Shimoga;ಒಂದೆಡೆ ಬೆಂಬಲ,ಮತ್ತೊಂದೆಡೆ ಸಿಎಂಪದವಿ ಹಂಬಲ: ಕಾಂಗ್ರೆಸ್ ವಿರುದ್ದ ಈಶ್ವರಪ್ಪ ಟೀಕೆ
Team Udayavani, Sep 9, 2024, 1:21 PM IST
ಶಿವಮೊಗ್ಗ: ಎಲ್ಲರೂ ಮುಖ್ಯಮಂತ್ರಿ ಸ್ಥಾನದ ಹಿಂದೆ ಬಿದ್ದಿದ್ದಾರೆ. ನೀವು ಯಾರಾದರೂ ಮುಖ್ಯಮಂತ್ರಿಯಾಗಿ ನಮಗೆ ಬೇಜಾರಿಲ್ಲ. ಸಿಎಂ ರೇಸ್ ನಲ್ಲಿ ಸಿದ್ದರಾಮಯ್ಯ (Siddaramaiah) ಬಿಟ್ಟು 135 ಜನ ಹೋಗಲಿ ಅಭ್ಯಂತರವಿಲ್ಲ. ಪಟ್ಟಿ ಹೇಳುತ್ತಾ ಹೋದರೆ ಚುನಾವಣೆ ಲಿಸ್ಟ್ ರೀತಿ ಆಗುತ್ತದೆ. ಒಂದು ಕಡೆ ಬೆಂಬಲ ಎನ್ನುತ್ತಾರೆ ಇನ್ನೊಂದು ಕಡೆ ಹಂಬಲ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ಮಾಡಿದ ಅಪಮಾನ ಇದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ (K. S. Eshwarappa) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ರಾಜೀನಾಮೆ ಕೋಡಬೇಕಿತ್ತು. ನನ್ನ ಮೇಲೆ ಅಪಾದನೆ ಬಂದಾಗ ರಾಜೀನಾಮೆ ಕೊಟ್ಟೆ. ಜಾರ್ಜ್ ಸಹ ರಾಜೀನಾಮೆ ಕೊಟ್ಟಿದ್ದರು ನಂತರ ಮಂತ್ರಿ ಸಹ ಆದರು. ಆದರೆ ತೀರ್ಪು ಬಂದರೂ ರಾಜೀನಾಮೆ ಕೊಡಲ್ಲ ಎನ್ನುತ್ತಾರೆ. ಸಿದ್ದರಾಮಯ್ಯ ನವರು ತಪ್ಪಿತಸ್ಥರಲ್ಲವೆಂದು ತಿರ್ಪು ಬರಲೆಂದು ಬೇಡಿಕೊಳ್ಳುತ್ತೇನೆ. ಕಾಂಗ್ರೆಸ್ ಸರ್ಕಾರವೇ ಐದು ವರ್ಷ ಆಡಳಿತ ಮಾಡಲಿ ಜನ ಆಯ್ಕೆ ಮಾಡಿದ್ದಾರೆ. ಸಿಎಂ ರಾಜೀನಾಮೆ ನೀಡಿದ ಮೇಲೆ ಇವರ ಯಕ್ಷಗಾನ ನೋಡಬೇಕು ಎಂದರು.
ಡಿಸಿಎಂ ಫಾರಿನ್ ಬೇಕಾದರೂ ಹೋಗಲಿ ಎಲ್ಲಾದರೂ ಹೋಗಲಿ. ಬಂಡೆ ತರ ನಿಲ್ಲುತ್ತಾರೋ, ತಲೆ ಮೇಲೆ ಬಂಡೆ ಹಾಕುತ್ತಾರೋ ನೋಡೊಣ ಎಂದರು.
ಸಿದ್ದು ಮುಸ್ಲಿಂ ಓಲೈಕೆ
ಸಿಎಂ ಹಣೆಗೆ ಕುಂಕುಮವೇ ಹಚ್ಚುತ್ತಿರಲಿಲ್ಲ ಈಗ ದೇವಸ್ಥಾನಕ್ಕೆ ಹೋಗಿ ಕುಂಕುಮ ಹಚ್ಚಿಕೊಳ್ಳುತ್ತಿದ್ದಾರೆ. ಮುಸ್ಲಿಮರಿಗಾಗಿ ನಾಟಕೀಯವಾಗಿ ಸಿದ್ದರಾಮಯ್ಯ ಬದುಕುತಿದ್ದಾರೆ. ಸಿದ್ದರಾಮಯ್ಯ ಪೂರ್ಣವಾಗಿ ಮುಸ್ಲಿಂಮರಿಗೆ ಒಪ್ಪಿಸಿಕೊಂಡಿದ್ದಾರೆ. ಈ ಹಿಂದೆ ದೇವೇಗೌಡರು ಹೀಗೆ ಮಾಡಿದ್ದರು. ಮುಸ್ಲಿಂರನ್ನು ಸಂತೃಪ್ತಿಪಡಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಪೇಟ, ಕುಂಕುಮ ಇಟ್ಟುಕೊಳ್ಳಲು ಯಾಕೆ ಹಿಂದೆ ಸರಿಯುತ್ತೀರಿ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಇರಬಾರದು. ರಾಧಾಕೃಷ್ಣ ಎನ್ನುವರಿಗೆ ಸರ್ಕಾರವೇ ಪ್ರಶಸ್ತಿ ಆದೇಶ ಮಾಡಿತ್ತು. ಎಸ್ ಡಿಪಿಐ ನವರು ಹೇಳಿದ ತಕ್ಷಣ ಪ್ರಶಸ್ತಿ ತಡೆಹಿಡಿದಿದ್ದೀರಿ. ಕೂಡಲೇ ರಾಜ್ಯ ಸರ್ಕಾರ ಪ್ರಶಸ್ತಿ ಕೊಡಬೇಕು. ಐವಾನ್ ಡಿಸೋಜಾ ಮೇಲೆ ಏನು ಕ್ರಮ ಕೈಗೊಂಡಿದ್ದೀರಾ ಹೇಳಿ ಎಂದು ಪ್ರಶ್ನಿಸಿದರು.
