![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 16, 2023, 9:12 PM IST
ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆಗಿ ಎಂಟೂವರೆ ವರ್ಷದ ಬಾಲಕ ಅಧಿಕಾರ ಸ್ವೀಕರಿಸಿ ಎಲ್ಲರಿಗೂ ಹುಬ್ಬೇರುವಂತೆ ಮಾಡಿದ್ದಾನೆ. ನೇಮಕವಾದ ಕೆಲವೇ ನಿಮಿಷದಲ್ಲಿ ಖಡಕ್ ಆದೇಶ ನೀಡಿ ಸಿಬ್ಬಂದಿಗೆ ಅಲರ್ಟ್ ಮಾಡಿದ್ದಾನೆ.
ಇದು ರಿಯಲ್ ಕಥೆ ಅಲ್ಲದಿದ್ದರೂ ರೀಲ್ ಕೂಡ ಅಲ್ಲ. ದೊಡ್ಡಪೇಟೆ ಪೊಲೀಸ್ ಠಾಣೆ ಬುಧವಾರ ಸಂಜೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಎಂಟೂವರೆ ವರ್ಷದ ಬಾಲಕ ಆಜಾನ್ ಖಾನ್‌ಗೆ ಒಂದು ಗಂಟೆ ಕಾಲ ಇನ್ಸ್ಪೆಕ್ಟರ್ ಆಗುವ ಅವಕಾಶ ಸಿಕ್ಕಿತ್ತು. ಖುದ್ದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಇನ್ಸ್ ಪೆಕ್ಟರ್‌ಗೆ ಸ್ವಾಗತ ಮಾಡಿ ಅಧಿಕಾರ ವಹಿಸಿಕೊಟ್ಟರು. ಇನ್ಸ್ಪೆಕ್ಟರ್ ಖುರ್ಚಿಯಲ್ಲಿ ಕುಳಿತ ಕೂಡಲೇ ಸಿಬ್ಬಂದಿ ಆರೋಗ್ಯ ವಿಚಾರಿಸಿ ರಜೆ ಕೂಡ ಮಂಜೂರು ಮಾಡಿದ. ಕಳ್ಳರಿಗೆ ಆವಾಜ್ ಹಾಕಿ ಇನ್ಮುಂದೆ ಇಂತಹ ಕೆಲಸ ಮಾಡದಂತೆ ಸಲಹೆ ಕೂಡ ನೀಡಿದ.
ಶಿವಮೊಗ್ಗದ ಸೂಳೆಬೈಲು ವಾಸಿ ತಬ್ರೇಜ್ ಖಾನ್ ಅವರ ಪುತ್ರ ಆಜಾನ್ ಖಾನ್ ಎಂಬ ಬಾಲಕನಿಗೆ ಪೊಲೀಸ್ ಅಧಿಕಾರಿಯಾಗಬೇಕೆಂದು ಆಸೆ ಇತ್ತು. ಆದರೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನಿಗೆ ಪೋಷಕರ ಕೋರಿಗೆ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಒಂದು ಗಂಟೆ ಅಧಿಕಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದರು. ಪೊಲೀಸ್ ಸಮವಸ್ತ್ರದಲ್ಲಿ ಬಂದ ಬಾಲಕನಿಗೆ ಅದ್ಧೂರಿ ಸ್ವಾಗತ ನೀಡಿ ಪ್ರೀತಿ ತೋರಲಾಯಿತು.
ಎಎಸ್‌ಪಿ ಅನಿಲ್ ಕುಮಾರ್ ಭುಮರಡ್ಡಿ, ಡಿವೈಎಸ್‌ಪಿ ಬಾಲರಾಜ್, ಪ್ರಭು.ಡಿ.ಟಿ, ಇನ್ಸ್ಪೆಕ್ಟರ್ ಅಂಜನ್ ಕುಮಾರ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ
You seem to have an Ad Blocker on.
To continue reading, please turn it off or whitelist Udayavani.