ಟಿಪ್ಪು ಸುಲ್ತಾನ್ ಜನ್ಮದಿನಾಂಕ ಕುರಿತು ಹೊಸ ಸಂಶೋಧನೆ
Team Udayavani, Jul 17, 2021, 4:09 PM IST
ಶಿವಮೊಗ್ಗ: ಟಿಪ್ಪುಸುಲ್ತಾನ್ ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಹೊಸ ಸಂಶೋಧನೆಯೊಂದು ಹೊರಬಂದಿದ್ದು, ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ನಾಣ್ಯ ಸಂಗ್ರಹಕಾರ ಹಾಗೂ ಇತಿಹಾಸಕಾರ ಖಂಡೋಬರಾವ್ ಹೇಳಿದರು.
ಇತಿಹಾಸ ತಜ್ಞ, ಸಂಶೋಧಕಾ ನಿಧಿನ್ ಓಲಿಕೆರ ಅವರು ಈ ಬಗ್ಗೆ ಸಂಶೋಧನೆಯ ಮೂಲಕ ಟಿಪ್ಪುಸುಲ್ತಾನ್ ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಹೊಸ ಸಂಶೋಧನೆಯನ್ನು ನಡಸಿದ್ದಾರೆ. ಇದುವರೆಗೂ ಟಿಪ್ಪು ಜನ್ಮ ದಿನಾಂಕ ನವೆಂಬರ್ 20 1750 ಎಂದು ವಿಶ್ವದ್ಯಂತ ಒಪ್ಪಿಕೊಂಡಿದ್ದಾರೆ. ಆದರೆ ನಿಧಿನ್ ಅವರ ಹೊಸ ಸಂಶೋಧನೆ ಪ್ರಕಾರ ಅದು 1ನೇ ಡಿಸೆಂಬರ್ 1751 ಆಗಿದೆ. ಈ ಬಗ್ಗೆ ಅವರು 3 ವರ್ಷಗಳ ಕಾಲ ಸಂಶೋಧನೆ ನಡೆಸಿ ಇದಕ್ಕಾಗಿ ಲಂಡನ್‌ನಲ್ಲಿ ಇರುವ ಮ್ಯೂಸಿಯಂನಲ್ಲಿ ಟಿಪ್ಪುಗೆ ಸಂಬಂಧಿಸಿದ ಅಧಿಕೃತ ಪತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿ ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದರು.
ನಿಧಿನ್ ಅವರು ಲಂಡನ್‌ಗೆ ತೆರಳಿದಾಗ ಅಲ್ಲಿನ ಬ್ರಿಟಿಷ್ ಗ್ರಂಥಾಲಯದಲ್ಲಿ ಟಿಪ್ಪುಗೆ ಸಂಬಂಧಿಸಿದಂತೆ ಪರ್ಶಿಯನ್ ಭಾಷೆಯಲ್ಲಿರುವ ಹಸ್ತ ಪ್ರತಿಯೊಂದು ಕಾಣ ಸಿಗುತ್ತದೆ. ಅದರ ಹೆಸರು “ಫತೇ ಉಲ್ ಮುಜಾಹಿದ್ದೀನ್” ಆಗಿರುತ್ತದೆ. ಇದನ್ನು ಟಿಪ್ಪು ತಾನೇ ಬರೆಸಿದ ಕೈಪಿಡಿಯಾಗಿರುತ್ತದೆ. ಆ ಕೈಪಿಡಿಯಲ್ಲಿ ಜಕ್ರಿಮಾಸದ 14ನೇ ದಿನ 1165 ಇಜ್ರಿ ದಿನದಂದು ಸುರ್ಯೋದಯವಾದ 10 ಗಂಟೆಗಳ ನಂತರ ನನ್ನ ಜನ್ಮದಿನವನ್ನು ಆಚರಿಸಬೇಕು ಮತ್ತು ಮೈಸೂರು ಸಂಸ್ಥಾನದ ಸಮಸ್ತ ಪ್ರಜೆಗಳು ಇದರಲ್ಲಿ ಪಾಲ್ಗೊಳ್ಳಬೇಕು ಎಂದಿತ್ತು.
ಇದರ ಆಧಾರವನ್ನು ಬೆನ್ನೆತಿಕೊಂಡು ಹೋದ ಓಲಿಕೆರ ಅವರು ಇದನ್ನು ಆಂಗ್ಲ ಕ್ಯಾಲೆಂಡರ್‌ಗೆ ಬದಲಾಯಿಸಿಕೊಂಡು ಈ ಹೊಸ ದಿನಾಂಕವನ್ನು ಕಂಡು ಹಿಡಿದಿದ್ದಾರೆ. ಇದಕ್ಕೆ ಪೂರಕವಾಗಿ ಅವರಿಗೆ ಇನ್ನೂ ಕೆಲವು ಹಸ್ತ ಪ್ರತಿಗಳು ಸಿಕ್ಕಿವೆ ಇವೆಲ್ಲವನ್ನೂ ಒಟ್ಟುಕೊಂಡು ಅವರು ಟಿಪ್ಪು ಜನ್ಮ ರಹಸ್ಯವನ್ನು ಬೇಧಿಸಿದ್ದಾರೆ ಎಂದರು.
ಇತಿಹಾಸ ತಜ್ಞ ಮತ್ತು ಸಂಶೋಧಕಾ ನಿಧಿನ್ ಓಲಿಕೆರ ಮಾತನಾಡಿ, ಟಿಪ್ಪು ಜನ್ಮ ದಿನಾಂಕವನ್ನು ನಿಖರವಾಗಿ ತಿಳಿಸಲು ನಾನು ಹಲವು ವರ್ಷಗಳ ಕಾಲ ಸಂಶೋಧನೆ ಮಾಡಿದ್ದೇನೆ. ಪ್ರಮುಖವಾಗಿ 3 ದಾಖಲೆಗಳನ್ನು ನೀಡಿದ್ದೇನೆ. ಈ ಬಗ್ಗೆ ಈಗಾಗಲೇ ಮಂಗಳೂರು ಮತ್ತು ಗೋವಾ ವಿವಿಯ ಮಾಜಿ ಕುಲಪತಿಗಳು ಮತ್ತು ಪ್ರಸಿದ್ಧ ಇತಿಹಾಸಕಾರರಾಗಿರುವ ಪ್ರೋ.ಶೇಖ್ ಹಾಲಿ ಅವರು ಅವಲೋಕಿಸಿ ಅನುಮೋಧನೆ ನೀಡಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ನನ್ನ ಸಂಪೂರ್ಣ ಅಧ್ಯಾಯನದ ವಿವರಗಳನ್ನು ತಿಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಟಿಪ್ಪು ಜನ್ಮ ದಿನಾಂಕ 1ನೇ ಡಿಸೆಂಬರ್ 1751 (1-12-1751) ಆಗಬೇಕೆಂದು ಮನವಿ ಮಾಡಿಕೊಳ್ಳುತ್ತಿರುವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.