Linganamakki ಅಣೆಕಟ್ಟಿನಲ್ಲಿ ನೀರಿಲ್ಲ; ಜೋಗ ಜಲಪಾತವೂ ಕಣ್ಣೀರ ಧಾರೆ!
Team Udayavani, Aug 15, 2023, 4:30 PM IST
ಸಾಗರ: ಜುಲೈನ ಎಂಟು ದಿನಗಳ ಮಳೆಯ ಹೊರತಾಗಿ ಶರಾವತಿ ಕಣಿವೆ ಪ್ರದೇಶದಲ್ಲಿ ವಾಡಿಕೆಯ ಮಳೆಯಾಗದ ಕಾರಣ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿಲ್ಲ. ಬೇಸಿಗೆಯ ಸಂದರ್ಭದಲ್ಲಿ ಇರುವಂತಹ ನೀರು ಜಲಾಶಯದಲ್ಲಿದ್ದು, 2022ನೇ ಸಾಲಿಗೆ ಹೋಲಿಸಿದರೆ ಸಂಗ್ರಹವಾಗಿರುವ ನೀರಿನ ಮಟ್ಟ ಸುಮಾರು 21 ಅಡಿಗಳಷ್ಟು ಕಡಿಮೆಯಿದೆ.
ವಾಸ್ತವವಾಗಿ ನೀರಿನ ಮಟ್ಟ ಏರಿದಂತೆ ಎರಡು ಸಾವಿರ ಚ.ಕಿ.ಮೀ ಜಲಾಯನಯನ ಪ್ರದೇಶದ ವ್ಯಾಪ್ತಿ ಇರುವ ಜಲಾಶಯದ ಪಾತಳಿ ವಿಸ್ತರಿಸುತ್ತ ಹೋಗುವುದರಿಂದ ತಳದ ಏರಿಕೆಗಿಂತ ಸಮುದ್ರ ಮಟ್ಟದಿಂದ 1800 ಅಡಿ ದಾಟಿದ ನಂತರ ಹೆಚ್ಚಿನ ನೀರು ಸಂಗ್ರಹವಾಗುತ್ತದೆ.
ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರು 1,795 ಅಡಿ ತಲುಪುವಾಗ ಅದನ್ನು ಬೆಡ್ ಲೆವೆಲ್ ಎಂದು ಕರೆಯಲಾಗುತ್ತಿತ್ತು.ಅಣೆಕಟ್ಟೆಯ 11ಕ್ರೆಸ್ಟ್ ಗೇಟಿನ ತಳದ ಮಟ್ಟಕ್ಕೆ ನೀರು ತಲುಪಿದಾಗ ಅದನ್ನು ಬೆಡ್ ಲೆವೆಲ್ ಎಂದು ಕೆಪಿಸಿ ಅಧಿಕಾರಿಗಳು ಗುರುತಿಸುತ್ತಾರೆ. ಆದರೆ ಈ ಬಾರಿ ಬೆಡ್ ಮಟ್ಟವನ್ನು ಕೂಡ ಅಣೆಕಟ್ಟೆಯ ನೀರು ತಲುಪಿಲ್ಲ. ಜೂನ್ 10ರಿಂದ ಆರಂಭವಾಗುವ ಮಳೆ ಆಗಸ್ಟ್ ಎರಡನೇ ವಾರದ ವೇಳೆಗೆ ಬಹುಪಾಲು ತುಂಬಬೇಕಿತ್ತು. ಕಳೆದ ವರ್ಷ ಜುಲೈ 19ರ ವೇಳೆಗೇ ಜಲಾಶಯದ ನೀರಿನ ಮಟ್ಟ ಬೆಡ್ ಲೆವೆಲ್ ತಲುಪಿತ್ತು.
