ಬಿಜೆಪಿಗೆ ಬಹುಮತ ಬರಲು ಕಾರಣರಾದವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ: ಕೆ.ಎಸ್.ಈಶ್ವರಪ್ಪ
ಸಿದ್ದರಾಮಯ್ಯ ಸಂಘರ್ಷ ಮಾಡಿಯೇ ಅಧಿಕಾರವನ್ನು ಕಳೆದುಕೊಂಡಿದ್ದಾರೆ.: ಈಶ್ವರಪ್ಪ
Team Udayavani, Feb 5, 2020, 2:20 PM IST
ಶಿವಮೊಗ್ಗ: ಸರ್ಕಾರಕ್ಕೆ ಬಹುಮತವಿದ್ದು, ನಾಳೆ ಬೆಳಗ್ಗೆ ರಾಜ್ಯದ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಕೇಂದ್ರ ಹಾಗೂ ರಾಜ್ಯದ ನಾಯಕರುಗಳು ಈಗಾಗಲೇ ಆ ಕುರಿತು ತೀರ್ಮಾನಿಸಿದ್ದಾರೆ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಪೂರ್ಣ ಬಹುಮತ ಬರಲು ಕಾರಣರಾದವರಿಗೆ ಸಚಿವ ಸ್ಥಾನಮಾನ ನೀಡಲಾಗುತ್ತಿದೆ. ಹಾಗಾಗಿ 13 ಜನರು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದು ಉಳಿದಿದ್ದನ್ನು ಸಿಎಂ ಯಡಿಯೂರಪ್ಪ ನಿರ್ಧಾರ ಮಾಡಲಿದ್ದಾರೆ ಎಂದು ತಿಳಿಸಿದರು.
ಅಪ್ಪ ಮಾಡಿದ ಆಸ್ತಿ ಹಂಚುವ ವೇಳೆಯೇ ಅಣ್ಣ-ತಮ್ಮಂದರು ಬಡಿದಾಡ್ತಾರೆ. ಸಾರ್ವಜನಿಕವಾಗಿ ಇಷ್ಟು ದೊಡ್ಡ ಆಡಳಿತ ನಡೆಸುವ ಒಂದು ವ್ಯವಸ್ಥೆ ಇದು. ಅಧಿಕಾರದ ಹಂಚಿಕೆ ಸಂದರ್ಭದಲ್ಲಿ ನನಗೂ ಅಧಿಕಾರ ಬೇಕು ಎಂದು ಕೇಳುವುದು ತಪ್ಪಲ್ಲ. ಕೆಲವರು ಸ್ಥಾನಮಾನ ಕೇಳಿದ್ದಾರೆ ಅಷ್ಟೇ, ಯಾವುದನ್ನು ವಿರೋಧ ಮಾಡಿಲ್ಲ. ಎಲ್ಲಾ ಶಾಸಕರು ಸಹ ಬಿಜೆಪಿಗೆ ನಿಷ್ಠೆಯಿಂದ ಇರುವುದಾಗಿ ಹೇಳಿದ್ದಾರೆ ಎಂದರು.
ಸಂಪುಟ ವಿಸ್ತರಣೆ ನಂತರ ಸಂಘರ್ಷ ಪ್ರಾರಂಭವಾಗಲಿ ಎಂದು ಸಿದ್ದರಾಮಯ್ಯ ಬಯಸುತ್ತಿದ್ದಾರೆ. ಸಂಘರ್ಷ ಮಾಡಿಯೇ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದರು. ಜೊತೆಗೆ ಸಂಘರ್ಷ ಮಾಡಿಯೇ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಸಿದ್ದರಾಮಯ್ಯನವರಲ್ಲಿದೆ. ಈ ಜನ್ಮದಲ್ಲಿ ಮತ್ತೇ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿ ಅಗಲ್ಲ ಎಂದು ಈಶ್ವರಪ್ಪ ಹರಿಹಾಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Infectious Disease: ರಾಜ್ಯಕ್ಕೂ ಬೇಕಿದೆ “ವಿಷಾಣು ಯುದ್ಧ ಅಭ್ಯಾಸ್”
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.