![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 10, 2020, 7:30 PM IST
ತೀರ್ಥಹಳ್ಳಿ: ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ರೈತರ ಕಷ್ಟದ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಈ ಮರಣ ಶಾಸನದಿಂದ ರೈತರು ನೆಮ್ಮದಿಯಿಂದ ನಿದ್ರೆ ಮಾಡುವಂತಿಲ್ಲ. ಇಂತಹ ಸರ್ಕಾರಗಳು ಇರಬಾರದು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಕಸ್ತೂರಿ ರಂಗನ್ ವರದಿ ವಿರೋಧಿಸಿ ಹಿರಿಯ ಸಹಕಾರಿ ಮುಖಂಡ ಆರ್.ಎಂ.ಮಂಜುನಾಥ ಗೌಡರ ನೇತೃತ್ವದಲ್ಲಿ ನಡೆದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈಗಿನ ಮುಖ್ಯಮಂತ್ರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ರೈತಪರ ಮುಖ್ಯಮಂತ್ರಿಯಿದ್ದಿದ್ದರೆ ಅದು ಬಂಗಾರಪ್ಪ, ಸಿದ್ದರಾಮಯ್ಯ ಮಾತ್ರ. ಯಡಿಯೂರಪ್ಪನವರೇನಿದ್ದರೂ ಮಠಗಳ ಪರ ಎಂದು ಲೇವಡಿ ಮಾಡಿದರು .
ಯಡಿಯೂರಪ್ಪ ಡೋಂಗಿ ರೈತ. ಪ್ರವಾಹ ಬಂದಾಗ ಶಿಕಾರಿಪುರದಲ್ಲಿ ಠಿಕಾಣಿ ಹೂಡಿದ್ದರೆ, ಇತ್ತ ಇವರ ಮಂತ್ರಿಮಂಡಲದ ಪ್ರಭಾವಿ ಮಂತ್ರಿ ಗೋವಿಂದ ಕಾರಜೋಳ ನನಗೆ ವಯಸ್ಸಾಗಿದೆ. ಕೋವಿಡ್ ಬರುತ್ತದೆ ಎಂದು ಹೇಳುತ್ತಾ ಉಪಚುನಾವಣೆಯಲ್ಲಿ ಕೈಬೀಸುತ್ತಾರೆ.ವಯಸ್ಸಾದರೆ ರಾಜೀನಾಮೆ ನೀಡಿ ಯುವಕರಿಗೆ ಅವಕಾಶ ಮಾಡಿಕೊಡಲಿ. ಕೇರಳದಲ್ಲಿ ತರಕಾರಿಗೆ ಬೆಂಬಲ ಬೆಲೆ ಕೊಡುತ್ತಿದ್ದಾರೆ. ಆದರೆ ನಮ್ಮಲ್ಲಿ ಸರ್ಕಾರಿ ನೌಕರರಿಗೂ ಸಂಬಳ ಕೊಡಲು ದುಡ್ಡಿಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ ಮಾತನಾಡಿ, ಪಶ್ಚಿಮ ಘಟ್ಟ, ಮಲೆನಾಡು ಬಿಕ್ಕಟ್ಟಿನತ್ತ ಸಾಗುತ್ತಿದೆ. ಬಡವರು, ರೈತರು ಅಸುರಕ್ಷಿತರಾಗಿದ್ದಾರೆ. ಯಾವಾಗ ಯಾವ ಯೋಜನೆ ಜಾರಿಯಾಗುತ್ತದೆ ಎಂಬ ಆತಂಕ ಕಾಡುತ್ತಿದೆ. ಮಲೆನಾಡಿನ ಶಾಸಕರು-ಸಂಸದರಿಗೆ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರು.
ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ಕಸ್ತೂರಿ ರಂಗನ್ ವರದಿ ರೈತರಿಗೆ ಮಾರಕವಾಗಿದೆ. ಬಿದರಗೋಡು ರಾಮಮಂದಿರದಿಂದ ಆರಂಭ ಮಾಡಿದ ಪಾದಯಾತ್ರೆ ತೀರ್ಥಹಳ್ಳಿ ರಾಮೇಶ್ವರನ ಕ್ಷೇತ್ರಕ್ಕೆ ಬಂದು ಅಂತ್ಯವಾಗಿದೆ. ಇದು ಇಲ್ಲಿಗೇ ನಿಲ್ಲುವುದಿಲ್ಲ. ಈ ಪಾದಯಾತ್ರೆ ಮನವಿ ಅರ್ಪಿಸುವುದಕ್ಕೆ ಮಾತ್ರ ಸೀಮಿತವಲ್ಲ. ಜನರನ್ನು ಜಾಗೃತಿಗೊಳಿಸುವಂತಹ ಹೋರಾಟ ಮತ್ತು ಮಾಹಿತಿ ಕೊಡುವ ಕಾರ್ಯಗಾರವಾಗಿತ್ತು. ಆ ದಿಸೆಯಲ್ಲೇ ಹೋರಾಟ ಮುಂದುವರಿಯುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ಲಾಭದಲ್ಲಿರುವುದು ನನ್ನ ತಪಸ್ಸು ಹಾಗೂ ಸಾಧನೆ. ರೈತರು, ಖಾಸಗಿ ಲೇವಾದೇವಿ ಹಾಗೂ ಮಂಡಿಗಳಿಗೆ ಹೋಗಬಾರದು ಎನ್ನುವ ಕಾರಣಕ್ಕೆ ಸಹಕಾರಿ ಕ್ಷೇತ್ರದಿಂದಲೇ ಸಾಲ ದೊರಕುವಂತೆ ಮಾಡಲು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಬೇಕೆಂದು ಕನಸು ಕಂಡೆ. ಹತ್ತು ವರ್ಷಗಳ ನಂತರ ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಲು ಸಾಧ್ಯವಾಯಿತು. ಅಂದು ಒಬ್ಬೊಬ್ಬ ರೈತನಿಗೆ ಐದು ಸಾವಿರ ರೂ. ಸಾಲ ನೀಡಲಾಗುತ್ತಿತ್ತು. ಅಂದು ಡಿಸಿಸಿ ಬ್ಯಾಂಕ್ 21 ಕೋಟಿ ಸಾಲವನ್ನು 6 ಸಾವಿರ ರೈತರಿಗೆ ನೀಡುತ್ತಿತ್ತು. ಇಂದು ನಾಲ್ಕು ಸಾವಿರ ಡಿಸಿಸಿ ಬ್ಯಾಂಕ್ ಗ್ರಾಹಕರಿದ್ದಾರೆ ಎಂದರು.
ಮಲೆನಾಡು ಥೈಲ್ಯಾಂಡ್ ಆಗಬಾರದು. ಮಲೆನಾಡು ಮಳೆನಾಡಾಗಿ ತೀರ್ಥಹಳ್ಳಿಯ ಅದ್ಭುತ ಸಂಸ್ಕೃತಿಯನ್ನು ಬೆಳೆಸುವಂತಾಗಬೇಕು. ಜೈ ಶ್ರೀರಾಮ್ ಎಂದ ಕೂಡಲೇ ಸಂಸ್ಕೃತಿಯಲ್ಲ. ಕೋಮುವಾದದ ಹೆಸರಿನಲ್ಲಿ ದೇಶ ಆಳುವ ದಿನ ಮುಗಿದು ಹೋಯಿತು ಎಂದರು.
ಸಮಾರೋಪ ಸಮಾರಂಭದಲ್ಲಿ, ಕಲ್ಕುಳಿ ವಿಠಲ ಹೆಗ್ಡೆ, ಹಿರಿಯ ಸಹಕಾರಿ ಎಚ್.ಎನ್. ವಿಜಯದೇವ್, ಪ್ರಗತಿಪರ ಹೋರಾಟಗಾರ ಕಲ್ಲಾಳ ಶ್ರೀಧರ್, ರಾಜ್ಯ ಜನಶಕ್ತಿ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್, ಎಪಿಎಂಸಿ ಅಧ್ಯಕ್ಷ ದುಗ್ಗಪ್ಪ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಸುಂದರೇಶ್ ಮತ್ತಿತರರು ಇದ್ದರು.
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.