ಗಣಿ ಇಲಾಖೆಯ ಅಧಿಕಾರಿಗಳು ಆರಗ ಜ್ಞಾನೇಂದ್ರರ ಆಣತಿಯಂತಿದ್ದಾರೆ : ಕಿಮ್ಮನೆ ರತ್ನಾಕರ್

ಕಿಮ್ಮನೆ ಜತೆ ಬಂಡೆ ಕಾರ್ಮಿಕರು ಮತ್ತು ಅಧಿಕಾರಿಗಳ ವಾಗ್ವಾದ

Team Udayavani, Oct 12, 2022, 9:45 PM IST

1-ffwrw

ತೀರ್ಥಹಳ್ಳಿ : ಕುರುವಳ್ಳಿ ಬಂಡೆ ಗುತ್ತಿಗೆಯನ್ನು ಬಿಜೆಪಿಯವರಿಗೆ ವಹಿಸಿ ಕೊಡುವ ತಂತ್ರಗಾರಿಕೆ ನಡೆಯುತ್ತಿದ್ದು ಆರೇಳು ದಶಕಗಳಿಂದ ಬಂಡೆಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದವರನ್ನು ಇಲ್ಲಿಂದ ಓಡಿಸುವ ಪ್ರಯತ್ನ ನಡೆದಿದೆ. ಈ ವಿಚಾರದಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಗೃಹ ಸಚಿವ ಆರಗ ಜ್ಞಾನೇಂದ್ರರ ಆಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.

ಕುರುವಳ್ಳಿ ಬಂಡೆಗೆ ಹೋಗುವ ಮಾರ್ಗದಲ್ಲಿ ಮಂಗಳವಾರ ರಾತ್ರಿ ಟ್ರೆಂಚ್ ಹೊಡೆದ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಮೇಲಿನಕುರುವಳ್ಳಿಯ ಕಲ್ಲುಕುಟಿಕರ ಸಂಘದ ಕಾರ್ಯಾಲಯದಲ್ಲಿ ಬುಧವಾರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಗ್ರಾಪಂ ಮತ್ತು ಪಪಂ ಜನಪ್ರತಿನಿಧಿಗಳು, ಬಂಡೆ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು.

ಸಭೆ ನಡೆಸಿ ಹೊರ ಬರುತ್ತಿದ್ದಂತೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಬಂದಿರುವ ವಿಚಾರ ತಿಳಿದ ಕಿಮ್ಮನೆ ರತ್ನಾಕರ್, ಸ್ಥಳದಲ್ಲಿದ್ದ ಅಧಿಕಾರಿಗಳಾದ ವಿಂಧ್ಯಾ ಮತ್ತು ಅವಿನಾಶ್ ವಿರುದ್ದ ಧಿಕ್ಕಾರ ಕೂಗಿ ಹರಿಹಾಯ್ದ ಅವರು, ಗೃಹ ಸಚಿವರ ನಿರ್ದೆಶನದಲ್ಲಿ ನೀವುಗಳು ಬಡವರ ಅನ್ನಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದೀರಿ ಎಂದೂ ಆರೋಪಿಸಿದರು. ಇದನ್ನು ಸರಿಯಾದ ರೀತಿಯಲ್ಲಿ ಪ್ರತಿಭಟಿಸುವುದಾಗಿಯೂ ಎಚ್ಚರಿಸಿದರು.

ಈ ಹಂತದಲ್ಲಿ ಕಿಮ್ಮನೆ ರತ್ನಾಕರ್ ಜೊತೆ ಬಂಡೆ ಕಾರ್ಮಿಕರು ಮತ್ತು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿ ಕೆಲಹೊತ್ತು ಮಾತಿನ ಚಕಮಕಿಯೂ ನಡೆಯಿತು. ಇದೇ ವೇಳೆ ಗ್ರಾಪಂ ಸದಸ್ಯರು, ಬಂಡೆ ಕಾರ್ಮಿಕರು ಮತ್ತು ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿದರು. ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ವಿಂಧ್ಯಾ ಕೋರಿಕೆಯಂತೆ ಪೋಲೀಸರ ಪ್ರವೇಶವೂ ಆಗಿತ್ತು.

