ಭದ್ರಾವತಿ ನಗರಸಭೆ-ತೀರ್ಥಹಳ್ಳಿ ಪಪಂಗೆ ಕೊನೆಗೂ ಚುನಾವಣೆ ಘೋಷಣೆ
Team Udayavani, Mar 30, 2021, 3:23 PM IST
ಶಿವಮೊಗ್ಗ: ಅವಧಿ ಮುಗಿದ ಎರಡೂವರೆ ವರ್ಷಗಳ ಬಳಿಕ ಭದ್ರಾವತಿ ನಗರಸಭೆ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯತ್‌ಗೆ ಕೊನೆಗೂ ಚುನಾವಣೆಘೋಷಣೆಯಾಗಿದೆ. ವಾರ್ಡ್ ಮೀಸಲಾತಿ ಆಕ್ಷೇಪಣೆ ಕಾರಣಕ್ಕೆ ಚುನಾವಣೆ ಮುಂದೂಡಿಕೆಯಾಗಿತ್ತು. ಸರಕಾರ ತಿಂಗಳ ಹಿಂದೆ ಪರಿಷ್ಕೃತ ಮೀಸಲಾತಿಪ್ರಕಟಿಸಿದ್ದು ಯಾವುದೇ ತಕರಾರು ಇಲ್ಲದೇ ಅಂತಿಮಗೊಂಡಿದೆ.
ಬಹಳ ವರ್ಷದಿಂದ ಚುನಾವಣೆ ನಿರೀಕ್ಷೆಯಲ್ಲಿದ್ದಅಭ್ಯರ್ಥಿಗಳು ಚುನಾವಣೆಗೆ ಅಣಿಯಾಗಿದ್ದಾರೆ.ಪರಿಷ್ಕೃತ ಮೀಸಲಾತಿ ಅಂತಿಮಗೊಂಡದಿನದಿಂದಲೇ ಚುನಾವಣೆ ಎದುರು ನೋಡುತ್ತಿದ್ದರು.ಭದ್ರಾವತಿಯ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ನಿಧನದ ನಂತರ ರಾಜಕೀಯ ಸಮೀಕರಣಬದಲಾವಣೆಗೊಂಡಿದ್ದು ತ್ರಿಕೋನ ಸ್ಪರ್ಧೆನಡೆಯುವ ಸಾಧ್ಯತೆ ಇದೆ. ಇನ್ನು ತೀರ್ಥಹಳ್ಳಿಯಲ್ಲಿ15ರಲ್ಲಿ 14 ಸ್ಥಾನದಲ್ಲಿ ಗೆಲುವು ಸಾಧಿ ಸಿದ್ದಬಿಜೆಪಿ ಈ ಬಾರಿಯೂ ಅ ಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದೆ.
ಬದಲಾದ ಸಮೀಕರಣ: 40 ವರ್ಷದ ಭದ್ರಾವತಿಯರಾಜಕೀಯ ಇತಿಹಾಸದಲ್ಲಿ ಸಂಗಮೇಶ್, ಅಪ್ಪಾಜಿ ಗೌಡ ನಡುವೆಯೇ ನೇರ ಹಣಾಹಣಿ ಇರುತ್ತಿತ್ತು.ಇದೇ ಮೊದಲ ಬಾರಿಗೆ ಬಿಜೆಪಿಯೂ ಅಖಾಡದಲ್ಲಿ ಮಿಂಚುವ ಸಾಧ್ಯತೆಗಳಿವೆ. ಕಳೆದ ಚುನಾವಣೆಯಲ್ಲಿಅಪ್ಪಾಜಿ ಗೌಡ ಬಣದವರು ಮೇಲುಗೈ ಸಾಧಿಸಿದ್ದರು. ನಂತರ ಸ್ಥಾನದಲ್ಲಿ ಸಂಗಮೇಶ್ ಬಣ ಇತ್ತು. ಈಗ ಜೆಡಿಎಸ್‌ಗೆ ನಾಯಕರೇ ಇಲ್ಲದಂಥ ಸ್ಥಿತಿ ಇದೆ.ಅಪ್ಪಾಜಿ ಗೌಡ ಪುತ್ರ ಅಜಿತ್‌ಗೆ ಇದು ಮೊದಲ ಅಗ್ನಿ ಪರೀಕ್ಷೆಯಾಗಿದೆ. ಜೈ ಶ್ರೀರಾಮ್ ಘೋಷಣೆ ವಿವಾದದಿಂದ ಬಿಜೆಪಿ ಜತೆ ನೇರ ಯುದ್ಧಕ್ಕೆಇಳಿದಿರುವ ಶಾಸಕ ಸಂಗಮೇಶ್‌ಗೂ ಕೂಡ ಇದು ಪ್ರತಿಷ್ಠೆಯ ಚುನಾವಣೆ.
