ನಿಷೇಧದ ಬಳಿಕವೂ ಕಾರ್ಯಾಚರಣೆ; ಪಿಎಫ್ಐ, ಎಸ್ ಡಿಪಿಐ ಕಚೇರಿ ಮೇಲೆ ಪೊಲೀಸ್ ದಾಳಿ
Team Udayavani, Sep 29, 2022, 9:55 AM IST
ಶಿವಮೊಗ್ಗ/ಚಿಕ್ಕಮಗಳೂರು : ಕೇಂದ್ರ ಸರ್ಕಾರವು ಪಿಎಫ್ಐ ಹಾಗೂ ಅಂಗಸಂಸ್ಥೆಗಳ ಮೇಲೆ ನಿಷೇಧ ಹೇರಿದ ಬೆನ್ನೆಲ್ಲೆ ಶಿವಮೊಗ್ಗ ಪೊಲೀಸರ ತಂಡ ಮತ್ತೆ ಕಾರ್ಯಾಚರಣೆಗಿಳಿದಿದೆ. ಪಿಎಫ್ಐ ಮುಖಂಡರು, ಎಸ್ ಡಿಪಿಐ ಕಚೇರಿ ಮೇಲೆ ಶಿವಮೊಗ್ಗ ಪೊಲೀಸರ ತಂಡ ದಾಳಿ ಮಾಡಿದೆ.
ಪೊಲೀಸರು ಐದು ತಂಡ ಬುಧವಾರ ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿದೆ. ಕಂದಾಯ ಮತ್ತು ಇತರ ಇಲಾಖೆಯ ಅಧಿಕಾರಿಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ್ದು, ಪಿಎಫ್ಐ ಮುಖಂಡರ ಮನೆಗಳು ಸೇರಿದಂತೆ ಎಸ್ಡಿಪಿಐ ಕಚೇರಿಯಲ್ಲಿ ಪೊಲೀಸರು ಶೋಧ ಮಾಡಿದ್ದಾರೆ.
ಮನೆಗೆ ಬೀಗ ಹಾಕಿ ಪರಾರಿಯಾಗಿರುವ ಪಿಎಫ್ಐ ಮುಖಂಡರ ಮನೆಯಲ್ಲೂ ಶೋಧ ಮಾಡಲಾಗಿದ್ದು, ಜಿಲ್ಲಾಧಿಕಾರಿ ಅನುಮತಿ ಪಡೆದು, ಮನೆ ಲಾಕ್ ಒಡೆಯಲಾಗಿದೆ. ಪಿಎಫ್ಐ ಜಿಲ್ಲಾಧ್ಯಕ್ಷ ಉಬೇದುಲ್ಲಾ ಷರೀಫ್, ಮಾಜಿ ಅಧ್ಯಕ್ಷ ರಿಜ್ವಾನ್, ಸದಸ್ಯ ಫಾರುಖ್, ಎಸ್ ಡಿಪಿಐ ಮಾಜಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಸಮಿತಿ ಸದಸ್ಯ ಸಲೀಂ ಖಾನ್ ಮನೆ ಮೇಲೆ ಪೊಲೀಸರ ದಾಳಿ ಮಾಡಲಾಗಿದೆ.
ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿರುವ ಎಸ್ ಡಿಪಿಐ ಕಚೇರಿ ಮೇಲೂ ಪೊಲೀಸರು ದಾಳಿ ನಡೆಸಿ, ಕಚೇರಿಯನ್ನು ಸೀಜ್ ಮಾಡಿದ್ದಾರೆ.
ಇದನ್ನೂ ಓದಿ:ಗ್ಯಾಂಗ್‌ಸ್ಟಾಸ್ ಪ್ಯಾರಡೈಸ್ ಹಾಡು ಖ್ಯಾತಿಯ ಯುಎಸ್ ರಾಪರ್ ಕೂಲಿಯೊ ನಿಧನ
ದಾಳಿಯಲ್ಲಿ ಶಿವಮೊಗ್ಗ ತಹಶೀಲ್ದಾರ್ ನಾಗರಾಜ್, ಸ್ಮಾರ್ಟ್ ಸಿಟಿ ಕಮಿಷನರ್ ಚಿದಾನಂದ ವಟಾರೆ, ಸಿಮ್ಸ್ ಆಡಳಿತಾಧಿಕಾರಿ ಶಿವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಚಿಕ್ಕಮಗಳೂರಿನಲ್ಲೂ ದಾಳಿ: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲೂ ನಿಷೇಧಿತ ಪಿಎಫ್ಐ ಹಾಗೂ ಎಸ್ ಡಿಪಿಐ ಕಾರ್ಯಕರ್ತರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಜಿಲ್ಲಾಧಿಕಾರಿಗಳ ಸರ್ಚ್ ವಾರೆಂಟ್ ಆದೇಶದ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಆಲ್ದೂರಿನ ವಗಾರ್ ರಸ್ತೆಯಲ್ಲಿ ಆರೀಫ್ ಮನೆ, ಚಿಕ್ಕಮಗಳೂರು ವಿಜಯಪುರದಲ್ಲಿ ನಿಷೇಧಿತ ಪಿಎಫ್ ಐ ಜಿಲ್ಲಾಧ್ಯಕ್ಷ ಚಾಂದ್ ಬಾಷಾ ಮನೆ, ಎಸ್ ಡಿಪಿಐ ಜಿಲ್ಲಾಧ್ಯಕ್ಷ ಗೌಸ್ ಮುನೀರ್ ಮನೆಗಳ ಮೇಲೆ ದಾಳಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಬೀದಿನಾಯಿ ಅಡ್ಡಬಂದು ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Chikkamagaluru: ಮಳೆಯ ನಡುವೆಯೂ ಬೆಟ್ಟ ಹತ್ತಿ ದೇವಿರಮ್ಮನ ದರ್ಶನ ಪಡೆದ ಸಾವಿರಾರು ಭಕ್ತರು
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ
Kottigehara: ಔಷಧಿ ಸಿಂಪಡಣೆ ವೇಳೆ ದೋಟಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ್ಯು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.