1.26 ಕೋಟಿ ರೂ. ಮೌಲ್ಯದ ಅಡಕೆ ಸಾಗಿಸುತ್ತಿದ್ದ ಲಾರಿ-ಡ್ರೈವರ್ ನಾಪತ್ತೆ
Team Udayavani, Jun 4, 2022, 2:15 PM IST
ಶಿವಮೊಗ್ಗ: 1.26 ಕೋಟಿ ರೂ. ಮೌಲ್ಯದ ಅಡಕೆ ತುಂಬಿಕೊಂಡು ಹೋಗುತ್ತಿದ್ದ ಲಾರಿ ನಾಪತ್ತೆಯಾಗಿದ್ದು, ಚಾಲಕರ ಮೊಬೈಲ್ ನಂಬರ್ ಕೂಡ ಸ್ವಿಚ್ ಆಫ್ ಆಗಿದೆ. ಇದರಿಂದ ಕಂಗಲಾದ ಉದ್ಯಮಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗದ ಮಲೆನಾಡು ಅಡಕೆ ಮಾರಾಟಗಾರರ ಸಹಕಾರ ಸಂಘಕ್ಕೆ (ಮ್ಯಾಮ್ಕೋಸ್) ಸಂಬಂಧಿಸಿದ ಅಡಕೆ ನಾಪತ್ತೆಯಾಗಿದೆ. ಕೋಟೆ ರಸ್ತೆಯಲ್ಲಿರುವ ಮ್ಯಾಮ್ಕೋಸ್ ಖರೀದಿ ಶಾಖೆ ಉಗ್ರಾಣದಿಂದ ಗುಜರಾತ್ ನ ಅಹಮದಾಬಾದ್ ಗೆ ಅಡಕೆ ಕಳುಹಿಸಲಾಗಿತ್ತು.
ಇದನ್ನೂ ಓದಿ:ಯುವತಿಯರಿಂದ ಕಾಲ್ ಮಾಡಿಸಿ ಜಾಬ್ ಕೊಡಿಸುವ ನೆಪದಲ್ಲಿ ನೂರಾರು ಜನರಿಗೆ ವಂಚನೆ: ಇಬ್ಬರ ಬಂಧನ
350 ಚೀಲದಲ್ಲಿ 245 ಕ್ವಿಂಟಾಲ್ ಅಡಕೆಯನ್ನು ಲಾರಿಯಲ್ಲಿ ಕಳುಹಿಸಲಾಗಿದೆ. ಮೇ 25ರಂದು ಲಾರಿ ಶಿವಮೊಗ್ಗದಿಂದ ತೆರಳಿದೆ. ಮೇ 30ರ ಒಳಗೆ ಅದು ಅಹಮದಾಬಾದ್ ತಲುಪಬೇಕಿತ್ತು. ಆದರೆ ಈತನಕ ಲಾರಿ ಅಲ್ಲಿಗೆ ತಲುಪಿಲ್ಲ. ಅಲ್ಲದೆ ಚಾಲಕ ಟಿಪ್ಪು ನಗರದ ಮಹಮ್ಮದ್ ಗೌಸ್ ಮೊಬೈಲ್ ನಂಬರ್ ಸ್ವಿಚ್ ಆಫ್ ಎಂದು ಬರುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಲಾರಿಯಲ್ಲಿದ್ದ ಅಡಕೆ ಮೌಲ್ಯ 1.26 ಕೋಟಿ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಡಕೆ ಮತ್ತು ಲಾರಿಯನ್ನು ಹುಡುಕಿಕೊಡುವಂತೆ ಉದ್ಯಮಿ ದೋಲಾರಾಮ್ ಅವರು ಕೋಟೆ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
ತೀರ್ಥಹಳ್ಳಿಯಲ್ಲಿ ವೈಭವದ ಜಾತ್ರೆ; ಬುರ್ಖಾ ಧರಿಸಿದ್ದ ಅನಾಮಧೇಯ ವ್ಯಕ್ತಿ ಪತ್ತೆ !
Anandapur: ತೋಟಕ್ಕೆ ಕಾಡಾನೆ ಹಾವಳಿ… ಅಧಿಕಾರಿಗಳ ನಿರ್ಲಕ್ಷಕ್ಕೆ ಗ್ರಾಮಸ್ಥರ ಆಕ್ರೋಶ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Shimoga: ರಿಪ್ಪನ್ ಪೇಟೆ ಸಮೀಪ ಹಿಟ್ ಅಂಡ್ ರನ್; ಬೈಕ್ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.