Sagara: ತಾಯಿ ಮಗು ಆಸ್ಪತ್ರೆ ಹೈಟೆಕ್ ಮಾಡಲು ಅಗತ್ಯ ಕ್ರಮ; ಬೇಳೂರು

Team Udayavani, Oct 16, 2024, 4:16 PM IST

Sagara: ತಾಯಿ ಮಗು ಆಸ್ಪತ್ರೆ ಹೈಟೆಕ್ ಮಾಡಲು ಅಗತ್ಯ ಕ್ರಮ; ಬೇಳೂರು

ಸಾಗರ: ತಾಯಿ ಮಗು ಆಸ್ಪತ್ರೆ ಹೈಟೆಕ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬರುವ ರೋಗಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಅನುದಾನ ನೀಡಿ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ತಾಯಿ ಮಗು ಆಸ್ಪತ್ರೆಯಲ್ಲಿ ಬುಧವಾರ 18 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಲೇಬರ್ ವಾರ್ಡ್ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಾ ಇದರ ಜೊತೆಗೆ ಮಕ್ಕಳ ಐಸಿಯು ಘಟಕವನ್ನು ಸಹ ಲೋಕಾರ್ಪಣೆಗೊಳಿಸಲಾಗಿದೆ ಎಂದರು.

ಆಸ್ಪತ್ರೆ ಅಭಿವೃದ್ಧಿಗಾಗಿ 1.45 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಆಸ್ಪತ್ರೆಗೆ ಸುಣ್ಣಬಣ್ಣ, ಸಣ್ಣಪುಟ್ಟ ರಿಪೇರಿ, ಶೌಚಾಲಯ, ಉದ್ಯಾನವನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಉಪವಿಭಾಗೀಯ ಆಸ್ಪತ್ರೆ ಮತ್ತು ತಾಯಿಮಗು ಆಸ್ಪತ್ರೆ ಎರಡೂ ಏಕಕಾಲದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಎರಡೂ ಆಸ್ಪತ್ರೆಗಳಿಗೆ ನಮ್ಮ ತಾಲೂಕು ಅಲ್ಲದೆ ಅಕ್ಕಪಕ್ಕದ ಜಿಲ್ಲೆ ಮತ್ತು ತಾಲೂಕಿನಿಂದ ಗುಣಮಟ್ಟದ ಆರೋಗ್ಯಸೇವೆ ಸಿಗುತ್ತದೆ ಎಂದು ರೋಗಿಗಳು ಬರುತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ಉತ್ತಮ ಆರೋಗ್ಯ ಸೇವೆ ವೈದ್ಯಸಿಬ್ಬಂದಿಗಳು ನೀಡುತ್ತಿದ್ದಾರೆ ಎಂದು ಹೇಳಿದರು.

ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ರಿಪ್ಪನಪೇಟೆಯಲ್ಲಿ ನರ್ಸ್ ಕೊರತೆ ಮನಗಂಡು ಗೌರವಧನವನ್ನು ವೈಯಕ್ತಿಕವಾಗಿ ನೀಡಿ ಓರ್ವ ನರ್ಸ್ ನೇಮಕ ಮಾಡಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಲು ಅಗತ್ಯ ಕ್ರಮ ತೆಗೆದುಕೊಂಡಿದ್ದು, ಸಾರ್ವಜನಿಕರು ವೈದ್ಯಸಿಬ್ಬಂದಿಗಳ ಜೊತೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಸಣ್ಣಪುಟ್ಟ ಸಮಸ್ಯೆಗಳಿದ್ದಾಗ ನನ್ನ ಅಥವಾ ಆರೋಗ್ಯ ರಕ್ಷಾ ಸಮಿತಿ ಗಮನಕ್ಕೆ ತನ್ನಿ. ವೈದ್ಯರು ತಪ್ಪು ಮಾಡಿದರೆ ಅವರನ್ನು ಅಮಾನತ್ತುಗೊಳಿಸುವುದು, ಬೇರೆ ಕಡೆ ವರ್ಗಾವಣೆ ಮಾಡಲು ಅವಕಾಶ ಇರುತ್ತದೆ. ಆಸ್ಪತ್ರೆ ಎದುರು ಜಾತಿ ಧರ್ಮವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವುದು, ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ. ವೈದ್ಯರು ಬೇರೆ ಕಡೆ ಹೋದರೆ ಬೇರೆ ವೈದ್ಯರನ್ನು ಕರೆತರುವುದು ಕಷ್ಟವಾಗುತ್ತದೆ. ಇದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ಉತ್ತಮ ಆರೋಗ್ಯ ಸೇವೆ ಪಡೆಯಿರಿ. ಅದೇ ರೀತಿ ವೈದ್ಯರನ್ನು ಗೌರವದಿಂದ ನೋಡಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಿವಿಲ್ ಸರ್ಜಜ್ ಡಾ. ಕೆ.ಪರಪ್ಪ, ಡಾ. ಬಿ.ಜಿ.ಸಂಗಮ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಪರಿಸರ ಅಭಿಯಂತರ ಮದನ್, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಲಲಿತಮ್ಮ, ಎಲ್.ಚಂದ್ರಪ್ಪ, ಸೈಯದ್ ಜಾಕೀರ್, ಪ್ರಮುಖರಾದ ಟಿ.ಪಿ.ರಮೇಶ್, ಅಶೋಕ ಬೇಳೂರು, ಸುರೇಶಬಾಬು, ಕೆ.ಸಿದ್ದಪ್ಪ, ಡಿ.ದಿನೇಶ್, ಈಳಿ ಶ್ರೀಧರ್, ಕಲಸೆ ಚಂದ್ರಪ್ಪ, ಮನೋಜ್ ಕುಗ್ವೆ ಇನ್ನಿತರರು ಹಾಜರಿದ್ದರು.

