ಭೂಪಟದಲ್ಲಿ ಪಾಕಿಸ್ತಾನ ಅಳಿಸಿ ಹೋಗಿ, ಅಖಂಡ ಭಾರತವಾಗುತ್ತದೆ: ಕೆ.ಎಸ್.ಈಶ್ವರಪ್ಪ
Team Udayavani, Dec 17, 2022, 3:03 PM IST
ಶಿವಮೊಗ್ಗ: ಆನೆ ಹೋಗುವ ಸಂದರ್ಭದಲ್ಲಿ ನಾಯಿಗಳು ಬೊಗಳುತ್ತವೆ. ನರೇಂದ್ರ ಮೋದಿ ದೊಡ್ಡ ಆನೆ. ಪಾಕಿಸ್ತಾನದ ಕುನ್ನಿಗಳು ಮಾತಾಡಿದರೆ.ಅವರ ಕೂದಲು ಕೂಡ ಅಲ್ಲಾಡಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಪಾಕಿಸ್ಥಾನಿ ಸಚಿವ ಬಿಲಾವಲ್ ಭುಟ್ಟೋ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಪ್ರತಿಭಟನೆ ಪಾಲ್ಗೊಂಡು ಅವರು ಮಾತನಾಡಿದರು.
ಜಗತ್ತೇ ಇಂದು ನರೇಂದ್ರ ಮೋದಿಯನ್ನು ವಿಶ್ವನಾಯಕ ಎಂದು ಒಪ್ಪಿಕೊಂಡಿದೆ. ಭುಟ್ಟೋ ಹೇಳಿಕೆಗೆ 135 ಕೋಟಿ ಜನರಿಗೂ ಆಕ್ರೋಶ ತಂದಿದೆ. ಪಾಕಿಸ್ತಾನದ ಪ್ರಧಾನಿ ಈಗಲೇ ಆ ಸಚಿವನಿಗೆ ಕ್ಷಮೆ ಕೇಳಲು ಸೂಚನೆ ನೀಡಬೇಕು. ಭಂಡರು ಕ್ಷಮೆ ಕೇಳಲ್ಲ, ಭಂಡತನವೇ ಅವರ ಜೀವನ. ಆ ಸಚಿವನ ಪರವಾಗಿ ಪಾಕಿಸ್ತಾನದ ಪ್ರಧಾನಿ ನರೇಂದ್ರ ಮೋದಿಯವರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಭಯೋತ್ಪಾದಕ ಬೆಳೆಸುವ ಕೇಂದ್ರ ಪಾಕಿಸ್ತಾನ. ಅದು ಅಲ್ಲಿನ ಮಾನಸಿಕತೆ. ಅದು ಬದಲಾವಣೆ ಅಗಲ್ಲ. ಪಾಕಿಸ್ತಾನದಲ್ಲಿದ್ದ ಹಿಂದುಗಳ ಹೊರ ಹಾಕಿ ಪಾಕಿಸ್ತಾನ ಹುಟ್ಟಿದೆ. ಪಾಕಿಸ್ತಾನ ಭೂಪಟದಲ್ಲಿ ಅಳಿಸಿ ಹೋಗಿ, ಅಖಂಡ ಭಾರತವಾಗುತ್ತದೆ. ಈ ಮೊದಲು ದೇಶದ ಸೈನಿಕರ ಮುಟ್ಟಿದರೆ ಕೇಳುವವರು ಇರಲಿಲ್ಲ. ಆದರೆ, ಈಗ ಹಾಗಿಲ್ಲ. ಎಲ್ಲವೂ ಬದಲಾಗಿದೆ. ಸೈನಿಕರಿಗೂ ಅಧಿಕಾರ ಕೊಡಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.