ಕೆರೆ ಡಿನೋಟಿಫಿಕೇಶನ್ ಮೂಲಕ ಹಣ ಮಾಡುವ ಹುನ್ನಾರ
Team Udayavani, Jul 27, 2017, 2:28 PM IST
ಸಾಗರ: ಕೆಲ ದಿನಗಳ ತಮ್ಮ ಹೇಳಿಕೆಯಿಂದ ರಾಜ್ಯದ ಕಾಡಿಗೆ ಕಂಟಕ ತಂದಿಟ್ಟ ಸಚಿವ ಕಾಗೋಡು ತಿಮ್ಮಪ್ಪ ಅವರು ಈಗ ಕೆರೆಗಳತ್ತ ಕಣ್ಣು ಹಾಕಿದ್ದಾರೆ. ತಮ್ಮ ಇಳಿ ವಯಸ್ಸಿನಲ್ಲಿ ಹಣ ಮಾಡುವ ವ್ಯವಸ್ಥಿತ ಸಂಚಿನ ಭಾಗವಾಗಿಯೇ ಅವರು ಮೂಲ ಸ್ವರೂಪ ಕಳೆದುಕೊಂಡ ನೆಪದಲ್ಲಿ ಕೆರೆಗಳ ಡಿ-ನೋಟಿಫಿಕೇಶನ್ ಗೆ ಮುಂದಾಗಿದ್ದಾರೆ. ಇದು ಬಿಲ್ಡರ್‌ಗಳ ಮೂಲಕ ಹಣ ಸಂಪಾದಿಸಲು ಮಾಡಿರುವ ತಂತ್ರಗಾರಿಕೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಳಾದ ಕೆರೆಗಳ ಹೂಳು ತೆಗೆದು ಜಲ ಮರುಪೂರಣ ಮಾಡುವ ಬರದಿಂದ ಕಂಗೆಟ್ಟ ರಾಜ್ಯಕ್ಕೆ ಕಾಯಕಲ್ಪ ಮಾಡಬೇಕಿತ್ತು. ಆದರೆ ಇಳಿ ವಯಸ್ಸಿನಲ್ಲಿ ಕಾಗೋಡು ಅವರಿಗೆ ಹಣ ಮಾಡುವ ಲೆಕ್ಕಾಚಾರ ಬಂದಿದೆ. ಬೆಂಗಳೂರಿನ ರಾಜಕಾಲುವೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಲು ಸಾಧ್ಯವಾಗದೆ ಮೌನವಾಗಿ ಕುಳಿತಿದ್ದಾರೆ. ರಾಜಾ ಕಾಲುವೆಯಲ್ಲಿ ಮಂತ್ರಿ ಮಹಲ್, ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರ ಆಸ್ತಿ ಇದೆ ಎಂಬುದೇ ಕಾರಣ ಎಂದು ಆಪಾದಿಸಿದರು.
ಕಾಗೋಡು ತಮ್ಮ ಪುತ್ರಿಯನ್ನು ರಾಜಕೀಯಕ್ಕೆ ತಂದಿರುವುದರ ಹಿಂದೆ ಅವರ ನಂತರ ಟಿಕೆಟ್ ಯಾರಿಗೆ ಎಂಬುದು ಸ್ಪಷ್ಟವಾಗಿದೆ. ಈ ಬೆಳವಣಿಗೆಗಳನ್ನು ನೋಡಿ ಕಾಂಗ್ರೆಸ್‌ನ ಎರಡನೇ ಹಂತದ ನಾಯಕರು ನೇಣು ಹಾಕಿಕೊಳ್ಳುವಂತಾಗಿದೆ ಎಂದು ವ್ಯಂಗ್ಯವಾಡಿದರು.