ಟಾಪ್ ನ್ಯೂಸ್

14

BBK11: ಗಲಾಟೆ ಭರದಲ್ಲಿ ಮಂಜುಗೆ ಕಿಸ್‌ ಮಾಡಿದ್ರಾ ಜಗದೀಶ್?‌ ಏನಿದು ವೈರಲ್‌ ವಿಡಿಯೋ?

Cavery-Water

Drinking Water: ಕಾವೇರಿ 6ನೇ ಹಂತದ ಯೋಜನೆಗೆ ಡಿಪಿಆರ್‌ ಸಿದ್ಧ: ಡಿಸಿಎಂ ಶಿವಕುಮಾರ್‌

13

Kollywood: 33 ವರ್ಷದ ಬಳಿಕ ರಜಿನಿ ಜತೆ ಮಣಿರತ್ನಂ ಸಿನಿಮಾ? ನಿರ್ದೇಶಕರ ಪತ್ನಿ ಹೇಳಿದ್ದೇನು?

Extortion Case: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಶರ್ಮಾ ಬಂಧನ

Extortion Case: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಶರ್ಮಾ ಬಂಧನ

10-udupi

Udupi: ಅಕ್ರಮ ಪಟಾಕಿ ದಾಸ್ತಾನು; ಪೊಲೀಸ್‌ ವಶಕ್ಕೆ

Thalapathy 69: 8 ವರ್ಷದ ಬಳಿಕ ಮತ್ತೆ ಪೊಲೀಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ್

Thalapathy 69: 8 ವರ್ಷದ ಬಳಿಕ ಮತ್ತೆ ಪೊಲೀಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ್

Nigeria: ತೈಲ ಟ್ಯಾಂಕರ್‌ ಸ್ಫೋಟ-ನೂರು ಮಂದಿ ಸಜೀವ ದಹನ, 50 ಜನರಿಗೆ ಗಾಯ

Nigeria: ತೈಲ ಟ್ಯಾಂಕರ್‌ ಸ್ಫೋಟ-ನೂರು ಮಂದಿ ಸಜೀವ ದಹನ, 50 ಜನರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-sagara

Sagara: ನಗರ ವ್ಯಾಪ್ತಿಯ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ; ಬೇಳೂರು ಸೂಚನೆ

7-sagara

Sagara: ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾಗಲೇ ಕುಸಿದು ಬಿದ್ದು ಶಿಕ್ಷಕ ಮೃತ್ಯು

1-bus

Shivamogga; ಚರಂಡಿಗೆ ಬಿದ್ದ ಸಿಟಿ ಬಸ್: ಹಲವು ಪ್ರಯಾಣಿಕರಿಗೆ ಗಾಯ

7-sagara

Sagara: ನಗರಸಭೆ ಬಿಜೆಪಿ ಸದಸ್ಯರ ದಲಿತ ವಿರೋಧಿ ನೀತಿ; ಕಾಂಗ್ರೆಸ್ ಖಂಡನೆ, ಪ್ರತಿಭಟನೆ

K. S. Eshwarappa: ಅ.20ರಂದು ಬ್ರಿಗೇಡ್‌ ಹೆಸರು ಘೋಷಣೆ

K. S. Eshwarappa: ಅ.20ರಂದು ಬ್ರಿಗೇಡ್‌ ಹೆಸರು ಘೋಷಣೆ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

14

BBK11: ಗಲಾಟೆ ಭರದಲ್ಲಿ ಮಂಜುಗೆ ಕಿಸ್‌ ಮಾಡಿದ್ರಾ ಜಗದೀಶ್?‌ ಏನಿದು ವೈರಲ್‌ ವಿಡಿಯೋ?

Cavery-Water

Drinking Water: ಕಾವೇರಿ 6ನೇ ಹಂತದ ಯೋಜನೆಗೆ ಡಿಪಿಆರ್‌ ಸಿದ್ಧ: ಡಿಸಿಎಂ ಶಿವಕುಮಾರ್‌

13

Kollywood: 33 ವರ್ಷದ ಬಳಿಕ ರಜಿನಿ ಜತೆ ಮಣಿರತ್ನಂ ಸಿನಿಮಾ? ನಿರ್ದೇಶಕರ ಪತ್ನಿ ಹೇಳಿದ್ದೇನು?

Extortion Case: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಶರ್ಮಾ ಬಂಧನ

Extortion Case: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಶರ್ಮಾ ಬಂಧನ

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.