ಮುಜರಾಯಿ- ಮಠಕ್ಕೆ ಸಿಗಂದೂರು ದೇವಸ್ಥಾನ ವಹಿಸುವುದಕ್ಕೆ ಹಾಲಪ್ಪ ವಿರೋಧ
Team Udayavani, Oct 21, 2020, 7:28 PM IST
ಸಾಗರ: ಸಿಗಂದೂರು ದೇವಸ್ಥಾನವನ್ನು ಮುಜರಾಯಿಗೆ ಸೇರಿಸುವ ಅಥವಾ ಯಾವುದಾದರೂ ಮಠಗಳಿಗೆ ವಹಿಸಿಕೊಡುವ ಪ್ರಸ್ತಾಪ ಸರ್ಕಾರದ ಎದುರು ಇಲ್ಲ. ಗೋಕರ್ಣ ಮಾದರಿ ಇಲ್ಲಿಗೆ ಅನ್ವಯವಾಗುವುದಿಲ್ಲ. ಈಗಿನ ವ್ಯವಸ್ಥೆಯನ್ನು ಧರ್ಮದರ್ಶಿ ರಾಮಪ್ಪ ಹಾಗೂಪ್ರಧಾನ ಅರ್ಚಕರಾದ ಎಸ್.ಪಿ. ಶೇಷಗಿರಿ ಭಟ್ ಮುಂದುವರಿಸಬೇಕೇ ವಿನಃ ಮುಜರಾಯಿಗೆ ಸೇರಿಸುವುದಕ್ಕೆ ನನ್ನ ಸಹಮತ ಇಲ್ಲ ಎಂದು ಎಂಎಸ್‌ಐಎಲ್ ಅಧ್ಯಕ್ಷ, ಶಾಸಕ ಎಚ್. ಹಾಲಪ್ಪ ಹರತಾಳು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಜರಾಯಿಗೆ ಸೇರಿಸಲಾಗುತ್ತಿದೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಕೆಲವರು ಸ್ವಯಂಘೋಷಿತವಾಗಿ ಕೆಲವು ಸಂಘ-ಸಂಸ್ಥೆಗಳಹೆಸರನ್ನು ಮುಂದಿಟ್ಟುಕೊಂಡು ರಾಮಪ್ಪನವರಮುಗ್ಧತೆಯನ್ನು ಬಳಸಿಕೊಂಡು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ. ಅವರು ಸಮಾಜದ ಆಯ್ಕೆಗಳಲ್ಲ. ಚುನಾವಣೆಗಳನ್ನೇ ನಡೆಸಿ ಆರಿಸಿ ಬಂದವರಲ್ಲ.ಈ ರೀತಿ ಜಾತಿಗಳನ್ನು ಎತ್ತಿ ಕಟ್ಟುವ ಪ್ರಯತ್ನ ಸಫಲವಾಗುವುದಿಲ್ಲ ಎಂದರು.
ಸಿಗಂದೂರು ದೇವಸ್ಥಾನ ಆಡಳಿತ ವ್ಯವಸ್ಥೆ ಹಿಂದಿನಂತೆ ಇರಬೇಕು ಎಂದು ನಾನು ಬಯಸುವವನು. ದೇವಸ್ಥಾನ ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪವನ್ನು ಮಾಡಿಲ್ಲ. ಕೆಲವು ದಿನಗಳ ಹಿಂದೆ ಧರ್ಮದರ್ಶಿಗಳು ಮತ್ತುಪ್ರಧಾನ ಅರ್ಚಕರ ನಡುವೆ ವೈಮನಸ್ಸು ಬಂದಾಗಸರಿಪಡಿಸಿಕೊಂಡು ಹೋಗುವಂತೆ ಇಬ್ಬರನ್ನೂ ಕೂರಿಸಿ ಮಾತುಕತೆ ಮಾಡಲು ಮೂರು ಬಾರಿಪ್ರಯತ್ನ ನಡೆಸಿದ್ದೇನೆ. ಪ್ರತಿಯೊಂದು ಸಂಧಾನ ಸಭೆಗೆ ಧರ್ಮದರ್ಶಿ ರಾಮಪ್ಪ ಬೇರೆ ಬೇರೆ ಕಾರಣಹೇಳಿ ತಪ್ಪಿಸಿಕೊಂಡಿದ್ದಾರೆ. ಅವರ ಈ ಕ್ರಮಗಳಹಿಂದೆ ಬೇರೆಯವರು ಇದ್ದಾರೆ ಎಂದು ಖಚಿತವಾಗಿ ಹೇಳಬಲ್ಲೆ ಎಂದು ತಿಳಿಸಿದರು.
