ಆಯುಷ್ ವೈದ್ಯರಿಗೂ ವಿಶೇಷ ಭತ್ಯೆ ನೀಡಿ
Team Udayavani, Apr 29, 2021, 9:24 PM IST
ಶಿವಮೊಗ್ಗ: ಆಯುಷ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆ ವಿಸ್ತರಿಸಬೇಕೆಂದು ಆಯುಷ್ ವೈದ್ಯಾಧಿ ಕಾರಿಗಳ ಸಂಘದ ಜಿಲ್ಲಾಘಟಕ ಮಂಗಳವಾರ ಜಿಲ್ಲಾಧಿ ಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾ ಧಿಕಾರಿಗಳಿಗೆ ಸರಿಸಮಾನ ಭತ್ಯೆ ಮತ್ತುಸ್ಥಾನಮಾನಗಳನ್ನು ಆಯುಷ್ ವೈದ್ಯಾಧಿಕಾರಿಗಳಿಗೂ ನೀಡಬೇಕೆಂದು ಸರಕಾರಸಚಿವ ಸಂಪುಟದಲ್ಲಿ ನಿರ್ಣಯ ಮಾಡಿದೆ.
ಕಳೆದ ವರ್ಷ ಆಯುಷ್ ವೈದ್ಯಾಧಿಕಾರಿಗಳನ್ನು ಹೊರತುಪಡಿಸಿ ಭತ್ಯೆ ನೀಡಿರುವುದು ಅಸಮಂಜಸವಾಗಿದೆ. ಕೊರೊನಾ ಸಂದರ್ಭದ ಸಂಕಷ್ಟದಲ್ಲಿಆಯುಷ್ ವೈದ್ಯರು ಅಲೋಪಥಿ ವೈದ್ಯರಂತೆಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್‌ಕೇರ್ ಕೇಂದ್ರ, ತಪಾಸಣಾ ಕೇಂದ್ರ ಸೇರಿದಂತೆಎಲ್ಲಾ ವಿಭಾಗದಲ್ಲಿಯೂ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ.
ಹೀಗಿರುವಾಗಸೌಲಭ್ಯಗಳ ವಿಚಾರದಲ್ಲಿ ಸರಕಾರ ತಾರತಮ್ಯ ಮಾಡಿರುವುದು ಸರಿಯಲ್ಲ. ಎಂಬಿಬಿಎಸ್‌ಹಾಗೂ ಬಿಡಿಎಸ್ ವೈದ್ಯಾ ಧಿಕಾರಿಗಳಿಗೆ ವಿಶೇಷ ಭತ್ಯೆ ಪರಿಷ್ಕರಿಸುವ ವೇಳೆ ಆಯುಷ್‌ವೈದ್ಯರ ಸೇವೆಯನ್ನು ನಗಣ್ಯ ಮಾಡಲಾಗಿದೆ.ಈ ಮೂಲಕ ಸರಕಾರ ಆಯುಷ್ ವೈದ್ಯರನೈತಿಕ ಸ್ಥೈರ್ಯ ಕುಗ್ಗಿಸುವಂತಿದೆ ಎಂದುಮನವಿಯಲ್ಲಿ ತಿಳಿಸಲಾಗಿದೆ.
ಕೋವಿಡ್ ನಿಯಂತ್ರಣ ಕಾರ್ಯದಲ್ಲಿಆಯುಷ್ ವೈದ್ಯರು ಅಹರ್ನಿಶಿ ಕೆಲಸಮಾಡುತ್ತಿದ್ದಾರೆ. ಸರಕಾರದ ಹಲವುಆದೇಶಗಳನ್ವಯವೇ ಇಲಾಖೆ ಕೆಲಸಮಾಡಿದೆ. ಆದರೆ ಭತ್ಯೆ ಕೊಡುವಾಗಆಯುಷ್ ವೈದ್ಯಾಧಿ ಕಾರಿಗಳನ್ನುಕಡೆಗಣಿಸಿರುವುದು ಅತ್ಯಂತ ನೋವಿನಸಂಗತಿ ಎಂದು ಸಂಘ ಹೇಳಿದೆ.
ಹೋರಾಟ ಅನಿವಾರ್ಯ: ಸಂಕಷ್ಟದಸಂದರ್ಭದಲ್ಲಿ ಸರಕಾರದ ಮೇಲೆ ಯಾವುದೇಒತ್ತಡ, ಮುಷ್ಕರ ಇತ್ಯಾದಿ ಮಾರ್ಗಹಿಡಿಯದೆ ಸಮಾಜದ ಸ್ವಾಸ್ಥÂ ಕಾಯುವಲ್ಲಿಆಯುಷ್ ವೈದ್ಯರು ತಮ್ಮ ಕಾಯಕಮುಂದುವರಿಸಿದ್ದಾರೆ.
ಸರಕಾರ ಕೂಡಲೇವೈದ್ಯ ಸಮೂಹದಲ್ಲಿ ಭೇದವೆಣಿಸದೆ ಸಮಾನಭತ್ಯೆ ಕೊಡಬೇಕು. ಆಯುಷ್ ವೈದ್ಯಾಧಿಕಾರಿಗಳ ನ್ಯಾಯಯುತ ಬೇಡಿಕೆಗಳನ್ನುಹದಿನೈದು ದಿನಗಳಲ್ಲಿ ಈಡೇರಿಸಬೇಕು.ಇಲ್ಲದಿದ್ದಲ್ಲಿ ಸಂಘ ಅನಿವಾರ್ಯವಾಗಿಹೋರಾಟದ ಹಾದಿ ಹಿಡಿಯಬೇಕಾಗುತ್ತದೆಎಂದು ಮನವಿಯಲ್ಲಿ ತಿಳಿಸಲಾಗಿದೆ.ಮನವಿ ಸ್ವೀಕರಿಸಿದ ಎಡಿಸಿ ಅನುರಾಧಅವರು ಮುಂದಿನ ಕ್ರಮಕ್ಕೆ ಸರಕಾರಕ್ಕೆಕಳಿಸಿಕೊಡುವುದಾಗಿ ತಿಳಿಸಿದರು.
ಈ ವೇಳೆ ಸರಕಾರಿ ನೌಕರರ ಸಂಘದಜಂಟಿ ಕಾರ್ಯದರ್ಶಿ ಡಾ.ಸಿ.ಎ.ಹಿರೇಮಠ,ಜಿಲ್ಲಾ ಆಯುಷ್ ವೈದ್ಯಾ ಧಿಕಾರಿಗಳ ಸಂಘದಅಧ್ಯಕ್ಷ ಡಾ.ಸತೀಶ್ ಆಚಾರ್ಯ ,ರಾಜ್ಯಪ್ರಧಾನ ಕಾರ್ಯದರ್ಶಿ ಡಾ.ಜೆ.ವೀರಣ್ಣ,ಡಾ.ಕುಮಾರ್ ಸಾಗರ್, ಡಾ.ರವಿರಾಜ್,ಡಾ.ಸತೀಶ್ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.