ಹಳ್ಳಿಗಳಲ್ಲಿ ಉದ್ಯಮ ಚಟುವಟಿಕೆಗೆ ವಿರೋಧ

Team Udayavani, Oct 19, 2020, 7:31 PM IST

sm-tdy-1

ಸಾಗರ: ಅಭಿವೃದ್ಧಿಯ ಹೆಸರಿನಲ್ಲಿ ಕೃಷಿ ಪ್ರದೇಶಗಳಲ್ಲಿ ಹೋಂ ಸ್ಟೇ, ರೆಸಾರ್ಟ್‌ಗಳು ಸೇರಿದಂತೆ ವಿವಿಧ ಉದ್ಯಮ ಚಟುವಟಿಕೆಗಳನ್ನುತಮ್ಮ ಭಾಗದಲ್ಲಿ ನಡೆಸುವುದನ್ನು ತೀವ್ರವಾಗಿ ವಿರೋಧಿಸಿ ಖಂಡಿಕಾ ಹಾಗೂ ಮರತ್ತೂರುಗ್ರಾಪಂ ವ್ಯಾಪ್ತಿಯ ಹಳ್ಳಿಯ ಕೃಷಿಕರು ನಿರ್ಣಯ ಸ್ವೀಕರಿಸಿದರು.

ಈ ಸಂಬಂಧ ಖಂಡಿಕಾ, ಬೆಳ್ಳೆಣ್ಣೆ, ಹುಳೇಗಾರು, ಹೊಸಳ್ಳಿ, ಅರೆಹದ, ಕೈತೋಟ,ಗಾಡಿಗೆರೆ, ಹಿಂಡೂಮನೆ ಮೊದಲಾದ ಪಶ್ಚಿಮ ಘಟ್ಟದ ವ್ಯಾಪ್ತಿಯ ವಿವಿಧ ಹಳ್ಳಿಗಳಕೃಷಿಕರು ಮರಾನ್‌ಕುಳಿಯ ಸಭಾಂಗಣದಲ್ಲಿ ಭಾನುವಾರ ಸಮಾಲೋಚನಾ ಸಭೆ ನಡೆಸಿ, ಈ ಭಾಗದ ಖುಷ್ಕಿ ಜಮೀನುಗಳನ್ನು, ಗುಡ್ಡಗಳನ್ನುಖರೀದಿಸಿ ಆಧುನಿಕ ಯಂತ್ರಗಳ ಮೂಲಕ ಸಮತಟ್ಟು ಮಾಡುವ, ರೆಸಾರ್ಟ್‌ಗಳನ್ನು ಕಟ್ಟುವ ಎಲ್ಲ ಮಾದರಿಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ವಿರೋಧಿಸಲು, ಅಂತಹ ಸಾಧ್ಯತೆಗಳನ್ನು ತಡೆಯಲು ಕಾನೂನಾತ್ಮಕವಾಗಿ ಹಾಗೂ ಪ್ರಜಾತಾಂತ್ರಿಕವಾದ ಹೋರಾಟ ನಡೆಸಲು ನಿರ್ಧಾರ ಪ್ರಕಟಿಸಿದರು.

ಈ ಭಾಗದ ಪ್ರಮುಖ ಮರಾನ್‌ಕುಳಿಎಂ.ಜಿ. ರಾಮಚಂದ್ರ ಮಾತನಾಡಿ, ಸರ್ಕಾರದ ಕಾನೂನು, ಅವಕಾಶಗಳು ಇವೆ ಎಂದು ಸ್ಥಳೀಯ ಜನ ಸುಮ್ಮನೆ ಉಳಿದಿದ್ದರಿಂದಲೇ ಕೊಡಗಿನಲ್ಲಿ ಭೂ ಕುಸಿತದಂತ ಅಪಾಯಗಳನ್ನು ಈಗಾಗಲೇನಾವು ಗಮನಿಸಿದ್ದೇವೆ. ಈ ತರಹದ ಭೂ ಕುಸಿತ ಈಗಾಗಲೇ ನಮ್ಮ ಭಾಗದಲ್ಲೂ ಆರಂಭವಾಗಿದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಾವು ಹೋರಾಟ ಮಾಡಲೇಬೇಕಾದ ಕಾಲ ಬಂದಿದೆ. ಜನಪರವಾದಚಳುವಳಿಯನ್ನು ಯಾವುದೇ ಆಡಳಿತ, ಜನಪ್ರತಿನಿಧಿಗಳು ನಿರ್ಲಕ್ಷಿಸುವುದಿಲ್ಲ ಎಂದರು.

