ಮಲೆನಾಡ ಮಾಣಿ ಜಲಾಶಯ ತುಂಬೋದು ಕಷ್ಟ!

32 ವರ್ಷದಲ್ಲಿ 4 ಬಾರಿ ಮಾತ್ರ ಭರ್ತಿ ,1994, 2006, 2007, 2018ರಲ್ಲಿ ತುಂಬಿದ್ದ ಜಲಾಶಯ

Team Udayavani, Nov 2, 2020, 7:34 PM IST

ಮಲೆನಾಡ ಮಾಣಿ ಜಲಾಶಯ ತುಂಬೋದು ಕಷ್ಟ!

ಹೊಸನಗರ: ಯಾವುದೇ ಉಪನದಿಗಳು, ಹಳ್ಳಕೊಳ್ಳದ ಲಿಂಕ್‌ ಇಲ್ಲದೇ ಕೇವಲ ಬೀಳುವ ಮಳೆಯನ್ನೇ ಆಧರಿಸಿ ಭರ್ತಿಯಾಗುವ ಜಲಾಶಯವೇ ಮಾಣಿ ಡ್ಯಾಂ. ಪ್ರಸಕ್ತ ವರ್ಷ ಆರಂಭದಲ್ಲಿ ಕಂಡುಬಂದ ಮಳೆಯ ಆರ್ಭಟ ನೋಡಿ ಮಾಣಿ ಮತ್ತೆ ತುಂಬೀತು ಎಂಬ ಆಶಯ ಹುಟ್ಟುಹಾಕಿತ್ತು. ಆದರೆ ಕೊನೇ ಕ್ಷಣದಲ್ಲಿ ಮಳೆ ಕ್ಷೀಣಿಸಿದ ಕಾರಣ ಮಾಣಿ ತುಂಬುವುದು ಕಷ್ಟ. ಇನ್ನೇನಾದರೂ ವಾಯುಭಾರ ಕುಸಿದು ಮಳೆ ಬಂದರೆ ಮಾತ್ರ ತುಂಬಬಹುದು ಎಂಬುದನ್ನು ಬಿಟ್ಟು ಬೇರೆ ಸಾಧ್ಯತೆಗಳಿಲ್ಲ.

ಹೊಸನಗರ ತಾಲೂಕಿನ ಯಡೂರು ಗ್ರಾಪಂವ್ಯಾಪ್ತಿಯಲ್ಲಿರುವ ವಾರಾಹಿ ಯೋಜನೆಯ ಮಹತ್ವದಮಾಣಿ ಜಲಾಶಯದಲ್ಲಿ ಶೇ. 70 ರಷ್ಟು ನೀರಿನ ಸಾಂಧ್ರತೆ ಕಂಡು ಬಂದಿದೆ. ಇನ್ನು ಶೇ.30 ರಷ್ಟು ನೀರು ಬೇಕಿದೆ. ಆದರೆ ಮಳೆ ಕಡಿಮೆಯಾಗಿರುವ ಕಾರಣ ಆ ನಿರೀಕ್ಷೆ ಕಷ್ಟಸಾಧ್ಯ ಎನ್ನಬಹುದು. 32 ವರ್ಷದಲ್ಲಿ 4 ಬಾರಿ: 1978 ಆರಂಭಗೊಂಡ ವಾರಾಹಿ ಯೋಜನೆಯ ಮಾಣಿ ಜಲಾಶಯದಲ್ಲಿ ನೀರು ನಿಲ್ಲಿಸಿದ್ದು 1989ರಲ್ಲಿ. ಆ ವರ್ಷ 584.5 ಮೀ.ಮಟ್ಟದಷ್ಟು ನೀರು ಸಂಗ್ರಹವಾಗಿತ್ತು. 32 ವರ್ಷದಲ್ಲಿ1994, 2006, 2007 ಮತ್ತು 2018 ಸೇರಿ ಈವರೆಗೆನಾಲ್ಕು ಬಾರಿ ಮಾತ್ರ ತುಂಬಿದೆ. ಈ ಬಾರಿ ಆರಂಭದ ಮಳೆ ನೋಡಿ ಮಾಣಿ ಡ್ಯಾಂ ತುಂಬುವ ನಿರೀಕ್ಷೆಹೊಂದಲಾಗಿತ್ತು. ಕ್ರಮೇಣ ಮಳೆ ಕಡಿಮೆಯಾದಕಾರಣ ಜಲಾಶಯ ತುಂಬುವ ಸಾದ್ಯತೆ ಕ್ಷೀಣಿಸಿದೆ.

