು. ಅದು ಗೊತ್ತಿದ್ದರೂ ಇಲ್ಲಿ ದೊಡ್ಡ ಖಡ್ಗ ಹಾಕಲು ಯಾಕೆ ಬಿಟ್ಟರು? ಪೊಲೀಸನವರು ಸರ್ಕಾರಕ್ಕೆ ಹೆದರಿ ಹೋಗಿದ್ದಾರೆ. ತಲ್ವಾರ್ ಗೆ ತಲ್ವಾರ್ ಹಿಡಿದು, ಉತ್ತರ ಕೊಡಲು ಹಿಂದೂ ಸಮಾಜಕ್ಕೆ ಬರುತ್ತದೆ. ಇದು ಸಿಎಂ, ಗೃಹ ಮಂತ್ರಿ ಹಾಗೂ ಮುಸ್ಲಿಂರಿಗೆ ಎಚ್ಚರಿಕೆ. ತಲ್ವಾರ್ ಹಿಡಿದು ಟ್ರಾಕ್ಟರಿನಲ್ಲಿ ಹೋದರೂ ಅರೆಸ್ಟ್ ಮಾಡದ ಇವರು ಪೊಲೀಸ್ ಆಗಲು ಅನ್ ಫಿಟ್. ಕಾಂಗ್ರೆಸ್ ಸರ್ಕಾರ ಮುಸ್ಲಿಂ ರ ಗುಲಾಮರ ರೀತಿಯಾಗಿದೆ ಎಂದು ಗುಡುಗಿದರು.
ಶಿವಮೊಗ್ಗದಲ್ಲಿ ಗಲಾಟೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಖಡ್ಗ ಹಾಕಿ ಯಾರಿಗೆ ಸ್ಫೂರ್ತಿ ಕೊಡುತ್ತಾರೆ? ಅವರೆಲ್ಲಾ ದೇಶ ದ್ರೋಹಿಗಳು. ಮುಸ್ಲಿಂ ಸಮಾಜ ಹಬ್ಬವನ್ನು ಮಾಡಿಲ್ಲ, ಅವರು ಹಿಂದೂ ಸಮಾಜಕ್ಕೆ ಎಚ್ಚರಿಕೆ ರೀತಿ ಮಾಡಿದ್ದಾರೆ. ಇದೆಲ್ಲಾ ಸರ್ಕಾರಕ್ಕೆ ಗೊತ್ತಿಲ್ಲವೇ ಎಂದರು.
ಇದನ್ನೂ ಓದಿ:Shimoga ಗಲಭೆ ನಡೆಸಲು ಮೊದಲೇ ಪ್ಲ್ಯಾನ್?; ಓಮಿನಿಯಲ್ಲಿ ಬಂದಿದ್ದರು 15 ಕಿಡಿಗೇಡಿಗಳು
ರಾಗಿಗುಡ್ಡಕ್ಕೆ ನಮ್ಮ ಶಾಸಕರು ಹೋಗಿ ಬಂದಿದ್ದಾರೆ. ಮನೆಗಳಿಗೆ ನುಗ್ಗಿ ನುಗ್ಗಿ ಹೊಡೆದಿದ್ದಾರೆ. ಕಲ್ಲು ತೂರಾಟ ಮಾಡಿದ್ದಾರೆ. ಹಿಂದೂ ಮನೆಗಳಿಗೆ ಮಾತ್ರ ಕಲ್ಲು ಹೊಡೆದು, ಒಳ ನುಗ್ಗಿದ್ದಾರೆ. ಮುಸ್ಲಿಂ ಮನೆಗಳಿಗೆ ಯಾವುದೇ ಕಲ್ಲು ಬಿದ್ದಿಲ್ಲ. ಕರ್ತವ್ಯದಲ್ಲಿದ್ದ ಹಲವು ಪೊಲೀಸರಿಗೂ ಕಲ್ಲು ಬಿದ್ದಿದೆ. ಪೊಲೀಸರು ಮೆರವಣಿಗೆಗೆ ಅನುಮತಿ ಕೊಟ್ಟ ರೂಟ್ ಬೇರೆ ಆದರೆ ಅವರು ಹೋಗಿದ್ದೇ ಬೇರೆ. ಸಂಜೆ 6 ಗಂಟೆಗೆ ಮೆರವಣಿಗೆ ಮುಗಿಸಲು ಹೇಳಿದರೂ 7.30 ವರೆಗೂ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ? ಸರ್ಕಾರ ಬದುಕಿದಿಯಾ? ಗೃಹಮಂತ್ರಿಗಳು ಬರಲಿ…, ಆ ಏರಿಯಾದ ಮನೆಗಳಿಗೆ ಹೋಗಿ ನೋಡಲಿ. ಸಣ್ಣಪುಟ್ಟ ಗಲಾಟೆ, ತಲ್ವಾರ್ ಹಿಡಿದಿಲ್ಲ ಎನ್ನುವ ಸಚಿವ ಗೃಹಮಂತ್ರಿ ಅಗಲು ಅನ್ ಫಿಟ್, ರಾಜೀನಾಮೆ ಕೊಡಲಿ ಎಂದರು.
