Nagamangala ಗಲಭೆಗೆ ಪಿಎಫ್ಐ,ಎಸ್‌ಡಿಪಿಐ ಕುಮ್ಮಕ್ಕು: ಈಶ್ವರಪ್ಪ
Team Udayavani, Sep 16, 2024, 7:53 PM IST
ಶಿವಮೊಗ್ಗ:ರಾಜ್ಯದಲ್ಲಿ ಗಣಪತಿ ಉತ್ಸವದ ಸಂದರ್ಭದಲ್ಲಿ ಅಲ್ಲಲ್ಲಿ ಗಲಭೆ ಉಂಟು ಮಾಡುವ ಕೆಲಸ ರಾಷ್ಟ್ರದ್ರೋಹಿ ಮುಸಲ್ಮಾನರು ಮಾಡುತ್ತಿದ್ದಾರೆ. ಇದಕ್ಕೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆ ಕಾರ್ಯಕರ್ತರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರಾಷ್ಟ್ರದ್ರೋಹಿ ಮುಸಲ್ಮಾನರು ಬೆಳೆಯುತ್ತಿದ್ದಾರೆ. ನಾಗಮಂಗಲದಲ್ಲಿ ನಡೆದ ಘಟನೆ ಎಲ್ಲರೂ ಗಮನಿಸಬೇಕು.
ಚೆಲುವರಾಯಸ್ವಾಮಿ ಮೊದಲು ಕಲ್ಲು ಹೊಡೆದವರು ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಪೆಟ್ರೋಲ್ ಬಾಂಬ್ ಹಾಗೂ ತಲ್ವಾರ್ ಹಿಂದೂ ಸಮಾಜ ಬಳಸಲ್ಲ. ಇದನ್ನು ಚೆಲುವರಾಯಸ್ವಾಮಿ ಗಮನಿಸಬೇಕು. ಕೇರಳದಿಂದ ಬಂದಿರುವ ರಾಷ್ಟ್ರದ್ರೋಹಿ ಮುಸಲ್ಮಾನರು ಈ ಕೆಲಸ ಮಾಡುತ್ತಿದ್ದಾರೆ.
ಎಲ್ಲಾ ಮುಸಲ್ಮಾನರು ಈ ರೀತಿ ಮಾಡಲ್ಲ. ಆದರೆ ರಾಷ್ಟ್ರದ್ರೋಹಿ ಮುಸಲ್ಮಾನರು ಈ ರೀತಿ ಮಾಡುತ್ತಿದ್ದಾರೆ. ಇದರಲ್ಲಿ ವಿದೇಶಿ ಸಂಚಿದೆ. ಇದನ್ನು ರಾಜ್ಯದ ನಾಯಕರು ಗಮನಿಸಬೇಕು. ಈಗಾಗಲೇ ಪ್ರಧಾನಿ ಇದನ್ನು ಖಂಡಿಸಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಅಯೋಧ್ಯೆ ರೀತಿ ವಕ್ಫ್ ಹಗರಣಕ್ಕೂ ನ್ಯಾಯ ಸಿಕ್ಕೇ ಸಿಗುತ್ತದೆ; ಈಶ್ವರಪ್ಪ
Renukaswamy Case: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್
Siruguppa: ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆಯ ಶವ ಪತ್ತೆ
Shimoga; ನಮ್ಮ ನಾಯಕರು ಗಮನ ಹರಿಸಲಿ: ಕುಮಾರ್ ಬಂಗಾರಪ್ಪ ಹೇಳಿಕೆಗೆ ರಾಘವೇಂದ್ರ ತಿರುಗೇಟು
Sagara: ಜೋಗ ಜಲಪಾತ ಪ್ರವೇಶಕ್ಕೆ ಮೂರು ತಿಂಗಳುಗಳ ಕಾಲ ನಿರ್ಬಂಧ
MUST WATCH
ಹೊಸ ಸೇರ್ಪಡೆ
Arecanut Growers: ಎರಡು ವರ್ಷಕ್ಕೊಮ್ಮೆ ಅಡಿಕೆ ಫಸಲು ಏರಿಳಿತ
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
Mangaluru: ಕರಾವಳಿ ಹೈನುಗಾರರ ಮನ ಗೆದ್ದ ಮನೆ ಬಾಗಿಲಿಗೆ ಪಶು ಸಂಜೀವಿನಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.