ಪ್ರಸಕ್ತ ವರ್ಷ ಮಾಣಿ ಜಲಾಶಯ ತುಂಬಲು ಇನ್ನೂ ಅಂದಾಜು 10 ಟಿಎಂಸಿ ನೀರಿನ ಅವಶ್ಯಕತೆ ಇದೆ. 594.36 ಮೀ ಗರಿಷ್ಠ ಮಟ್ಟದ ಮಾಣಿ ಡ್ಯಾಂ ಅ.22ರವರೆಗೆ 589.16 ಮೀ. ನೀರಿನಮಟ್ಟ ತಲುಪಿದೆ. 619.36 ಎಂಸಿಎಂ ನೀರಿನ ಸಾಂಧ್ರತೆಯನ್ನು ಹೊಂದಿದೆ. ಶೇ.70.16 ರಷ್ಟುಮಾತ್ರ ನೀರು ತುಂಬಿದೆ.

ವಿಶಿಷ್ಟತೆಯ ಜಲಾಶಯ: ವಾರಾಹಿ ಯೋಜನೆಯ ಮಾಣಿ ಜಲಾಶಯ ಮಹತ್ವದ್ದಾಗಿದ್ದು, ಜಲವಿದ್ಯುತ್‌ಯೋಜನೆಗೆ ನೀರನ್ನು ಬಳಸಿಕೊಂಡ ಬಳಿಕ ವಾರಾಹಿ ಭೂಗರ್ಭ ವಿದ್ಯುದಾಗಾರಕ್ಕೆ ಹರಿಸಿ ಅಲ್ಲೂ ಕೂಡ ವಿದ್ಯುತ್‌ ಉತ್ಪಾದನೆಗೆ ಬಳಸಿಕೊಳ್ಳಬಹುದಾದ ವಿಶೇಷ ಅಂಶವನ್ನು ಒಳಗೊಂಡಿದೆ. ಮಾಣಿ ಡ್ಯಾಂನಎರಡು ಯೂನಿಟ್‌ನಿಂದ 4.5 ರಂತೆ 9 ಮೆ.ವ್ಯಾವಿದ್ಯುತ್‌ ಉತ್ಪಾದನೆ, ಭೂಗರ್ಭ ವಿದ್ಯುದಾಗಾರದ ನಾಲ್ಕು ಯೂನಿಟ್‌ನಿಂದ ಒಟ್ಟು 460 ಮೆ.ವ್ಯಾ. ವಿದ್ಯುತ್‌ ಉತ್ಪಾದನಾ ಶಕ್ತಿ ಹೊಂದಿದೆ. ಎರಡುಯೋಜನೆಗಳಿಂದ ಒಟ್ಟು 469 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಮಾಡಬಹುದಾಗಿದೆ.