ನೆಲಮಟ್ಟದಿಂದ 24 ಅಡಿ ಎತ್ತರವನ್ನು ಪ್ರತಿಯೊಂದು ಕ್ರೆಸ್ಟ್ ಗೇಟ್‌ಗಳು ಹೊಂದಿರುತ್ತವೆ. ಕೆಪಿಸಿ ಇಲಾಖೆ ಅಧಿಕಾರಿಗಳ ಅಂದಾಜಿನ ಪ್ರಕಾರ, ಬೆಡ್ ಲೆವೆಲ್ ಮಟ್ಟಕ್ಕೆ ಜಲ ಸಂಗ್ರಹಗೊಂಡರೆ ಒಂದು ವರ್ಷ ಪೂರ್ತಿ ಸಾಧಾರಣ ಮಟ್ಟದಲ್ಲಿ ಜಲವಿದ್ಯುದಾಗಾರಗಳನ್ನು ನಿರ್ವಹಣೆ ಮಾಡಲು ಸಾಧ್ಯ. ಹಾಗಾಗಿ 1,795ಅಡಿ ತಲುಪಿರುವುದು ಅಣೆಕಟ್ಟೆಯ ಪಾಲಿಗೆ ಮೈಲುಗಲ್ಲು ಎನ್ನಲಾಗುತ್ತದೆ. ಈ ಹಿಂದಿನ ಹಲವು ವರ್ಷಗಳಲ್ಲಿ ಆಗಸ್ಟ್ 15ರಂದು ಜಲಾಶಯ ಭರ್ತಿಯಾಗಿ ರೇಡಿಯಲ್ ಗೇಟ್ ಮೂಲಕ ಹೆಚ್ಚುವರಿ ನೀರನ್ನು ಹೊರಹಾಯಿಸಲಾಗಿತ್ತು. ಆದರೆ ಈ ಬಾರಿ ಜಲಾಶಯ ಭರ್ತಿಯಾಗುವುದು ಕಷ್ಟವಾಗಿದೆ ಎಂದು ಕೆಪಿಸಿ ಅಧಿಕಾರಿಗಳೇ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸಮುದ್ರ ಮಟ್ಟದಿಂದ ಗರಿಷ್ಠ 1819 ಅಡಿಯವರೆಗೆ ಅಣೆಕಟ್ಟೆ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಸದ್ಯ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರು 1790.70ಅಡಿಗಳಷ್ಟು ಮಾತ್ರ. ಜಲಾಶಯ ಭರ್ತಿಯಾಗಲು ಇನ್ನೂ 27 ಅಡಿಗಳಷ್ಟು ಬಾಕಿ ಇದೆ. ಜಲಾಶಯದ ಒಳಹರಿವು 6711ಕ್ಯುಸೆಕ್ ಇದ್ದು, ಹೊರಹರಿವು 6571 ಕ್ಯುಸೆಕ್ ಇದೆ. ಸದ್ಯ 74.69 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ.
ಈ ನಡುವೆ ಪ್ರವಾಸಿಗರ ಸಂಖ್ಯೆ ಕೂಡ ಕುಸಿಯುತ್ತಿದೆ. ಜೋಗ ಜಲಪಾತದಲ್ಲೂ ನೀರಿನ ಹರಿವು ಕಡಿಮೆಯಾಗಿರುವುದರಿಂದ ಜೋಗ ಜಲಪಾತದ ವೈಭವ ನೋಡುವ ಪ್ರವಾಸಿಗರ ಬಯಕೆಗೆ ಇಂಬು ಲಭ್ಯವಾಗುತ್ತಿಲ್ಲ. ಜಲಪಾತದ ಸೌಂದರ್ಯ ಸವಿಯಲು ಬರುವ ಪ್ರವಾಸಿಗರು ನಿರಾಸೆಯಿಂದ ವಾಪಸಾಗುತ್ತಿದ್ದಾರೆ. ಭೋರ್ಗರೆದು ಧುಮುಕುವ ಜೋಗ ನೋಡಲು ಸಿಗದು ಎಂಬ ಕಾರಣಕ್ಕಾಗಿಯೇ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆಗಸ್ಟ್ 15 ರಜಾದಿನವಾಗಿದ್ದರೂ ಅಂತಹ ಪ್ರಮಾಣದ ಪ್ರವಾಸಿಗರು ಜೋಗದಲ್ಲಿ ಕಾಣಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.