Election ಅಕ್ರಮ: ದಾಖಲೆಯಿಲ್ಲದ ಬರೋಬ್ಬರಿ 9.56 ಕೆಜಿ ಅಕ್ರಮ ಚಿನ್ನ ಪತ್ತೆ ಮಾಡಿದ ಪೊಲೀಸರು
Team Udayavani, Apr 11, 2023, 12:10 PM IST
ಶಿವಮೊಗ್ಗ: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿರುವ ಪೊಲೀಸರು ಶಿವಮೊಗ್ಗದಲ್ಲಿ ಭರ್ಜರಿ ಭೇಟೆಯಾಡಿದ್ದಾರೆ. ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಸೂಕ್ತ ದಾಖಲೆಗಳಿಲ್ಲದೇ ಸಂಗ್ರಹಿಸಿಟ್ಟಿದ್ದ 5.83 ಕೋಟಿ ಮೌಲ್ಯದ 9 ಕೆಜಿ 565 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗದ ಗಾಂಧಿ ಬಜಾರಿನ ಎಲೆರೇವಣ್ಣನ ಕೇರಿಯಲ್ಲಿರುವ ಸಿಲ್ವರ್ ಪ್ಯಾಲೇಸ್ ಎಂಬ ಹೆಸರಿನ ಚಿನ್ನದ ಅಂಗಡಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಲಕ್ಷ್ಮಣ್ ಕುಮಾರ್ ಎಂಬುವರಿಗೆ ಸೇರಿದ ಚಿನ್ನದ ಅಂಗಡಿಯಲ್ಲಿ ದಾಳಿ ಮಾಡಿ ಕೋಟ್ಯಾಂತರ ರೂ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸೂಚನೆಯಂತೆ ಕೋಟೆ ಪೊಲೀಸರ ದಾಳಿ ಮಾಡಿದ್ದಾರೆ.
ಭಾರೀ ಹಣ ಪತ್ತೆ: ಜಿಲ್ಲೆಯಲ್ಲಿ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದು, ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ನಲ್ಲಿ ಸುಮಾರು 30 ಲಕ್ಷದ 64 ಸಾವಿರ ವಶಪಡಿಸಿಕೊಂಡಿದ್ದಾರೆ. ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 27 ಲಕ್ಷದ 60 ಸಾವಿರ ರೂ ವಶ ಮಾಡಿದ್ದು,ಶಿಕಾರಿಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದ 1 ಲಕ್ಷದ 79 ಸಾವಿರ ರೂ., ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1 ಲಕ್ಷದ 25 ಸಾವಿರ ರೂ ವಶವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.