ಹೆಬ್ಟಾಗಿಲಿನಲ್ಲಿ ಹುಟ್ಟು.. 455 ಮೀ ಕೆಳಗೆ ಜಿಗಿತ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಹೆಬ್ಟಾಗಿಲುನಲ್ಲಿ ಜನ್ಮ ಪಡೆಯುವ ವಾರಾಹಿ ನದಿ ಸಮುದ್ರ ಮಟ್ಟದಿಂದ 730 ಮೀ. ಎತ್ತರದಲ್ಲಿರುವಜಾಗದಿಂದ ಹರಿಯುವ ವಾರಾಹಿ ನದಿ ಕುಂದಾಪುರಮಾರ್ಗವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ವಾರಾಹಿ ನದಿಗೆ ಅಡ್ಡಲಾಗಿ ಮಾಣಿ ಜಲಾಶಯವನ್ನುನಿರ್ಮಾಣ ಮಾಡಲಾಗಿದೆ. ನಂತರದಲ್ಲಿ ಇದೇ ನದಿಗೆ ಅಡ್ಡಲಾಗಿ ಪಿಕಪ್‌ ಡ್ಯಾಂಅನ್ನು ಕೂಡ ನಿರ್ಮಿಸಲಾಗಿದೆ. ವಾರಾಹಿ ನದಿ ಉಗಮ ಸ್ಥಾನದಿಂದ27 ಕಿ.ಮೀ. ಕ್ರಮಿಸಿದ ನಂತರ 455 ಮೀ ಕೆಳಗೆ ಧುಮುಕುವ ವಾರಾಹಿ ನದಿ ಧುಮುಕುತ್ತದೆ. ಇದೇ ಕುಂಚಿಕಲ್ಲಬ್ಬಿ ಫಾಲ್ಸ್‌ ಆಗಿ ಪ್ರವಾಸಿಗರ ಗಮನ ಸೆಳೆದಿದೆ.

ತೀರ್ಥಹಳ್ಳಿ, ಹೊಸನಗರ ಮಳೆಯ ಆಸರೆ:

ಮಾಣಿ ಡ್ಯಾಂನ ಹಿನ್ನೀರು ಪ್ರದೇಶ ಬಹುತೇಕ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕನ್ನು ಆಶ್ರಯಿಸಿಕೊಂಡಿದೆ. ಮಾಣಿ ಜಲಾನಯನ ಪ್ರದೇಶದಲ್ಲಿ 2000 ಮಿ.ಮೀ.ನಿಂದ 12500 ಮಿಮೀ ಮಳೆಯಾಗುತ್ತದೆ.163.16 ಚದರ ಕಿಮೀ ವ್ಯಾಪ್ತಿ ಹೊಂದಿರುವ ಜಲಾಶಯದ ಪ್ರದೇಶದಲ್ಲಿವಾರ್ಷಿಕ ಸರಾಸರಿ ಮಳೆಯನ್ನು 6350 ಮಿಮೀ ಎಂದು ಅಂದಾಜಿಸಲಾಗಿದೆ. ಈ ವರ್ಷ ಸೆಪ್ಟೆಂಬರ್‌ ತಿಂಗಳ ಅಂತ್ಯದವರೆಗೆ ಕೇವಲ 4267 ಮಿಮೀ ಮಾತ್ರ ಬಿದ್ದಿದ್ದು ಡ್ಯಾಂ ತುಂಬುವುದು ಕಷ್ಟ ಸಾಧ್ಯ.

ಮಳೆ ಮಾಪಕಗಳು ಎಲ್ಲೆಲ್ಲಿವೆ?: ಯಡೂರು, ಮತ್ತಿಗ, ಸುಣ್ಣದಮನೆ, ಮೇಗರವಳ್ಳಿ, ಹೆಬ್ಟಾಗಿಲು ಮೇಲುಸುಂಕ, ಗಿಣಿಕಲ್‌, ಮಾಣಿ ಸೇರಿದಂತೆ 8 ಮಳೆ ಮಾಪಕಗಳು ಇದ್ದು ಸೆಪ್ಟೆಂಬರ್‌ ಅಂತ್ಯದವರೆಗೆ 4267 ಮಿಮೀ ಮಳೆಯಾಗಿದೆ ಎಂದು ದಾಖಲಿಸಲಾಗಿದೆ.ಅಕ್ಟೋಬರ್‌ ತಿಂಗಳಲ್ಲಿ ಸುಮಾರು 800 ಮಿಮೀ ಮಳೆಯಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಜನ್ಮಸ್ಥಳ ಮುಳುಗಿದರೇ.. ಮಾಣಿ ತುಂಬೀತು..!