ಗೃಹ ಸಚಿವರ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದೀರಿ. ಈ ಕಾರ್ಮಿಕರ ನೂರಾರು ಕುಟುಂಬಗಳು ಕಳೆದ 50-60 ವರ್ಷಗಳಿಂದ ಈ ಬಂಡೆಯನ್ನು ಅವಲಂಬಿಸಿ ಬದುಕುತ್ತಿವೆ. ಬಡ ಕಾರ್ಮಿಕರ ಬಗ್ಗೆ ಅನುಕಂಪ ಹೊಂದಿರಬೇಕಾದ ನೀವುಗಳು ಕಾರ್ಮಿಕರ ಉಳಿ ಸುತ್ತಿಗೆ ಮುಂತಾದವುಗಳನ್ನು ವಶಪಡಿಸಿಕೊಂಡಿರುವುದಲ್ಲದೇ ಅವರುಗಳು ಶ್ರಮಪಟ್ಟು ತಯಾರಿಸಿದ ಕಲ್ಲುಗಳನ್ನು ನಾಶ
ಪಡಿಸಿ ಅಮಾನವೀಯವಾಗಿ ನಡೆದುಕೊಂಡಿದ್ದೀರಿ. ತಾಲೂಕಿನಲ್ಲಿ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಆ ಬಗ್ಗೆ ಗಮನ ಹರಿಸದ ನಿಮ್ಮ ಇಲಾಖೆ ಬಂಡೆ ಕಾರ್ಮಿಕರ ಮೇಲೆ ಮಾತ್ರ ದಬ್ಬಾಳಿಕೆ ನಡೆಸುತ್ತಿದ್ದೀರಿ ಎಂದೂ ದೂರಿದರು.

ಈ ಬಗ್ಗೆ ಪ್ರತಿಕ್ರಯಿಸಿದ ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ವಿಂಧ್ಯಾ ಮತ್ತು ಅವಿನಾಶ್, ಇದರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕಾರಣ ಇಲಾಖೆಯ ನಿಯಮದಂತೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಸ್ಥಳೀಯರೇ ದೂರು ನೀಡಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದಷ್ಟೇ ಈ ಸಮಸ್ಯೆ ಉದ್ಘವವಾಗಿದೆ. ಮತ್ತು ಸಿದ್ದಪಡಿಸಿದ ಕಲ್ಲುಗಳನ್ನು ನಾಶ ಪಡಿಸುವ ಹಕ್ಕು ನಮಗಿದೆ. ಮುಖ್ಯವಾಗಿ ನಾಳೆಯಿಂದ ಇಲ್ಲಿ ಕೆಲಸ ನಡೀಬಾರದು ಅಷ್ಟೇ ಎಂದು ಹೇಳಿದರು.

ಗ್ರಾಪಂ ಸದಸ್ಯರೊಬ್ಬರ ಆರೋಪದ ಬಗ್ಗೆ ಉತ್ತರಿಸಿದ ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ವಿಂಧ್ಯಾ ಈ ತಾಲೂಕಿನಲ್ಲಿ ಮರಳು ಅಕ್ರಮ ನಡೆಯುತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿಯೂ ಇಲ್ಲಾ. ಮಾಹಿತಿ ಇದ್ದಲ್ಲಿ ಖಂಡಿತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದಕ್ಕೆ ಮೊದಲು ನಡೆದ ಸಭೆಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ನಾನು ಕಾನೂನಿಗೆ ವಿರುದ್ದವಗಿಲ್ಲ. ಆದರೆ ಇಲ್ಲಿ ಮಾನವೀಯತೆಯೇ ಮುಖ್ಯವಾಗಿದೆ. ನನ್ನ ಅಧಿಕಾರವಧಿಯಲ್ಲಿ ಈ ಸಮಸ್ಯೆಯನ್ನು ನಿರ್ವಹಣೆ ಮಾಡಿದ್ದೇನೆ. ಈಗ ಗೃಹ ಸಚಿವರು ತಮ್ಮ ಹಿಂಬಾಲಕರಿಗೆ ಬಂಡೆಯನ್ನು ಗುತ್ತಿಗೆ ಕೊಡಿಸುವ ಸಲುವಾಗಿ ಅಧಿಕಾರಿಗಳನ್ನು ಬಳಸಿ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿಗಳು ಮಾನವೀಯತೆಯನ್ನು ಮೀರಿ ಕಾರ್ಯನಿರ್ವಹಿಸುತ್ತಿರುವುದು ಖಂಡನೀಯ ಎಂದರು. ಕಾರ್ಮಿಕರಿಗೆ ಕೆಲಸವಿಲ್ಲದ ಕಾರಣ ಹೆಂಗಸರ ತಾಳಿಸರ ಅಡವಿಟ್ಟು ಜೀವನ ನಿರ್ವಹಣೆ ಮಾಡುವ ಸಂಕಷ್ಠ ಎದುರಾಗಿದೆ. ಸುಮಾರು 75% ಕಾರ್ಮಿಕರು ಈಗಾಗಲೇ ವಲಸೆ ಹೋಗಿದ್ದಾರೆ. ಈ ಬಗ್ಗೆ ಗುರುವಾರ ಬೆಳಿಗ್ಗೆ ತಾಲೂಕು ಕಚೇರಿ ಎದುರು ಧರಣಿ ನಡೆಸುವುದಾಗಿಯೂ ತಿಳಿಸಿದರಲ್ಲದೇ ಈ ವಿಚಾರದಲ್ಲಿ ಜೈಲಿಗೆ ಹೋಗುವುದಕ್ಕೂ ಸಿದ್ದನಿದ್ದೇನೆ ಎಂದರು.