ಶಿವಮೊಗ್ಗದಲ್ಲಿ ಹಿಂದೂ ಸಮಾಜ ಎದ್ದು ನಿಂತರೇ, ಮುಸಲ್ಮಾನ ಸಮಾಜ ಉಳಿಯುತ್ತಾ? ಹಿಂದೂ ಸಮಾಜದ ಯಾರು ಕೂಡ ಕಲ್ಲು ಹೊಡೆದಿಲ್ಲ. ಸಂಘಟನೆಗಳಲ್ಲಿ ಸಕ್ರೀಯರಾದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದ್ದಾರೆ. ಮುಸಲ್ಮಾನರ ರಕ್ಷಣೆಗೆ ಮಾತ್ರ ಕಾಂಗ್ರೆಸ್ ಸರ್ಕಾರ, ಪೊಲೀಸ್ ಇಲಾಖೆ ಇರುವುದಾ? ಹಿಂದೂಗಳ ರಕ್ಷಣೆ ಮಾಡಲ್ಲವಾ ಎಂದು ಪ್ರಶ್ನಿಸಿದರು.
ಪೊಲೀಸರಿಗೂ ಹೊಡೆದಿದ್ದಾರೆ. ಆಸ್ಪತ್ರೆಗೆ ಹೋದರೆ ಅವರು ಡಿಸ್ಚಾರ್ಜ್ ಮಾಡಿಸಿದ್ದಾರೆ. ಹೊಡೆತ ತಿಂದವರನ್ನು ಎಬ್ಬಿಸಿ, ಮನೆಗೆ ಕಳುಹಿಸಿದ್ದಾರೆ. ಸಾವಿರಾರು ಜನ ಗುಂಡಾಗಿರಿ ಮಾಡಿದ್ದಾರೆ. 30-40 ಅರೆಸ್ಟ್ ಮಾಡಿದರೆ ಸಾಕಾ? ನೀವು ಮುಸ್ಲಿಂರ ರಕ್ಷಣೆ ಮಾಡಿದರೆ ಮತ್ತೆ ಇದನ್ನೇ ಮುಂದುವರೆಸುತ್ತಾರೆ ಎಂದರು.
ಇಡೀ ಶಿವಮೊಗ್ಗ ನಗರಕ್ಕೆ ಯಾಕೆ 144 ಸೆಕ್ಷನ್ ಹಾಕಿದ್ದಾರೆ. ಬೇರೆ ವ್ಯಾಪಾರಸ್ಥರು ಏನು ಮಾಡಬೇಕು? ಎಲ್ಲಾ ಕಡೆ ಶಾಂತವಾಗಿದೆ. ಹಿಂದೂ ಸಮಾಜ ಶಾಂತವಾಗಿದೆ. ಎಲ್ಲಿ ಗಲಾಟೆ ಮಾಡುವವರಿದ್ದಾರೋ ಅಲ್ಲಿ ನಿಷೇಧಾಜ್ಞೆ ಮಾಡಿ. ಬೇರೆ ಕಡೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಿ. ಶಿವಮೊಗ್ಗ ಶಾಂತಿ ಕಾಪಾಡಲು ಬಿಜೆಪಿ, ಹಿಂದೂ ಸಮಾಜ ಸಹಕಾರ ನೀಡುತ್ತದೆ ಎಂದು ಈಶ್ವರಪ್ಪ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.