ಹೌದು, ವಾರಾಹಿ ನದಿ ಜನ್ಮ ತಾಳಿದ ಹೆಬ್ಟಾಗಿಲು ಪ್ರದೇಶ ಬಹುತೇಕ ಮುಳುಗಿದರೆ ಮಾತ್ರ ಮಾಣಿ ಜಲಾಶಯ ತುಂಬುತ್ತದೆ. ಇಂತಹ ವಿಶಿಷ್ಟತೆ ಅಪರೂಪ. ಅಲ್ಲದೆ ಕೇವಲ ಮಳೆಯನ್ನೇ ಆಶ್ರಯಿಸಿಕೊಂಡಿರುವ ಮಾಣಿ ಡ್ಯಾಂ ತುಂಬಿತೆಂದರೆ ಅದೊಂದು ಸಾಹಸ.

ಒಟ್ಟಾರೆ ಜಲವಿದ್ಯುತ್‌ ಯೋಜನೆ ಮತ್ತು ಭೂಗರ್ಭ ವಿದ್ಯುದಾಗಾರದ ಜೀವದಾತು ಆಗಿರುವ ಮಾಣಿ ಅಪರೂಪ ಜಲಾಶಯ. ಅತೀ ಹೆಚ್ಚು ಮಳೆಬೀಳುವ ಹೊಸನಗರ ಮತ್ತು ತೀರ್ಥಹಳ್ಳಿಯ ಪರಿಸರದಲ್ಲಿದ್ದು ಕೂಡ ನಾಲ್ಕು ಬಾರಿ ಮಾತ್ರ ಜಲಾಶಯದ ಭರ್ತಿಯಾಗಿದೆ ಎಂದರೆ ಮಾಣಿ ತುಂಬೋದು ಅಷ್ಟು ಸುಲಭವಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.

ಇನ್ನು 10 ಟಿಎಂಸಿ ನೀರು ಬೇಕು : 32 ವರ್ಷದಲ್ಲಿ ಮಾಣಿ 4 ಬಾರಿ ಮಾತ್ರ ತುಂಬಿದೆ. ಪ್ರಸ್ತುತ ಸೆಪ್ಟೆಂಬರ್‌ ವೇಳೆಗೆ 4267 ಸರಾಸರಿ ಮಳೆಯಾಗಿದೆ. ಇನ್ನು 10 ಟಿಎಂಸಿ ನೀರು ಬೇಕು. ಆದರೆ ಮಳೆಯನ್ನು ಆಧರಿಸಿ ನೋಡಿದರೆ ಕಷ್ಟ. ಇನ್ನು ವಾಯುಭಾರ ಕುಸಿತ, ಇನ್ನಿತರ ಕಾರಣಗಳಿಗೆ ಮಳೆ ಬರಬೇಕಷ್ಟೆ. –ಸುದೀಪ್‌ ಎನ್‌, ಎಇಇ ಮಾಸ್ತಿಕಟ್ಟೆ

 ಮಾಣಿ ತುಂಬೋದು ಪ್ರತಿವರ್ಷದ ಸಾಹಸ : ಉಗಮ ಸ್ಥಾನವನ್ನೇ ಮುಳುಗಿಸುವ ಏಕೈಕ ಡ್ಯಾಂ ಮಾಣಿ ಜಲಾಶಯ. ಅಲ್ಲದೆ ಯಾವುದೇ ಉಪನದಿ, ಹಳ್ಳಕೊಳ್ಳದ ಆಶ್ರಯವಿಲ್ಲದೆ ಜಲಾಶಯದ ವ್ಯಾಪ್ತಿಯಲ್ಲಿ ಬೀಳುವ ಮಳೆಯೇ ಆಧಾರ. ಹಾಗಾಗಿ ಮಾಣಿ ತುಂಬಿದರೆ ಅದೊಂದು ಸಾಹಸ ಎಂಬಂತಾಗಿದೆ.ವೈ.ಕೆ. ವೆಂಕಟೇಶ ಹೆಗ್ಡೆ, ಎಇ, ಜೋಗ

 

ಕುಮುದಾ ನಗರ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ

Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ

B.-Y.-Raghavendra

B. Y. Raghavendra: 10 ವರ್ಷದಲ್ಲಿ ವಕ್ಫ್ ಆಸ್ತಿ ಶೇ.135 ಹೆಚ್ಚಳ

8

Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?

Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ

Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.