ಕೃಷಿ ಭೂಮಿಯನ್ನು ಧನಾಡ್ಯರು ಖರೀದಿಸುವ ಪ್ರಕ್ರಿಯೆ ದೊಡ್ಡ ಪ್ರಮಾಣದಲ್ಲಿನಡೆಯುತ್ತಿದೆ. ಈಗಿರುವ ಕೃಷಿ ವ್ಯವಸ್ಥೆಯನ್ನು ಮುಂದುವರಿಸುವ ಹೆಜ್ಜೆಗಳಿಗೆ ವಿರೋಧ ಇಲ್ಲ.ಆದರೆ ಹಿಟಾಚಿ, ಜೆಸಿಬಿ, ಬೋರ್‌ ಯಂತ್ರಗಳು ನಡೆಸುವ ದಾಂಧಲೆಯಿಂದ ಇಲ್ಲಿನ ಭೂ ಸೆಲೆಗಳು ಸಡಿಲವಾಗುತ್ತವೆ. ಈಗಾಗಲೇ ವರದಹಳ್ಳಿ, ನಂದೋಡಿಯಲ್ಲಿ ಆಗಿರುವ ಅಪಾಯಗಳುನಮ್ಮ ಮುಂದಿವೆ. ನಮ್ಮ ಹೋರಾಟಕ್ಕೆ ನಾಡಿನ ಎಲ್ಲ ಪರಿಸರ ಪ್ರೇಮಿಗಳು ಬೆಂಬಲಿಸುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡು ಚಳುವಳಿ ರೂಪಿಸಬೇಕು ಎಂದರು.

ಸ್ಥಳೀಯ ಪ್ರಮುಖ ಎಚ್‌.ಡಿ. ಕೃಷ್ಣಮೂರ್ತಿ ಮಾತನಾಡಿ, ನಮ್ಮ ಪ್ರದೇಶದ ನೈಜ ಪರಿಸರದ ಉಳಿವು ಕೇವಲ ನಮ್ಮ ಹಿತವನ್ನಷ್ಟೇ ಕಾಪಾಡುವುದಿಲ್ಲ. ಇದು ಪರಿಸರದ ಸಮತೋಲನದಲ್ಲಿ ದೊಡ್ಡ ಪಾತ್ರ ವಹಿಸುತ್ತದೆ.ನಮ್ಮ ಪ್ರತಿಭಟನೆಯ ಮೂಲ ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳುಹಾಗೂ ಪರಿಸರ ಕಾರ್ಯಕರ್ತರ ಬೆಂಬಲದಿಂದ ಮಲೆನಾಡಿನ ದೊಡ್ಡ ನಿಲುವಾಗಿಪ್ರತಿಬಿಂಬಿತವಾಗಬೇಕು. ಹಣ ಕೇಂದ್ರಿತವಾಗಿ ಕೃಷಿ ಖುಷ್ಕಿ ಜಮೀನುಗಳನ್ನು ಮಾರುವವರಿಗೂ ಇಲ್ಲಿನ ಬೆಳವಣಿಗೆಗಳು ಎಚ್ಚರಿಕೆಯ ಸಂದೇಶ ನೀಡುವಂತಾಗಬೇಕು ಎಂದರು.

ಗುರುಮೂರ್ತಿ ಕಾನುತೋಟ, ಹಿಂಡೂಮನೆ ತಿಮ್ಮಪ್ಪ, ಮಂಜುನಾಥ ಅರೆಹದ, ಮೋಹನ್‌ ಸಸರವಳ್ಳಿ, ಕಾಶಿ ಗಣಪತಿ, ಅರುಣ ಗೋಟಗಾರು, ಜಿತೇಂದ್ರ ಕಶ್ಯಪ್‌, ಹರ್ಷ ಹಿಂಡೂಮನೆ, ಮಂಜುನಾಥ ಪುರಪ್ಪೇಮನೆ, ಶೇಷಗಿರಿ ಹುಳೇಗಾರು, ಪ್ರೇಮನಾಥ್‌ ಮತ್ತಿತರರು ಇದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ

Na-Desoza-sagara

ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ

Hosnagara-Bus

Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು

Sarji sweet box case: ಲವ್‌ ಫೈಲ್ಯೂರ್‌ ಆಗಿದ್ದಕ್ಕೆ ಕೃತ್ಯ ಮಾಡಿದ್ದ ಲಾಯರ್!

Sarji sweet box case: ಲವ್‌ ಫೈಲ್ಯೂರ್‌ ಆಗಿದ್ದಕ್ಕೆ ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್!

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.