ಈ ನಡುವೆ ಧರ್ಮದರ್ಶಿ ರಾಮಪ್ಪನವರು ಸಂಧಾನ ಸಭೆಗೆ ಕಾಗೋಡು ತಿಮ್ಮಪ್ಪನವರು ಇರಬೇಕು ಎಂದು ತಿಳಿಸಿದ್ದರು. ಉಪವಿಭಾಗಾಧಿಕಾರಿಗಳು ಕೂಡ ಮೂರ್‍ನಾಲ್ಕು ಬಾರಿ ಸಿಗಂದೂರು ಸಮಸ್ಯೆ ಕುರಿತು ಸರ್ಕಾರಕ್ಕೆ ವರದಿ ಕೊಡಬೇಕಾದ ಹಿನ್ನೆಲೆಯಲ್ಲಿ ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ನನ್ನಗಮನ ಸೆಳೆದಿದ್ದರು. ಆದರೆ ಪದೇ ಪದೇ ಸಂಧಾನ ಸಭೆಗೆ ರಾಮಪ್ಪನವರು ಗೈರು ಹಾಜರಾಗಿದ್ದರಿಂದಕೆಲವು ವಿಷಯ ನನ್ನ ಕೈಮೀರಿದೆ. ಸರ್ಕಾರ ಕೇಳಿರುವ ವರದಿಯನ್ನು ಜಿಲ್ಲಾ ಧಿಕಾರಿಗಳುಸರ್ಕಾರಕ್ಕೆ ಸಲ್ಲಿಸಿದರೆ ಅದು ತನ್ನ ಕ್ರಮ ಕೈಗೊಳ್ಳುತ್ತದೆ. ಸರ್ಕಾರ ವ್ಯಾಪಾರ, ದೇವಸ್ಥಾನ ನಿರ್ವಹಣೆಗಳಿಗೆ ಮುಂದಾಗಬಾರದು ಎಂಬುದು ನನ್ನ ವೈಯಕ್ತಿಕ ನಿಲುವು ಎಂದು ತಿಳಿಸಿದರು.
ಸರ್ಕಾರ ಸುಮ್ಮನೆ ಕುಳಿತುಕೊಳ್ಳಲಾಗುವುದಿಲ್ಲ. ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ದೇವಸ್ಥಾನದ ಆಡಳಿತದ ಕಡೆಯಿಂದ ಒದಗಿಸಲೇಬೇಕಾಗುತ್ತದೆ. ಆದರೆ ವಿವಾದ ಇತ್ಯರ್ಥದಲ್ಲಿ ಶಾಸಕರ ಪ್ರಯತ್ನವೇ ಇಲ್ಲ ಎಂದು ಬಿಂಬಿಸುವ ಮಾತು ಸಂಪೂರ್ಣಸುಳ್ಳು. ಈ ಹಿಂದೆಯೂ ಎರಡು ಮೂರು ಬಾರಿ ಸಣ್ಣ ಸಮಸ್ಯೆಗಳಾದಾಗ ಇವರಿಬ್ಬರನ್ನೂ ರಾಜಿ ಮಾಡಿಸಿದ್ದೆ. ಮುಕ್ತ ಮಾತುಕತೆಯಲ್ಲಿ ಎರಡು ಮೂರು ನಿಮಿಷದಲ್ಲಿ ಬಗೆಹರಿಯಬಹುದಾದ ವಿವಾದ ಕಗ್ಗಂಟಾಗುತ್ತಿದೆ. ಆದರೆ ಧರ್ಮದರ್ಶಿ ಹಾಗೂ ಪ್ರಧಾನ ಅರ್ಚಕರು ಸಮನ್ವಯದಿಂದಸೇರಿಕೊಂಡು ಹೋಗುವುದು ಏಕೈಕ ಪರಿಹಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ಧಿಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ನಗರಸಭೆ ಸದಸ್ಯರಾದ ಆರ್. ಶ್ರೀನಿವಾಸ್, ಮಧುರಾ ಶಿವಾನಂದ್, ನಾಗರಾಜ್ ಬೊಬ್ಬಿಗೆ, ಬಿ.ಟಿ. ರವೀಂದ್ರ ಇನ್ನಿತರರು ಇದ್ದರು.