ಸರ್ವಋತು ಜಲಪಾತದ ಹೆಸರಿನಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತದ ಪರಿಸರದ ಉದ್ದೇಶಿತ ಯೋಜನೆ ಜಾರಿಗೆ ಅವಕಾಶ ಕೊಡುವುದಿಲ್ಲ. ಈ ಭಾಗದಲ್ಲಿ ಹಕ್ಕುಪತ್ರ ಇಲ್ಲದೆ ಸಂಕಷ್ಟ ಸ್ಥಿತಿಯಲ್ಲಿರುವ 425ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವು ನೀಡಬೇಕಾದ ಕಾಗೋಡು ಬಿ.ಆರ್. ಶೆಟ್ಟಿಯಂತಹ ಬಂಡವಾಳಶಾಹಿಗೆ ಸಾವಿರಾರು ಎಕರೆ ಜಾಗವನ್ನು ಕೊಡಲು ಹೊರಟಿರುವ ಕ್ರಮ ಖಂಡನೀಯ ಎಂದರು.
ನಾಲಿಗೆ ಹರಿತವಿದೆ ಎಂದು ಶಾಸಕ ಮಧು ಬಂಗಾರಪ್ಪ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಅವರ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕುರಿತು ಕೂಡ ನಾವು ಸಾವಿರ ಮಾತನಾಡಬಹುದು. ಹಾಗೆಲ್ಲ ಮಾತನಾಡುವುದು ಸಭ್ಯತೆಯಲ್ಲ. ಯುವ ರಾಜಕಾರಣಿ ತಮ್ಮ ಜವಾಬ್ದಾರಿಯನ್ನು ಅರಿತು ಗೌರವಯುತವಾಗಿ ಮಾತನಾಡಬೇಕು ಎಂದರು.
ತಾಲೂಕಿನ ಅರಣ್ಯ ಇಲಾಖೆಯಲ್ಲಿ ನೆಡುತೋಪು ವಿಷಯದಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದಕ್ಕೆ ಕಾರಣವಾಗಿರುವ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಗಂಗೊಳ್ಳಿ ಅವರನ್ನು ಇನ್ನು ಹದಿನೈದು ಇಪ್ಪತ್ತು ದಿನದಲ್ಲಿ ವರ್ಗಾವಣೆ ಮಾಡುವ ಮೂಲಕ ಸೂಕ್ತ ತನಿಖೆ ನಡೆಸದೆ ಇದ್ದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಸ್ವಾತಂತ್ರ್ಯ ಬಂದ ನಂತರ ಇಷ್ಟು ಹಾಳಾಗಿರುವುದು ಈಗಲೇ ಎಂದು ಕಾಣುತ್ತದೆ. ರಾಜ್ಯದ ಎಲ್ಲ ಭಾಗದ ಜನ ಜೋಗ
ಜಲಪಾತವನ್ನು ನೋಡಲು ಬರಲು ಇದೇ ರಸ್ತೆ ಬಳಸುತ್ತಿದ್ದಾರೆ. ಈ ಸ್ಥಿತಿಯನ್ನು ನೋಡಿದರೆ ಸಾಗರ ಕ್ಷೇತ್ರದಲ್ಲಿ ಶಾಸಕರೇ ಇಲ್ಲವೇನೋ ಎಂಬ
ಭಾವನೆ ಮೂಡುತ್ತದೆ ಎಂದು ಕುಟುಕಿದರು. ಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಸಂತೋಷ್ ಶೇಟ್, ಅರವಿಂದ ರಾಯ್ಕರ್, ನಾಗರತ್ನ, ಭೀಮನೇರಿ ಶಿವಪ್ಪ, ಬಿ. ಮೋಹನ್, ವಿ. ಮಹೇಶ್, ಕಲಸೆ ಚಂದ್ರಪ್ಪ, ಎಸ್.ಎಲ್. ಮಂಜುನಾಥ್, ಭೀಮನೇರಿ ಶಿವಪ್ಪ, ಸುವರ್ಣ ಟೀಕಪ್ಪ, ಚಂದ್ರಶೇಖರ ಅದರಂತೆ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ರಿಪ್ಪನ್ ಪೇಟೆ ಸಮೀಪ ಹಿಟ್ ಅಂಡ್ ರನ್; ಬೈಕ್ ಸವಾರ ಸಾವು
Shivamogga: ಮುಂದುವರಿದ ಕರಡಿಗಳ ಹಾವಳಿ; ಸ್ಥಳೀಯರಲ್ಲಿ ತೀವ್ರ ಆತಂಕ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ
Shimoga: ಮೊಬೈಲ್ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.