ಆನ್‌ಲೈನ್ ಶಾಪಿಂಗ್ ಕೂಪನ್ ಹೆಸರಲ್ಲಿ 1.73 ಲಕ್ಷ ರೂ. ವಂಚನೆ
Team Udayavani, Sep 13, 2020, 6:50 PM IST
ಸಾಂದರ್ಭಿಕ ಚಿತ್ರ
ಶಿವಮೊಗ್ಗ: ನ್ಯಾಪ್‌ಟಲ್ ಆನ್‌ಲೈನ್ ಶಾಪಿಂಗ್ ಕೂಪನ್ ನಲ್ಲಿ ನೀವು 12 ಲಕ್ಷ ರೂ. ಹಣ ಗೆದ್ದಿದ್ದೀರಿ ಎಂಬ ಸಂದೇಶ ಸ್ವೀಕರಿಸಲು ಹೋಗಿ ಮಹಿಳೆಯೊಬ್ಬರು ಬರೋಬ್ಬರಿ 1.73 ಲಕ್ಷ ರೂ. ವಂಚನೆಗೆ ಒಳಗಾದ ಘಟನೆ ನಡೆದಿದೆ.
ಸೆ.4 ರಂದು ನವುಲೆಯ ವೀರಭದ್ರೇಶ್ವರ ಲೇಔಟ್ ನ ಮಹಿಳೆಯೊಬ್ಬರು ಕೊಲ್ಕತ್ತಾದ ವಿಳಾಸವುಳ್ಳ ನ್ಯಾಪ್ ಟಲ್ ಆನ್ ಲೈನ್ ಶಾಪಿಂಗ್ ಪ್ರೈ.ಲಿಮಿಟೆಡ್ ಹೆಸರಿನಲ್ಲಿ 12 ಲಕ್ಷ ರೂ. ಹಣ ಗೆದ್ದೀದ್ದೀರಿ ಎಂಬ ಕೂಪನ್ ಮತ್ತು ಪತ್ರವೊಂದನ್ನು ಕೊರಿಯರ್ ಮೂಲಕ ಪಡೆದಿದ್ದಾರೆ. ಈ ಪತ್ರ ಮತ್ತು ಕೂಪನ್‌ನಲ್ಲಿದ್ದ 918017216387 ಹಾಗೂ 09163432157 ಮೊಬೈಲ್ ನಂಬರ್ ಗೆ ಫೂನಾಯಿಸಿ ವಿಚಾರಿಸಿದಾಗ ನಿಮ್ಮ ಹುಟ್ಟುಹಬ್ಬಕ್ಕೆ 12 ಲಕ್ಷ ರೂ ಬಹುಮಾನ ಗೆದ್ದೀದ್ದೀರಿ, ನಿಮ್ಮ ಮೊಬೈಲ್ ಸಂಖ್ಯೆಯಿಂದ ಬಹುಮಾನ ಗೆದ್ದಿದ್ದೀರಿ. ಬಹುಮಾನದಹಣವನ್ನ ಹಾಕುತ್ತೇವೆ. ಪತ್ರದಲ್ಲಿರುವ ಮಾಹಿತಿ ಭರ್ತಿ ಮಾಡಿ 09163432157 ಈ ನಂಬರ್‌ಗೆ ವಾಟ್ಸಪ್ ಮಾಡಿ ಎಂದು ತಿಳಿಸಿದ್ದಾರೆ.
ಈ ಹಣ ನಿಮ್ಮ ಕೈ ಸೇರಬೇಕಿದ್ದರೆ ಸ್ಟೇಟ್ ಗೌವರ್ನಮೆಂಟ್, ಸೆಂಟ್ರಲ್ ಗೌವರ್ನಮೆಂಟ್ ಟ್ಯಾಕ್ಸ್ ತುಂಬಿ ಎನ್‌ಒಸಿ ಪಡೆಯಬೇಕಾಗಿದೆ. ಅದಕ್ಕೆ ತಗಲುವ ಶುಲ್ಕದ ಹಣವನ್ನ ಎಸ್‌ಬಿಐ ಬ್ಯಾಂಕ್ ಖಾತೆಯ ರೀಟಾ ರಾಯ್ ಬ್ಯಾಂಕ್ ಖಾತೆಗೆ ಹಣ ತುಂಬಿಸಲು ವಂಚಕರು ಸೂಚಿಸಿದ್ದಾರೆ. ಅದರಂತೆ ಮೊದಲಿಗೆ ಚೆಕ್ ನ ಮೂಲಕ 24 ಸಾವಿರ ರೂ. ಹಣವನ್ನು, ಎರಡನೇ ಹಂತದಲ್ಲಿ 51 ಸಾವಿರ ರೂ. ಹಾಗೂ ಮೂರನೇ ಹಂತದಲ್ಲಿ 1 ಲಕ್ಷದ 2 ಸಾವಿರದ ನಾನೂರು ರೂ. ಹಣ ಚೆಕ್ ಮೂಲಕ ಹಾಕಿರುವ ಮಹಿಳೆ ಬರೋಬ್ಬರಿ 1 ಲಕ್ಷದ 73 ಸಾವಿರದ 400 ರೂ. ಕಳೆದುಕೊಂಡಿದ್ದಾರೆ. ಈ ಕುರಿತು ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
Anandapura: ಬಟ್ಟೆ ತೊಳೆಯಲು ಹೋದ ಮಹಿಳೆ ಕೆರೆಗೆ ಬಿದ್ದು ಮೃತ್ಯು
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
Anandapura: ಚಾಲಕನ ನಿಯಂತ್ರಣ ತಪ್ಪಿದ ಬಸ್; ಹಲವರಿಗೆ ಗಾಯ
Hosanagara: ಹಾಡುಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.