ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರಿಗೆ ಆನ್‌ಲೈನ್ ತರಬೇತಿ
Team Udayavani, Jul 21, 2020, 10:52 AM IST
ಭದ್ರಾವತಿ: ಕೋವಿಡ್ ನಿಯಂತ್ರಣ ಕಾರ್ಯ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಅದರಲ್ಲಿ ಕಾರ್ಯನಿರ್ವಹಿಸುವ ಕೋವಿಡ್ ವಾರಿಯರ್ಸ್ ಹಾಗೂ ನಾಗರಿಕರ ಸಹಕಾರ ಮತ್ತು ಆದೇಶಗಳ ಪಾಲನೆಯಲ್ಲಿ ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದು ತಜ್ಞ ವೈದ್ಯ ಡಾ| ರವೀಂದ್ರ ಹೇಳಿದರು.
ನಗರಸಭೆ ವತಿಯಿಂದ ನಗರದ ಶ್ರೀ ವೀರಭದ್ರೇಶ್ವರ ಚಿತ್ರಮಂದಿರಲ್ಲಿ ನಗರಸಭೆ ವತಿಯಿಂದ ಕೋವಿಡ್ -19ರ ನಗರ ಟಾಕ್ಸ್‌ಫೋರ್ಸ್ ಕಾರ್ಯಪಡೆ ಸದಸ್ಯರಿಗೆ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಆನ್‌ಲೈನ್ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವ ಪೌರಕಾರ್ಮಿಕರು, ನರ್ಸ್ ಮುಂತಾದವರು ದೇವರಂತೆ ಅವರ ಸೇವೆ ಸದಾ ಸ್ಮರಣೀಯ.ಈ ಕಾರ್ಯದಲ್ಲಿ ಪಾಲ್ಗೊಳ್ಳುವಾಗ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಸೇವಾಕಾರ್ಯದಲ್ಲಿ ವಹಿಸಬೇಕಾದ ಜಾವಾಬ್ದಾರಿಯನ್ನು ವಿವರಿಸಿದರು.
ತಜ್ಞ ಆತಿಕ್ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ನಗರಸಭೆ ವ್ಯಾಪ್ತಿಯಲ್ಲಿರುವ ವಾರ್ಡ್‌ಗಳಲ್ಲಿ 40 ಮನೆಗಳಿಗೆ ಒಂದರಂತೆ ಸಮಿತಿ ರಚಿಸಿಕೊಂಡು ಆ ಪ್ರದೇಶದ ಪ್ರತಿಮನೆಗೂ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ತಪಾಸಣೆಗೆ ಒಳಗಾಗುವಂತೆ ಅವರ ಮನವೊಲಿಸಿ ಎಂದರು. ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ ಮತ್ತು ಕಂದಾಯಾಧಿಕಾರಿ ರಾಜ್‌ಕುಮಾರ್ ನೇತೃತ್ವದಲ್ಲಿ 3 ಕಡೆ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.