ಮಾರಿಯಮ್ಮ ದೇವಿಕರಗ ಮಹೋತ್ಸವ
Team Udayavani, May 21, 2018, 3:51 PM IST
ಭದ್ರಾವತಿ: ನ್ಯೂಟೌನ್ ಆಂಜನೇಯ ಅಗ್ರಹಾರದ ಶ್ರೀ ಮಾರಿಯಮ್ಮ ದೇವಿಯ ಕರಗ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಅಮ್ಮನವರಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ಮಾಡಲಾಯಿತು. ಭಕ್ತಾದಿಗಳಿಗೆ
ತೀರ್ಥಪ್ರಸಾದ ವಿತರಿಸಲಾಯಿತು.
ಮಧ್ಯಾಹ್ನ ಮಿಲಿó ಕ್ಯಾಂಪ್‌ನ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿರುವ ಶ್ರೀನಿವಾಸ ಸ್ವಾಮಿ ದೇವಸ್ಥಾನದಿಂದ ಜೋಡಿಕರಗದೊಂದಿಗೆ ಮೆರವಣಿಗೆಯ ಮೂಲಕ ಅಮ್ಮನವರನ್ನು ದೇವಾಲಯಕ್ಕೆ ಕರೆ ತರಲಾಯಿತು.
ಇದಕ್ಕೂ ಮೊದಲು ಭಕ್ತಾದಿಗಳಿಂದ ದೇವಸ್ಥಾನದ ಆವರಣದಲ್ಲಿ ಅಂಬಲಿ ಸಮರ್ಪಣೆ ಮಜ್ಜಿಗೆ, ತಂಪುಪಾನೀಯ
ವಿತರಣೆ ನಡೆಯಿತು.
ನಗರಸಭಾ ಸದಸ್ಯ ಗುಣಶೇಖರ್, ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಧಾನ ಅರ್ಚಕರು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ಇನ್ನಿತರರು ಇದ್ದರು.
ನ್ಯೂಟೌನ್, ವಿದ್ಯಾಮಂದಿರ, ಹುಡ್ಕೊ ಕಾಲೋನಿ, ಜನ್ನಾಪುರ ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಭಕ್ತಾಗಳು
ಪಾಲ್ಗೊಂಡಿದ್ದರು. ಗಮನ ಸೆಳೆದ: ಕರಗ ಮಹೋತ್ಸವದಲ್ಲಿ ಕಾವಡಿ ಹರಕೆಯೊತ್ತ ಭಕ್ತರೊಬ್ಬರು ನೋಡುಗರ
ಗಮನ ಸೆಳೆದರು. ಸುಮಾರು 12 ಉದ್ದ ಕಬ್ಬಿಣದ ತ್ರಿಶೂಲ ಬಾಯಿ ಮೂಲಕ ಚುಚ್ಚಿಕೊಂಡು ಸುಮಾರು ಅರ್ಧ ಕಿ.ಮೀ ನಷ್ಟು ಮೆರವಣಿಗೆಯಲ್ಲಿ ಸಾಗಿ ಅಮ್ಮನವರಿಗೆ ಹರಕೆ ಸಮರ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.