ಇನ್ನು ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲುಹವಣಿಸುತ್ತಿರುವ ಬಿಜೆಪಿಗೆ ಇದು ಪ್ರತಿಷ್ಠೆಯಚುನಾವಣೆ. ಈಚೆಗೆ ನಡೆದ ಗಲಾಟೆಯಲ್ಲಿ ಸಂಗಮೇಶ್ ಅವರು ಬಿಜೆಪಿಯ ಮುಖಂಡರುಕಾರ್ಪೊರೇಶನ್ ಎಲೆಕ್ಷನ್ ಗೆದ್ದು ಬರಲಿ ಎಂದು ಸವಾಲು ಹಾಕಿದ್ದನ್ನು ಇಲ್ಲಿ ಮರೆಯುವಂತಿಲ್ಲ. ಹೀಗಾಗಿ ಬಿಜೆಪಿ ಕೂಡ ಗೆಲ್ಲಲು ಎಲ್ಲಾ ತಂತ್ರಕ್ಕೆರೆಡಿಯಾಗಿದೆ. ಆದರೆ ನಾಯಕತ್ವ ಕೊರತೆ ಕಾಡುತ್ತಿದೆ.ಸ್ಥಳೀಯವಾಗಿ ಗುರುತಿಸಿಕೊಂಡಿರುವ ನಾಯಕರುಕೆಲವೇ ಏರಿಯಾಗಳಿಗೆ ಸೀಮಿತರಾಗಿದ್ದಾರೆ. ಹಾಗಾಗಿಜಿಲ್ಲಾಮಟ್ಟದ ನಾಯಕರು ಅಖಾಡಕ್ಕೆ ಧುಮುಕುವ ಸಾಧ್ಯತೆ ಇದೆ.
ಏ.27ಕ್ಕೆ ಮತದಾನ-30ಕ್ಕೆ ಫಲಿತಾಂಶ : ಭದ್ರಾವತಿಯ 35 ವಾರ್ಡ್‌ಗಳು, ತೀರ್ಥಹಳ್ಳಿಯ15 ವಾರ್ಡ್‌ಗಳಿಗೆ ಏ.27ರಂದು ಮತದಾನನಡೆಯಲಿದೆ. ಏ.30ರಂದು ಮತ ಎಣಿಕೆನಡೆಯಲಿದೆ. ಏ.8ರಿಂದ ಅ ಧಿಸೂಚನೆ ಆರಂಭವಾಗಲಿದ್ದು ಏ.15 ನಾಮಪತ್ರ ಸಲ್ಲಿಸಲುಕೊನೆ ದಿನ. ಏ.16 ನಾಮಪತ್ರ ಪರಿಶೀಲನೆ, ಏ.19 ನಾಮಪತ್ರ ಹಿಂಪಡೆಯಲು ಕೊನೆಯ ದಿನ.
ಅಪ್ಪಾಜಿಗೌಡರ ಆಶೀರ್ವಾದ ನಮ್ಮಮೇಲಿದೆ. ಎಲ್ಲ ವಾರ್ಡ್‌ಗಳಲ್ಲೂನಮಗೆ ಬೆಂಬಲ ಇದೆ. ಕಳೆದ ಬಾರಿ 35ರಲ್ಲಿ23ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದರು. ಈಬಾರಿಯೂ ಒಂದೆರಡರಲ್ಲಿ ವ್ಯತ್ಯಾಸ ಆಗಬಹುದು.- ಆರ್. ಕರುಣಾಮೂರ್ತಿ, ಭದ್ರಾವತಿ ಜೆಡಿಎಸ್ ತಾಲೂಕು ಅಧ್ಯಕ್ಷ
ಬೂತ್‌ಮಟ್ಟದಲ್ಲಿ ನಮ್ಮ ಕಾರ್ಯಕರ್ತರಿದ್ದುತಳಮಟ್ಟದಲ್ಲಿ ಸಂಘಟನೆ ಮಾಡಿದ್ದೇವೆ. ಈ ಬಾರಿ ಪೂರ್ಣ ಬಹುಮತ ಪಡೆದು ನಗರಸಭೆಯಲ್ಲಿ ಅಧಿಕಾರ ಹಿಡಿಯುತ್ತೇವೆ. – ಆರ್.ಪ್ರಭಾಕರ್,ಭದ್ರಾವತಿ ತಾಲೂಕು ಬಿಜೆಪಿ ಅಧ್ಯಕ್ಷ
-ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.