ನಾನು ಫಲಾನುಭವಿ ಅಲ್ಲ! : ಸಿಗಂದೂರು ದೇವಸ್ಥಾನದಿಂದ ಬರುವ ಆದಾಯದ ಫಲಾನುಭವಿ ಅಲ್ಲ. ಇನ್ನು ಮುಂದಿನ ದಿನಗಳಲ್ಲಿಯೂ ಅಲ್ಲಿನ ಹಣ ಬಯಸುವುದಿಲ್ಲ. ರಾಮಪ್ಪ ನನಗೆ ಸಂಬಂಧಿ ಅಪ್ಪನ ತಂಗಿಯ ಮಗ ಅವರು. ಅದೇ ರೀತಿ ಅವರ ಮಗಳನ್ನು ನನ್ನ ಅಣ್ಣನ ಮಗನಿಗೆ ತಂದುಕೊಳ್ಳಲಾಗಿದೆ. ಅದೇ ರೀತಿ ಪ್ರಧಾನ ಅರ್ಚಕರು ಕೂಡನನ್ನ ಆಪ್ತರು. ಈಗ ನನ್ನ ವಿರುದ್ಧ ಆರೋಪಗಳನ್ನು ಮಾಡುವವರು ಹಲವು ಅಂಶಗಳನ್ನು ಗಮನಿಸಬೇಕು. ಮುಜರಾಯಿಗೆ ದೇವಸ್ಥಾನವನ್ನು ಸೇರಿಸಬೇಕು ಎಂದು ಗಟ್ಟಿಯಾಗಿ ಹೇಳಿದವರು ಮಾಜಿಸಚಿವ ಕಾಗೋಡು ತಿಮ್ಮಪ್ಪನವರು. 2015ರಲ್ಲಿಈ ಕುರಿತು ಎಸಿಯವರು ಸರ್ಕಾರಕ್ಕೆ ವರದಿ ಸಲ್ಲಿಸಿದ ಅವ ಧಿಯಲ್ಲಿ ಇಲ್ಲಿನ ಶಾಸಕರು ಯಾರಾಗಿದ್ದರು? ನಾನಂತೂ ಆಗ ಶಾಸಕ ಅಲ್ಲ. ಮುಖ್ಯಮಂತ್ರಿಗಳು ಈಗಾಗಲೇ ನನ್ನ ಹಾಗೂ ಕುಮಾರ್ ಬಂಗಾರಪ್ಪ ಅವರ ಅಭಿಪ್ರಾಯ ಕೇಳಿದ್ದಾರೆ. ಸ್ಥೂಲವಾಗಿ ಆ ಬಗ್ಗೆ ಮಾತನಾಡಿದ್ದೇವೆ ಎಂದು ಎಂಎಸ್ ಐಎಲ್ ಅಧ್ಯಕ್ಷ ಹಾಲಪ್ಪ ಸೂಕ್ಷ್ಮವಾಗಿ ತಮ್ಮ ಅಭಿಪ್ರಾಯ ಮಂಡಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Holehonnur: ಎರಡು ಪ್ರತ್ಯೇಕ ರಸ್ತೆ ಅಪಘಾತ
Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್!
Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್ ವ್ಯಾಪಾರಿಗಳ ಘೋಷಣೆ
SC: ಲಾಟರಿ ಕಿಂಗ್ ಮಾರ್ಟಿನ್ ಕೇಸ್: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್ ತಡೆ
Malayalam ಕಥೆಗಾರ, ಸಾಹಿತಿ ವಾಸುದೇವನ್ ನಾಯರ್ ವಿಧಿವಶ
Sullia: ಬೆಳ್ಳಾರೆ ಸೊಸೈಟಿ ಚುನಾವಣೆ; ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.