ಪೌರಕಾರ್ಮಿಕ ಅನಧಿಕೃತ ಗೈರುಹಾಜರಿಗೆ ಶಿಸ್ತುಕ್ರಮ ಅನಿವಾರ್ಯ: ಮಧುರಾ ಎಚ್ಚರಿಕೆ
Team Udayavani, Mar 1, 2022, 5:51 PM IST
ಸಾಗರ: ಇಲ್ಲಿನ ನಗರಸಭೆ ಆವರಣಕ್ಕೆ ಮಂಗಳವಾರ ಬೆಳಗಿನ ಅವಧಿಯಲ್ಲಿ ದಿಢೀರ್ ಭೇಟಿ ನೀಡಿದ ನಗರಸಭಾಧ್ಯಕ್ಷೆ ಮಧುರಾ ಶಿವಾನಂದ್ ಪೌರಕಾರ್ಮಿಕರ ಹಾಜರಿ ದಾಖಲೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪೌರಕಾರ್ಮಿಕರು ನಗರಸಭೆಯ ಅಧಿಕಾರಿಗಳಿಗೆ ಪೂರ್ವ ಮಾಹಿತಿ ನೀಡದೆ ಗೈರಾಗುತ್ತಿದ್ದಾರೆ ಎಂಬ ಮಾಹಿತಿ ಇದೆ. ರಜೆ ಪತ್ರ ನೀಡದೆ ಹಾಗೂ ಮಾಹಿತಿ ನೀಡದೆ ಗೈರಾದವರ ಮೇಲೆ ಶಿಸ್ತುಕ್ರಮ ಅನಿವಾರ‍್ಯ. ಅನಾರೋಗ್ಯ ಅಥವಾ ತುರ್ತು ಕಾರ‍್ಯ ಇದ್ದ ಸಂದರ್ಭ ಮುಂಚಿತವಾಗಿ ತಿಳಿಸಬೇಕು. ಬದಲಿ ವ್ಯವಸ್ಥೆ ಮಾಡಿಕೊಡಬೇಕು. ಅನಧಿಕೃತ ಗೈರಾದವರಿಗೆ ಸವಲತ್ತು ನೀಡಲಾಗುವದಿಲ್ಲ ಎಂದರು.
ಪೌರಕಾರ್ಮಿಕರು ಅನಧಿಕೃತ ಗೈರಾಗುವ ಬಗ್ಗೆ ಪ್ಯಾಕೇಜ್ ಗುತ್ತಿಗೆದಾರರು ಗಮನ ಹರಿಸಬೇಕು. ಆಕಸ್ಮಿಕ ಅವಘಢ ಸಂಭವಿಸಿದರೆ ಅನಧಿಕೃತವಾಗಿ ಬದಲಿ ವ್ಯವಸ್ಥೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಪೌರಕಾರ್ಮಿಕರಿಗೆ ಸೂಕ್ತ ಸೌಲಭ್ಯ ನೀಡಲು ಸಾಧ್ಯವಾಗುವುದಿಲ್ಲ. ನಗರ ವಿಸ್ತಾರವಾಗಿದ್ದು, ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇದೆ. ಜತೆಗೆ ಅನಧಿಕೃತವಾಗಿ ಗೈರಾದರೆ ನಗರ ನೈರ್ಮಲ್ಯ ಕಾರ‍್ಯಕ್ಕೆ ಅಡಚಣೆಯಾಗುತ್ತದೆ ಎಂದರು.
ಪರಿಸರ ವಿಭಾಗದ ರಚನಾ, ಪೌರಕಾರ್ಮಿಕರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.