ಕುಮಾರ್ ಸ್ಯಾಡಿಸ್ಟ್: ಮಧು ಬಂಗಾರಪ್ಪ
Team Udayavani, Mar 30, 2018, 6:55 AM IST
ಶಿವಮೊಗ್ಗ: ಸೋತಿರುವವರ ಮಾತಿಗೆ ಪ್ರತಿಕ್ರಿಯೆ ಕೊಡುವ ಅಗತ್ಯವಿಲ್ಲ. ಅಲ್ಲದೆ ಮನೆತನದ ವಿಷಯಗಳ ಕುರಿತು ಬಹಿರಂಗವಾಗಿ ಮಾತನಾಡುವ ಅವಶ್ಯಕತೆಯೂ ಇಲ್ಲ ಎಂದು ಶಾಸಕ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯೇ ಆಗಿಲ್ಲ ಎಂದು ಇತರರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಸೊರಬ ಕ್ಷೇತ್ರದಲ್ಲಿ ಏನು ಅಭಿವೃದ್ಧಿಯಾಗಿದೆ ಎಂದು ಜನರಿಗೆ ಗೊತ್ತಿದೆ. ಜನ ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ ಎಂದರು.
ರಾಜ್ ಕುಟುಂಬ ಬಂಗಾರಪ್ಪನವರ ಕುಟುಂಬ ಸೇರಿಸಲು ಪ್ರಯತ್ನಿಸಿದರೆ ಮಧು ಅಡ್ಡಗಾಲು ಹಾಕುತ್ತಿದ್ದಾನೆಂಬ ಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರ ಬಗ್ಗೆ ನಾನು ಮಾತನಾಡಲು ಸಿದ್ಧನಿಲ್ಲ. ಅಮಾವಾಸ್ಯೆ ಬಂದಾಗ ಕೆಲವರಿಗೆ ತಲೆ ಕೆಡುತ್ತದಂತೆ. ಹಾಗೆಯೇ ಇವರು ಕೂಡ ಒಂದು ರೀತಿಯಲ್ಲಿ ಸ್ಯಾಡಿಸ್ಟ್ ಎಂದು ಹರಿಹಾಯ್ದರು. ರಾಜ್‌ಕುಮಾರ್ ಕುಟುಂಬದ ಕುರಿತು ಮಾತನಾಡಲು ಅವರು ಯಾರಿಗೂ ಪರವಾನಗಿ ನೀಡಿಲ್ಲ. ನಾವ್ಯಾರೂ ಸ್ಫೋಕ್ಸ್ ಪರ್ಸನ್ ಅಲ್ಲ. ಆ ಕುಟುಂಬದ ಕುರಿತು ಯಾರೂ ಮಾತನಾಡಬಾರದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್ ಆಗಲಿ: ವಿ.ಸೋಮಣ್ಣ
BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್
Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…
Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.