ಮೇಲಿನಕುರುವಳ್ಳಿ ಗ್ರಾಪಂ ಸದಸ್ಯ ನಿಶ್ಚಲ್ ಮಾತನಾಡಿ, ಮಹಿಳೆಯರು ಮಕ್ಕಳು ವಾಸವಿರುವ ಜನವಸತಿ ಪ್ರದೇಶದಲ್ಲಿ ಅಧಿಕಾರಿಗಳು ರಾತ್ರಿ ಹೊತ್ತಿನಲ್ಲಿ ಏಕಾಏಕಿ ಜೆಸಿಬಿ ಬಳಸಿ ಟ್ರೆಂಚ್ ಹೊಡೆದ ಕಾರಣ ಜನರು ಭಯಭೀತರನ್ನಾಗಿಸಿದೆ. ಇದು ಸರ್ವಾಧಿಕಾರಿ ಧೋರಣೆಯಾಗಿದೆ. 300 ಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿಂದ ಕಾರ್ಕಳ, ತುಮಕೂರು, ಶಿರಾ ಮತ್ತು ಕೋಲಾರ ಭಾಗಕ್ಕೆ ವಲಸೆ ಹೋಗಿದ್ದಾರೆ ಎಂದು ಹೇಳಿದರು.

ಮಾಜಿ ಅದ್ಯಕ್ಷ ರವಿ, ಬಂಡೆ ಕಾರ್ಮಿಕ ಆನಂದ್ ಮಾತನಾಡಿ, ಬಂಡೆ ಗುತ್ತಿಗೆಯನ್ನು ಪ್ರಬಾವಿಗಳಿಗೆ ಕೊಡುವ ಹುನ್ನಾರವಾಗಿದ್ದು 50 ಲಕ್ಷ ವ್ಯವಹಾರ ನಡೆಸಿದವರಿಗೆ 4 ಬ್ಲಾಕ್‌ಗಳನ್ನು ವಿಭಾಗ ಮಾಡಿ ಇ ಟೆಂಡರ್ ಮೂಲಕ ಕರೆಯುವ ಪ್ರಕ್ರಿಯೆ ನಡೆದಿದೆ. ಬಡವರಾದ ನಾವು ಅಷ್ಟು ದೊಡ್ಡ ಮಟ್ಟದ ವ್ಯವಹಾರ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕಲ್ಲು ಕುಟಿಕರ ಸಂಘದ ಅಧ್ಯಕ್ಷ ನಾಗೇಂದ್ರ, ಗ್ರಾಪಂ ಅದ್ಯಕ್ಷೆ ಭವ್ಯಾ ರಾಘವೇಂದ್ರ, ಸದಸ್ಯರಾದ ನಾಗರಾಜ ಪೂಜಾರಿ, ಬಂಡೆ ವೆಂಕಟೇಶ್, ಪಪಂ ಅದ್ಯಕ್ಷೆ ಸುಶೀಲಾಶೆಟ್ಟಿ, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸದಸ್ಯರಾದ ಮಂಜುಳಾ ನಾಗೇಂದ್ರ ಹಾಗೂ ಬಂಡೆ ಮಾಲೀಕರು ಕಾರ್ಮಿಕರು
ಇದ್ದರು.

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

1-thirthahalli

Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

one-Health-misson

Infectious Disease: ರಾಜ್ಯಕ್ಕೂ ಬೇಕಿದೆ “ವಿಷಾಣು ಯುದ್ಧ ಅಭ್ಯಾಸ್‌”

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.