ದೇವರ ಪ್ರಸಾದ ಕೊಡುವಾಗ ಆರೋಗ್ಯ ಇಲಾಖೆಯಿಂದ ಪರೀಕ್ಷೆ ಮಾಡಬೇಕು ಎನ್ನುತ್ತಾರೆ. ರಂಜಾನ್ ಮಾಡುವಾಗ ಸಹ ಆಹಾರ ಪರೀಕ್ಷೆ ಮಾಡುತ್ತೀರಾ? ನೀವು ಎಷ್ಟೇ ಮುಸ್ಲಿಂಮರ ವೋಟು ಪಡೆದರೂ ದೇಶ ನಮ್ಮ ಕೈಯಲ್ಲೇ ಇರುತ್ತದೆ. ಹೆಚ್ಚು ಎಂಪಿ, ಎಂಎಲ್ಎಗಳು ನಮ್ಮವರೇ ಇದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಪರಿಹಾರಕ್ಕೆ ಆಗ್ರಹಿಸಿ ಜೈಲ್ ಭರೋ ಪ್ರತಿಭಟನೆ
ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಹೊರಬರಲು ಚಂದ್ರಶೇಖರನ್ ಕಾರಣ. ಈ ಭ್ರಷ್ಟಾಚಾರದ ಬಗ್ಗೆ ತನಿಖೆ ಮುಂದುವರೆದಿದೆ. ತನ್ನ ಕುಟುಂಬದ ಪರಿಸ್ಥಿತಿ ಸರಿ ಇಲ್ಲದಿದ್ದರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಪರಿಹಾರ ಒಂದು ರೂ. ಕೂಡ ಇನ್ನೂ ನೀಡಿಲ್ಲ. 25 ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ನಾನು ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹಾದೇವಪ್ಪನವರಿಗೆ ದೂರವಾಣಿ ಮೂಲಕ ಮಾತನಾಡಿದೆ. ನಾನು ಈ ಬಗ್ಗೆ ಗಮನ ನೀಡುತ್ತೇನೆ ಎಂದಿದ್ದರು. ಮುಖ್ಯಮಂತ್ರಿಗಳು ಪರಿಹಾರದ ಹಣ ನೀಡಲು ತಿಳಿಸಿದ್ದಾರೆ ಎಂದಿದ್ದರು. ಇದು ಹೇಳಿ ಹತ್ತು ದಿನಗಳಾಗಿವೆ. ಆದರೂ ಈವರೆಗೂ ಪರಿಹಾರದ ಹಣ ನೀಡಿಲ್ಲ. ಹೀಗಾಗಿ ನಾವು ಹಿಂದೆ ಹೇಳಿದಂತೆ ರಾಷ್ಟ್ರಭಕ್ತ ಬಳಗದಿಂದ 5 ಲಕ್ಷ ರೂ. ಪರಿಹಾರ ನೀಡಲಿದ್ದೇವೆ ಎಂದು ಈಶ್ವರಪ್ಪ ಹೇಳಿದರು.
ಸಮಾಜಕ್ಕೋಸ್ಕರ ಜೀವನವನ್ನೇ ಮುಡುಪಾಗಿಟ್ಟವರಿಗೆ ನಾವು ನೀಡುತ್ತೇವೆ. ಸೆ. 20 ರವರೆಗೆ ನಮ್ಮ ಬೇಡಿಕೆ ಈಡೇರಿಸದೆ ಇದ್ದರೆ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಿದ್ದೇವೆ. ನಮಗೆ ಜೈಲಿಗೆ ಹೋಗುವ ಚಟವಿಲ್ಲ. ಆದರೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲಿ ಎಂಬುದೇ ನಮ್ಮ ಉದ್ದೇಶ. ರಾಜ್ಯ ಸರ್ಕಾರ ಬದುಕಿದ್ದರೆ ಪರಿಹಾರದ ಹಣ ಬಿಡುಗಡೆ ಮಾಡಲಿ. ರಾಜ್ಯ ಸರ್ಕಾರ ಕೇವಲ ರಾಜಕೀಯದಲ್ಲಿ ತೊಡಗಿಕೊಂಡಿದೆ. ಮುಖ್ಯಮಂತ್ರಿ ಯಾರು ಆಗಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಯಾರಾದರೂ ಸಿಎಂ ಆಗಿ ಹಾಳಾಗಿ ಹೋಗಲಿ. ಮೊದಲು ಚಂದ್ರಶೇಖರನ್ ಕುಟುಂಬಕ್ಕೆ ಪರಿಹಾರದ ಹಣ ನೀಡಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
BPL: ತೆರಿಗೆದಾರರು, ಸರ್ಕಾರಿ ನೌಕರರ ಕಾರ್ಡ್ ಮಾತ್ರ ರದ್ದು: ಗೊಂದಲಕ್ಕೆ ಸಚಿವರ ಸ್ಪಷ್ಟನೆ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.