ಗಲಭೆ ಮಾಡಿದ್ದು ಯಾರೆಂದು ಸಿದ್ದರಾಮಯ್ಯಗೆ ಗೊತ್ತಿದೆ ಆದರೆ ಹೇಳಲು ಧಮ್ ಇಲ್ಲ: ಈಶ್ವರಪ್ಪ
Team Udayavani, Aug 14, 2020, 1:11 PM IST
ಶಿವಮೊಗ್ಗ: ಬೆಂಗಳೂರಿನ ಗಲಭೆ ಯಾರು ಮಾಡಿದ್ದಾರೆಂದು ಸಿದ್ದರಾಮಯ್ಯಗೆ ಸಹ ತಿಳಿದಿದೆ. ಅದರೆ ಮುಸ್ಲಿಂ ಮತಾಂಧರು ಎಂದು ನೇರವಾಗಿ ಹೇಳಲು ಅವರಿಗೆ ಧಮ್ ಇಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂಧ ಮುಸಲ್ಮಾನರೇ ಕಾಂಗ್ರೆಸ್ ಪಕ್ಷದ ಆಸ್ತಿ. ಹಿಂದೂ ಸಂಘಟನೆ ಅಥವಾ ಕಾರ್ಯಕರ್ತರು ಈ ರೀತಿ ಮಾಡಿದ್ದರೆ ನೀವು ಸುಮ್ಮನೆ ಇರುತ್ತಿದ್ದರೇ? ಸಿದ್ದರಾಮಯ್ಯನವರೇ ರಾಜಕಾರಣದಲ್ಲಿ ನೀವು ಯಾರಿಗೆ ಮಾರಿಕೋಂಡಿದ್ದಿರಾ? ರಾಜಕಾರಣ ಎಂದು ಈ ರೀತಿಯಲ್ಲಿ ಮಾಡುವುದು ನ್ಯಾಯವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಸಿಗರು ಕುರ್ಚಿಗೋಸ್ಕರ ಪ್ರಾಣ ಬಿಡುತ್ತಾರೆ. ಅದಕ್ಕೆ ಮತಾಂಧರಿಗೆ ಬೆಂಬಲ ನೀಡ್ತಾರೆ. ಈ ಎಲ್ಲ ಆಟವನ್ನು ಕಾಂಗ್ರೆಸ್ ರಾಷ್ಟ್ರ ನಾಯಕರು ಹಲವು ವರ್ಷದಿಂದ ಮಾಡಿದ್ದಾರೆ. ಮತಾಂಧರಿಗೆ ಬೆಂಬಲ, ಮಠ ಮಾನ್ಯಗಳಿಗೆ ಅನ್ಯಾಯ ಮಾಡಿದ್ದಕ್ಕೆ ಕಾಂಗ್ರೆಸ್ ಈ ಸ್ಥಿತಿಗೆ ಬಂದಿದೆ. ದೇಶದಲ್ಲಿ ಭೂತಗನ್ನಡಿ ಹಾಕಿ ಕಾಂಗ್ರೆಸ್ ಅನ್ನು ಹುಡುಕುವಂತಾಗಿದ್ದು. ರಾಜ್ಯದಲ್ಲಿಯೂ ಕುಂಟುತ್ತಿದೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ಇದನ್ನೂ ಓದಿ: ಬೆಂಗಳೂರು ದಾಳಿ ಪ್ರಕರಣ ಆರೋಪಿಗಳು ಬಳ್ಳಾರಿ ಜೈಲಿಗೆ ಶಿಫ್ಟ್ ! ಕಾರಣವೇನು ಗೊತ್ತಾ?
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಡೆದುಕೊಳ್ಳುವ ರೀತಿ ನೋವು ತರುತ್ತಿದೆ. ಶಂಕರಾಚಾರ್ಯರ ಪ್ರತಿಮೆ ಮೇಲೆ ಅನ್ಯಧರ್ಮದ ಬಾವುಟವನ್ನು ಹಾಕಲಾಗಿದೆ. ಅದರ ಬಗ್ಗೆ ಇದುವರೆಗೂ ಕಾಂಗ್ರೆಸ್ಸಿಗರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬೆಂಗಳೂರಲ್ಲಿ ಮಾಧ್ಯಮದವರ ಮೇಲೆ ಹಲ್ಲೆಯಾದ್ರೂ ಕಾಂಗ್ರೆಸ್ ಸುಮ್ಮನೆ ಕುಳಿತಿದೆ. ಸಂಬಂಧವಿಲ್ಲದ ಪೊಲೀಸ್ ಠಾಣೆ ಹಾಗೂ ವಾಹನಗಳನ್ನು ಸುಡಲಾಗಿದೆ. ಶಾಸಕ ಶ್ರೀನಿವಾಸ್ ಅವರ ಮನೆಯಲ್ಲಿ ಧಾಂಧಲೆ ನಡೆಸಿ, ಸುಟ್ಟು ಹಾಕಲಾಗಿದೆ. ಆದರೆ ಇದುವರೆಗೂ ಕಾಂಗ್ರೆಸ್ ನಾಯಕರು ಅವರ ಮನೆಗೆ ಭೇಟಿ ನೀಡಿಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರ ಕೆಟ್ಟ ರಾಜಕಾರಣ ನೋವು ತರಿಸಿದೆ ಎಂದರು.
ಇದನ್ನೂ ಓದಿ: ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಬೀಳಲು ಕಾಂಗ್ರೆಸ್ ಕಾರಣ: ಎಚ್ ವಿಶ್ವನಾಥ್ ಆರೋಪ
ಡಿ.ಕೆ.ಶಿವಕುಮಾರ್ ಅವರು ನವೀನ್ ಒಬ್ಬ ಬಿಜೆಪಿ ಕಾರ್ಯಕರ್ತ ಎಂದಿದ್ದಾರೆ. ನವೀನ್ ಯಾವ ಪಕ್ಷದ ಕಾರ್ಯಕರ್ತ ಎಂದು ಫೇಸ್‌ಬುಕ್ ಪೋಸ್ಟ್ ನಲ್ಲೇ ಗೊತ್ತಾಗುತ್ತಿದೆ ಎಂದ ಸಚಿವರು ನವೀನ್ ಫೇಸ್‌ಬುಕ್ ಪೋಸ್ಟ್ ಗಳನ್ನು ಮಾಧ್ಯಮದವರ ಮುಂದೆ ಪ್ರದರ್ಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.