ಮನೆ-ಮನೆಗೆ ಶುದ್ಧ ನೀರು ಪೂರೈಕೆಗೆ ಯೋಜನೆ
ಮುಂದಿನ ನೂರು ದಿನಗಳಲ್ಲಿ 23,57000 ಮನೆಗಳಿಗೆ ನೀರು ಒದಗಿಸುವ ಗುರಿ: ಈಶ್ವರಪ್ಪ
Team Udayavani, Nov 4, 2020, 6:40 PM IST
ಶಿವಮೊಗ್ಗ: ಕೇಂದ್ರ ಪುರಸ್ಕೃತ ಜಲಜೀವನ ಮಿಷನ್ ಯೋಜನೆಯಡಿ ರಾಜ್ಯದ ಗ್ರಾಮೀಣ ಪ್ರದೇಶಗಳ ಪ್ರತಿ ಮನೆಮನೆಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸಲು ಯೋಜನೆ ರೂಪಿಸಿದ್ದು, ಇದರ ವ್ಯವಸ್ಥಿತ ಅನುಷ್ಠಾನ ಕಾರ್ಯ ಪ್ರಗತಿಯಲ್ಲಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಲ್ಲಿನ ಜಿಲ್ಲಾ ಪಂಚಾಯಿತಿಯ ಸಹ್ಯಾದ್ರಿ ಸಭಾಂಗಣದಲ್ಲಿ ಜಲಜೀವನ ಮಿಷನ್‌ನಆಯುಕ್ತರೊಂದಿಗೆ ವಿಡಿಯೋ ಸಂವಾದ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ರಾಜ್ಯದ ಗ್ರಾಮೀಣ ಪ್ರದೇಶದ 24,72000 ಮನೆಗಳಿಗೆ ನಲ್ಲಿಗಳನ್ನು ಅಳವಡಿಸಿ ಶುದ್ಧ ನೀರನ್ನು ಪೂರೈಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಮುಂದಿನ 100 ದಿನಗಳ ಅವಧಿಯಲ್ಲಿ 23,57000ಮನೆಗಳಿಗೆ ನೀರು ಒದಗಿಸುವ ಗುರಿ ಹೊಂದಲಾಗಿದೆ ಎಂದರು. ಈ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರದಿಂದ 4,093 ಕೋಟಿ ಹಾಗೂ ರಾಜ್ಯದಿಂದ 3,982 ಕೋಟಿ ರೂ ಸೇರಿದಂತೆ ಒಟ್ಟು 8,075ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗುವುದು. ನಿಗದಿ ಪಡಿಸಿದ ಕಾಲಮಿತಿಯಲ್ಲಿ ಪ್ರತಿ ಮನೆಗೆ ನೀರು ಒದಗಿಸುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.
ರಾಜ್ಯದ 42,036 ಸರ್ಕಾರಿ ಶಾಲೆಗಳಿಗೆಕುಡಿಯುವ ನೀರಿನ ವ್ಯವಸ್ಥೆ ಇದೆ. ಪ್ರಸಕ್ತ ಸಾಲಿನಲ್ಲಿ39,963ಶಾಲೆಗಳಿಗೆ ನೀರನ್ನು ಒದಗಿಸುವ ಕಾರ್ಯ ಪೂರ್ಣಗೊಂಡಿದೆ. ಪ್ರಧಾನಿಯವರ ಸೂಚನೆಯಂತೆ ಮುಂದಿನ 100 ದಿನಗಳೊಳಗಾಗಿ ಉಳಿದ 1595 ಶಾಲೆಗಳಿಗೂ ನೀರನ್ನು ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿ 65,911 ಅಂಗನವಾಡಿ ಕೇಂದ್ರಗಳಿದ್ದು, ಸ್ವಂತ ಕಟ್ಟಡ ಹೊಂದಿರುವ 44,852 ಅಂಗನವಾಡಿಗಳ ಪೈಕಿ 41,799 ಅಂಗನವಾಡಿಗಳಿಗೆ ನೀರಿನ ವ್ಯವಸ್ಥೆ ಇದೆ. ಉಳಿದ ಅಂಗನವಾಡಿ ಕೇಂದ್ರಗಳಿಗೆ ಮೂರೂವರೆ ತಿಂಗಳ ಅವಧಿಯೊಳಗಾಗಿ ನೀರನ್ನು ಒದಗಿಸಲಾಗುವುದು. ಅಲ್ಲದೇ ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ಜಾತಿ ಜನಾಂಗಗಳ ವಸತಿ ನಿಲಯಗಳಿಗೂ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾರ್ಯಾನುಷ್ಠಾನದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತೀಕ್‌ಅಹ್ಮದ್, ಶಾಸಕ ಕೆ.ಬಿ. ಅಶೋಕನಾಯ್ಕ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ, ಜಲನಿಗಮ ಮಿಷನ್‌ನ ಚೀಫ್ ಇಂಜಿನಿಯರ್ ಹೊಳೆಆಚೆ ಮತ್ತು ಸಚಿವರ ವಿಶೇಷ ಕರ್ತವ್ಯಾ ಧಿಕಾರಿ ಜಯರಾಮ್ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
ತೀರ್ಥಹಳ್ಳಿಯಲ್ಲಿ ವೈಭವದ ಜಾತ್ರೆ; ಬುರ್ಖಾ ಧರಿಸಿದ್ದ ಅನಾಮಧೇಯ ವ್ಯಕ್ತಿ ಪತ್ತೆ !
Anandapur: ತೋಟಕ್ಕೆ ಕಾಡಾನೆ ಹಾವಳಿ… ಅಧಿಕಾರಿಗಳ ನಿರ್ಲಕ್ಷಕ್ಕೆ ಗ್ರಾಮಸ್ಥರ ಆಕ್ರೋಶ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Shimoga: ರಿಪ್ಪನ್ ಪೇಟೆ ಸಮೀಪ ಹಿಟ್ ಅಂಡ್ ರನ್; ಬೈಕ್ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು
Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್
Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್ ತಾತ್ಕಾಲಿಕ ಸ್ಥಗಿತ
Arrested: ಟ್ಯಾಟೂ ಆರ್ಟಿಸ್ಟ್ ಬಂಧನ: 2.50 ಕೋಟಿ ರೂ. ಡ್ರಗ್ಸ್ ಜಪ್ತಿ
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.